ವಾರ್ತಾ ಜಾಲ ಸುದ್ದಿ : ಮಧುಗಿರಿ :ಪಟ್ಟಣದ 19ವಾರ್ಡ್ ನಲ್ಲಿ ಈ ನಾಲ್ಕು ದಿನಗಳ ಮುಂಚೆ ಶಾಸಕ ಎಂ.ವಿ ವೀರಭದ್ರಯ್ಯ ರವರು ಸುಮಾರು ಎಂಟು ಲಕ್ಷ ವೆಚ್ಚದ ಶುದ್ಧ ಕುಡಿಯುವ ನೀರಿನ ಘಟಕವನ್ನು ಉದ್ಘಾಟಿಸಿದ್ದರು. ಆದರೆ ಕೆಲವೂಬ್ಬರ ಅಧಿಕಾರಿಗಳ ನಿರ್ಲಕ್ಷತನದಿಂದ ಈ ಶುದ್ಧ ಕುಡಿಯುವ ನೀರಿನ ಹಾಳಾಗಿದ್ದು ಘಟಕವನ್ನು ಸರಿಯಾಗಿ ನೋಡಿಕೊಳ್ಳುವವರು ಕೂಡ ಇಲ್ಲದ ಕಾರಣ ಸುತ್ತಮುತ್ತ ನಿಂತಿರುವ ಕೊಳಚೆ ನೀರು ಸಂಪ್ಪಿಗೆ ಬಂದು ಸೇರಿ ಅದೇ ನೀರು ಶುದ್ದಿಯಾಗಿ ಬರುತ್ತದೆ. ಈ ನೀರು ಕುಡಿಯಲು ಯೋಗ್ಯವಲ್ಲದ ಕಾರಣ ಸಾರ್ವಜನಿಕರು ಯಾರು ಕೂಡ ಆ ನೀರನ್ನು ಕುಡಿಯುತ್ತಿಲ್ಲ. ಇದನ್ನು ಮನಗಂಡ ಕನ್ನಡ ಜಾಗೃತಿ ವೇದಿಕೆಯ ಪದಾಧಿಕಾರಿಗಳು ಸ್ಥಳಕ್ಕೆ ಹೋಗಿ ಸ್ವತಹ ತಾವೇ ಈ ನೀರನ್ನು ಕುಡಿದು ಪರೀಕ್ಷಿಸಿದಾಗ ನೀರು ಅಶುದ್ದಿಯಾಗಿ ಬರುವುದು ಕಂಡುಬಂದಿದೆ.
ಈ ವೇಳೆಯಲ್ಲಿ ಕ.ಜಾ.ವೇ ಉಪಾಧ್ಯಕ್ಷ ಪ್ರಸಾದ್.ಆಟೋ ಚಾಲಕರ ಘಟಕ. ಅಧ್ಯಕ್ಷ ಹರೀಶ್.ನಗರ ಕಾರ್ಯದರ್ಶಿ ಪ್ರದೀಪ್.ಹಾಗೂ ರಾಜಣ್ಣ.ವಿಜಯಕುಮಾರ್ ಮತ್ತಿತರರಿದ್ದರು.
-ವರದಿ:ನಾಗೇಶ್ ಜೀವಾ ಮಧುಗಿರಿ.


0 Comments