Ticker

6/recent/ticker-posts

Ad Code

Responsive Advertisement

44ನೇ ಚಾತುರ್ಮಾಸ ವೃತವನ್ನು ಯಶಸ್ವಿಯಾಗಿ ಪೂರೈಸಿದ ಶ್ರೀಗಳು

ಮಲ್ಲೇಶ್ವರಂ ನಲ್ಲಿರುವ ಶ್ರೀಫಲಿಮಾರು ಮಠದಲ್ಲಿ ಶ್ರೀ.ಶ್ರೀ.ಶ್ರೀ. ವಿದ್ಯಾಧೀಶ ತೀರ್ಥ ಶ್ರೀಪಾದಂ ಗಳವರನ್ನು ಭೇಟಿಯಾಗಿ ಆಶೀರ್ವಾದ ಪಡೆದರು. ಈ ಬಾರೀಯ 44ನೇ ಚಾತುರ್ಮಾಸ ವೃತವನ್ನು ಯಶಸ್ವಿಯಾಗಿ ಪೂರೈಸಿದ ಶ್ರೀಗಳು ಇಂದು ನಡೆಸಿದ ವಿಶೇಷ ಪೂಜೆಯಲ್ಲಿ ಶ್ರೀ ಆನಂದ ಗುರೂಜಿಗಳು ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಮಠದ ಸಾರ್ವಜನಿಕ ಸಂಪರ್ಕಾಧಿಕಾರಿಗಳಾದ ಶ್ರೀಶಾ ಭಟ್, ಶ್ರೀನಿವಾಸ ಶರ್ಮ ಹಾಗೂ ಮಠದ ಭಕ್ತರು ಉಪಸ್ಥಿತರಿದ್ದರು.


ಇದೇ ಸಂದರ್ಭದಲ್ಲಿ ಶ್ರೀ ಶ್ರೀ ಶ್ರೀ ವಿದ್ಯಾಧೀಶತೀರ್ಥ ಶ್ರೀ ಪಾದರು ಮಾತನಾಡಿ ನೀರು ಕಲುಷಿತವಾದರೆ ಕುಡಿಯಲು ಬರುವುದಿಲ್ಲ, ಮನುಷ್ಯ ಮನಸ್ಸು ಮತ್ತು ಆತ್ಮ ಕೆಟ್ಟ ಅಲೋಚನೆ,ಕೋಪ, ತಾಪವಿದ್ದರೆ ಸಾಧನೆ ಮಾಡಲು ಸಾಧ್ಯವಿಲ್ಲ.

ಸರ್ವೆ ಜನಾಃ ಸುಖಿನೊ ಭವಂತು ಎಂಬಂತೆ ಎಲ್ಲರು ಜನರ ಹಿತಕಾಯುವ ಮನಸ್ಸುವುಳ್ಳರಾಗಿಬೇಕು.

ನಾನು ಎಂಬ ಅಹಂ ಬೀಡಬೇಕು ,ನಾವು ಎಂಬ ಭಾವನೆ ಬೆಳಸಿಕೊಳ್ಳಬೇಕು.

ಶ್ರೀ ಕೃಷ್ಣ,ಶ್ರೀ ರಾಮನಾ ಅನುಗ್ರಹ ಎಲ್ಲರಿಗೂ ಲಭಿಸಲಿ.

ಈ ಬಾರಿಯ ಬೆಂಗಳೂರಿನಲ್ಲಿ 44ನೇ ಚಾತುರ್ಮಾಸ್ಯ ಅತ್ಯಂತ ಯಶ್ವಸಿಯಾಗಿ ನಡೆಯಿತು ,10ನೇ ಇದೇ ತಿಂಗಳು ಚನೈ ನಗರದಲ್ಲಿ ಪ್ರವಚನ ಕಾರ್ಯಕ್ರಮ ತೆರಳುತ್ತಿದ್ದೇವೆ.

ಶ್ರೀ ಪಲಿಮಾರು ಮಠದ ಭಕ್ತರಿಗೂ ಸಮಸ್ತ ನಾಡಿನ ಜನತೆಗೆ ಒಳ್ಳೆಯದಾಗಲಿ, ಸಕಲ ಸಂಕಷ್ಟಗಳು ನಿವಾರಣೆಯಾಗಲಿ ಎಂದು ಶ್ರೀರಾಮನಲ್ಲಿ ಪ್ರಾರ್ಥಿಸುತ್ತೇನೆ ಎಂದು ಹೇಳಿದರು.

Post a Comment

0 Comments

Ad Code

Responsive Advertisement