Ticker

6/recent/ticker-posts

Ad Code

Responsive Advertisement

ಕರ್ನಾಟಕ ಸಂಘ ಕತಾರ್ ವತಿಯಿಂದ ಆಜಾದಿ ಕಾ ಅಮೃತ್ ಮಹೋತ್ಸವ: ಸಂಗೀತ ಕಾರ್ಯಕ್ರಮದ


ಭಾರತೀಯ ಸಾಂಸ್ಕೃತಿಕ ಕೇಂದ್ರ, ಕತಾರ್ ನಡೆಸುತ್ತಿರುವ "ಆಜಾದಿ ಕಾ ಅಮೃತ್ ಮಹೋತ್ಸವ"ದ ಆಚರಣೆಯ ಅಂಗವಾಗಿ, ಕರ್ನಾಟಕ ಸಂಘ ಕತಾರ್ ಆಗಸ್ಟ್ ೪ ೨೦೨೨ ರಂದು ಶಾಸ್ತ್ರೀಯ ನೃತ್ಯ  ಹಾಗೂ ಗಾಯನ ಸಂಗೀತ ಆಯೋಜಿಸಿತು. 
ಕಾರ್ಯಕ್ರಮವು ನೆರೆದಿದ್ದ ಭಾರತೀಯ ಸಮುದಾಯದ ಪ್ರೇಕ್ಷಕರಿಂದ ಮೆಚ್ಚುಗೆ ಪಡೆಯಿತು. ಶ್ರೀಮತಿ ಸಂಜನ್ ಜೀವನ್ ಅವರ ಶಾಸ್ತ್ರೀಯ ನೃತ್ಯದೊಂದಿಗೆ ಪ್ರಾರಂಭವಾಯಿತು. ಕಾರ್ಯಕ್ರಮದಲ್ಲಿ  ಕನ್ನಡ, ಹಿಂದಿ, ತುಳು ಮತ್ತು ಕೊಂಕಣಿ ಭಾಷೆಗಳ ಸುಮಧುರ, ದೇಶಭಕ್ತಿಯ ಸೂಪರ್ ಹಿಟ್ ಹಾಡುಗಳನ್ನು ಕರ್ನಾಟಕ ಮೂಲದ ಪ್ರಸಿದ್ಧ ಸ್ಥಳೀಯ ಗಾಯಕರು ಶ್ರೀ ಅನಿಲ್ ಭಾಸಗಿ, ಶ್ರೀ ತುಫೈಲ್, ಶ್ರೀಮತಿ ಲಾವಣ್ಯ ಆಚಾರ್ಯ, ಶ್ರೀ ಸಾಗರ್ ಕೋಟ್ಯಾನ್, ಶ್ರೀಮತಿ ಅಕ್ಷಯ ಶೆಟ್ಟಿ, ಶ್ರೀಮತಿ ದಿವ್ಯಾ, ಶ್ರೀ ರಂಜಿತ್, ಶ್ರೀ ಸಂತೋಷ್, ಶ್ರೀಮತಿ ನವ್ಯಾ ಶೆಟ್ಟಿ, ಶ್ರೀಮತಿ ಕರೋಲ್ ಡಿಸೋಜಾ ಮತ್ತು ಶ್ರೀ ಅಬ್ದುಲ್ಲಾ ಮೋನು ಅವರುಗಳ ತಮ್ಮ ಹಾಡುಗಳೊಂದಿಗೆ ಅವರು ಅದ್ಭುತ ಪ್ರದರ್ಶನ ಪ್ರೇಕ್ಷಕರ ಮನ ಸೆಳೆದರು. ಕರ್ನಾಟಕ ಸಂಘದ ಜಂಟಿ ಸಾಂಸ್ಕೃತಿಕ ಕಾರ್ಯದರ್ಶಿ ಶ್ರೀ ಮಂಜೋತ್ ಕಾರ್ಯಕ್ರಮ ನಿರೂಪಿಸಿದರು.

