ಬೆಂಗಳೂರು : ನಮ್ಮ ಹೆಮ್ಮೆಯ ಭಾರತ ದೇಶವು ಈ ಬಾರಿ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವವನ್ನು ಆಚರಿಸುತ್ತಿರುವ ಈ ಶುಭ ಸಂದರ್ಭದಲ್ಲಿ, ಮಾನ್ಯ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಕರೆಕೊಟ್ಟಿರುವ ಮೇರೆಗೆ, ರಾಜರಾಜೇಶ್ವರಿ ವಿಧಾನ ಸಭಾ ಕ್ಷೇತ್ರದ ಶಾಸಕರು ಹಾಗೂ ರಾಜ್ಯ ತೋಟಗಾರಿಕೆ ಸಚಿವರು ಆಗಿರುವ ಮುನಿರತ್ನರವರು ಜೆ.ಪಿ.ಪಾರ್ಕ್ ವಾರ್ಡ್ ನ ಚೌಡೇಶ್ವರಿ ಬಸ್ ನಿಲ್ದಾಣದ ಬಳಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ 'ಮನೆ ಮನೆಗೂ ತ್ರಿವರ್ಣ ಧ್ವಜ ವಿತರಣಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಬಿಜೆಪಿ ಪಕ್ಷದ ಮುಖಂಡರಾದ ಶ್ರೀಮತಿ ಸುನಂದ ಕೆ. ಬೋರೇಗೌಡ, ಶ್ರೀ ಧನಲಕ್ಷ್ಮೀ ಕನ್ಸ್ಟ್ರಟ್ರಕ್ಷನ್ ನ ಮಾಲೀಕರು, ಸಮಾಜ ಸೇವಕರು, ಬಿಜೆಪಿ ನಾಯಕರು ಆಗಿರುವ ಎಸ್. ರಮೇಶ್ ರವರು ಹಾಗೂ ವಾರ್ಡಿನ ಬಿಜೆಪಿ ಕಾರ್ಯಕರ್ತರುಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.



0 Comments