ಸ್ವಾಗತ ಭಾಷಣದಲ್ಲಿ ಕರ್ನಾಟಕ ಸಂಘದ ಅಧ್ಯಕ್ಷ  ಮಹೇಶ್ ಗೌಡ ಅವರು ಕಾರ್ಯಕ್ರಮ ನಡೆಸಲು ವೇದಿಕೆ ನೀಡಿದ ಭಾರತೀಯ ಸಾಂಸ್ಕೃತಿಕ ಕೇಂದ್ರಕ್ಕೆ ಧನ್ಯವಾದ ಅರ್ಪಿಸಿದರು. ಕಾರ್ಯಕ್ರಮದ ಮುಖ್ಯ ಭಾಷಣದಲ್ಲಿ ಭಾರತೀಯ ಸಾಂಸ್ಕೃತಿಕ ಕೇಂದ್ರದ ಅಧ್ಯಕ್ಷ  ಪಿ.ಎನ್.ಬಾಬುರಾಜನ್ ಅವರು ಈ ವರ್ಷವಿಡೀ ನಡೆಯುತ್ತಿರುವ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಕರ್ನಾಟಕ ಸಂಘದ ಕೊಡುಗೆಗಳನ್ನು ಶ್ಲಾಘಿಸಿದರು. ಭಾರತೀಯ ಸಾಂಸ್ಕೃತಿಕ ಕೇಂದ್ರದ ಉಪಾಧ್ಯಕ್ಷರಾದ ಶ್ರೀ ಸುಬ್ರಮಣ್ಯ ಹೆಬ್ಬಾಗಿಲು ಅವರು ಮಾತನಾಡಿ, ಕರ್ನಾಟಕ ಸಂಘದ ಅಧ್ಯಕ್ಷರು ಶ್ರೀ ಮಹೇಶ್ ಗೌಡ ಅವರ ಸಮರ್ಥ ನಾಯಕತ್ವದಲ್ಲಿ ಸಂಘವು ಅದ್ಭುತ ಕಾರ್ಯಕ್ರಮಗಳನ್ನು ಆಯೋಜಿಸುತ್ತಿರುವುದು ಕತಾರ್ ನಲ್ಲಿ ನೆಲೆಸಿರುವ ಕನ್ನಡಿಗರಿಗೆ ಸಂತಸದ ವಿಷಯ ಹಾಗೂ ಈ ಕಾರ್ಯಕ್ರಮಗಳು ರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಳ್ಳುತ್ತಿರುವುದು ಹೆಮ್ಮೆಯ ವಿಷಯವೆಂದು ತಿಳಿಸಿದರು. ೧೯ ಆಗಸ್ಟ್ ೨೦೨೨ ರಂದು ಬೃಹತ್ ಕಾರ್ಯಕ್ರಮದೊಂದಿಗೆ ತೆರೆ ಕಾಣಲಿರುವ ಈ ಆಚರಣೆಯಲ್ಲಿ ಇದು ನಾಲ್ಕನೇ ದಿನದ ಕಾರ್ಯಕ್ರಮವಾಗಿತ್ತು.








Doha: Karnataka Sanga hosts a musical night as part of Azadi Ka Amrith Mohatsav mega celebrations in Qatar.
As a part of mega celebrations of Azadi Ka Amrith Mohatsav in Qatar by Indian Cultural Center, a Musical night with vocal music and classical dance recitals was held at Indian Cultural Center hosted on 4th August 20222 by Karnataka Sangha Qatar was a grand success which was enjoyed and appreciated by a massive audience of the Indian community. Program was started with a welcome classical dance performed by Sanjan Jeevan. Melodious, patriotic super hits songs from Kannada, Hindi, Tulu and Konkani were sung by well known local singers originating from Karnataka. The vocal singers lead and co-ordinated by Anil Bhasagi, Mr. Tufail, Mrs. Lavanya Acharya, Mr. Sagar Kotian, Mrs. Akshaya Shetty, Mrs. Divya, Mr. Ranjith, Mr. Santosh, Mrs. Navya Shetty, Mrs Carol Dsouza and Mr. Abdullah Monu rocked the stage. Program was compered by Mr. Manjoth, Joint cultural secretary – Karnataka Sangha. During the welcome speech President of Karnataka Sangha thanked ICC for giving the platform in the celebrations of Indian Independence. During the keynote address chief guest of the event Mr. PN Baburajan, president, Indian Cultural Center applauded the contributions of Karnataka sangha in cultural events during the year long celebrations. Mr. Subramanaya Hebbagelu said “it a proud moment for all the Kannadigas in Qatar that Karnataka Sangha is able to give back-to-back super hit programs under the able leadership of new president Mahesh Gowda, which has given a well recognitions and reachout in the national level in the recent times. This program was the 4th day event of a series of everyday celebrations, with a grand finale which was to be held on 19th Aug 2022.

Post a Comment

0 Comments

Ad Code

Responsive Advertisement