Ticker

6/recent/ticker-posts

Ad Code

Responsive Advertisement

ಜಯಮಂಗಲಿ ನದಿಯ ರುದ್ರ ನರ್ತನ : ಶೋಚನೀಯ ಸ್ಥಿತಿಯಲ್ಲಿ ಜನತೆ

ವಾರ್ತಾಜಾಲ ಸುದ್ದಿ ಮಧುಗಿರಿ:ತಾಲೂಕಿನಾದ್ಯಂತ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿದ್ದು ವರುಣನ ರೌದ್ರಾವತಾರಕ್ಕೆ ಜನತೆ ಕಂಗಾಲಾಗಿದ್ದಾರೆ. ದಿಕ್ಕೆ ಕಾಣದ ಸ್ಥಿತಿಯಲ್ಲಿ ಪುರವರ ಹೋಬಳಿಯ ಕೊಡಗದಾಲ ಮಜಾರೆ ವ್ಯಾಪ್ತಿಯ ಚನ್ನಸಾಗರ ಮತ್ತು ಇಮ್ಮಡಗೊಂಡನಹಳ್ಳಿ,  ನಂಜಾಪುರ, ಗಿಡ್ಡಯ್ಯನಪಾಳ್ಯ, ಹಾಗೂ ಕೊಡಿಗೇನಹಳ್ಳಿ ಹೋಬಳಿಯ ಸೂರನಾಗೇನಹಳ್ಳಿ ರೆಡ್ಡಿಯಲ್ಲಿ ಇನ್ನು ಮುಂತಾದ ಗ್ರಾಮಗಳು  ನೀರಲ್ಲಿ ಸಂಪೂರ್ಣವಾಗಿ ಮುಳುಗಡೆಯಾಗಿದೆ. ಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ತಗ್ಗು ಪ್ರದೇಶಗಳಲ್ಲಿರುವ ಈ ಗ್ರಾಮಗಳು ಪೂರ್ಣಪ್ರಮಾಣದಲ್ಲಿ ಜಲಾವೃತಗೊಂಡಿವೆ. ಹಿಂದೆಂದೂ ಊಹಿಸದಂತಹ ಭಾರಿ ಮಳೆಯಿಂದಾಗಿ ಸಾರ್ವಜನಿಕರಲ್ಲಿ ಭಯದ ವಾತಾವರಣ ಮೂಡಿಸಿದೆ. ಜನಜೀವನ ಸಂಪೂರ್ಣವಾಗಿ ಅಸ್ತವ್ಯಸ್ತಗೊಂಡಿದ್ದು ಜನತೆ ಕಂಗಾಲಾಗಿದ್ದಾರೆ ಜಯಮಂಗಲಿ ನದಿಯು ರೌದ್ರಾವತಾರದಿಂದ ತುಂಬಿ ಹರಿಯುತ್ತಿರುವುದೆ. ಜನತೆ ಹೊರಬರಲಾರದೆ ತತ್ತರಿಸುತ್ತಿರುವ ಈ ಸಮಯದಲ್ಲಿ ಸ್ಥಳಕ್ಕೆ ಭೇಟಿ ನೀಡಿದ ಜಿಲ್ಲಾಧಿಕಾರಿಗಳಾದ ವೈ ಎಸ್ ಪಟೇಲ್  ಅವರು ಗ್ರಾಮದಿಂದ ನೀರು ಹೊರ ಹೋಗಲು ಜೆಸಿಬಿ ಗಳ ಮುಖಾಂತರ ಕಾಲುವೆಗಳನ್ನು ಮಾಡಿ ನೀರನ್ನು ಹೊರ ಹಾಕುವ ವ್ಯವಸ್ಥೆ ಮಾಡಿದರು. ಹಾಗೆಯೇ ನದಿಯ ದಡದ ಮೇಲೆ ವಾಸ ಮಾಡುವ ಕುಟುಂಬಗಳಿಗೆ ಎಚ್ಚರದಿಂದ ಇರಲು ಸೂಚನೆಗಳನ್ನು ನೀಡಿದರು. ಜೊತೆಗೆ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಹಾಗೂ ಗ್ರಾಮಸ್ಥರಿಗೆ  ಹೊರ ಬರಲು ತೊಂದರೆಗಳಾಗುತ್ತಿದ್ದು ತಕ್ಷಣ ಅಗತ್ಯ ಕ್ರಮಗಳನ್ನು ಕೈಗೊಳ್ಳಲು ತಾಲೂಕು ಆಡಳಿತಕ್ಕೆ ಸೂಚನೆಯನ್ನು ನೀಡಿದರು.





ಗ್ರಾಮಸ್ಥರು ಮಾತನಾಡಿ ಎಲ್ಲ ರೀತಿಯ ದವಸಧಾನ್ಯಗಳು,  ಬೆಲೆ ಬಾಳುವ ವಸ್ತುಗಳೆಲ್ಲ ನೀರು ಪಾಲಾಗಿದ್ದು ಊಟಕ್ಕೂ ಪರದಾಡುವ ಸ್ಥಿತಿ ಏರ್ಪಟ್ಟಿದೆ ಹಗಲಿನಲ್ಲಿ ಸ್ವಲ್ಪ ಬಿಡುವು ಕೊಟ್ಟು ರಾತ್ರಿ ಪಾಳಿಯಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ತಗ್ಗು ಪ್ರದೇಶದಲ್ಲಿರುವ ಗ್ರಾಮಗಳು ಸಂಪೂರ್ಣವಾಗಿ ಜಲಾವೃತಗೊಂಡಿದೆ ಇದರಿಂದಾಗಿ ಹೊರಬರಲಾರದೆ ಜನತೆ ನೀರಿನ ಮಡುವಿನಲ್ಲಿ ಸಿಲುಕಿಕೊಂಡಿರುವ ಘಟನೆ ಸಂಭವಿಸಿದೆ ತಕ್ಷಣ ಇಲ್ಲಿ ಸಿಲುಕಿಕೊಂಡಿರುವ ಗ್ರಾಮಸ್ಥರಿಗೆ ಇರಲು ವ್ಯವಸ್ಥೆಯನ್ನು ಮಾಡಿಕೊಡಿ ಎಂದು ಈ ಮೂಲಕ ತಿಳಿಸಿದ್ದಾರೆ ಸ್ಥಳಕ್ಕೆ ಆಗಮಿಸಿದ ಉಪ ವಿಭಾಗ ಅಧಿಕಾರಿಯಾದ ಸೋಮಪ್ಪ ಕಡೆಕೋಳ, ತಾಲೂಕು ದಂಡಾಧಿಕಾರಿಗಳಾದ ಸುರೇಶ ಚಾರ್, ಅಗ್ನಿಶಾಮಕದಳದ ಸಹಾಯದೊಂದಿಗೆ ಹಗ್ಗಗಳನ್ನು ಕಟ್ಟಿ ಜನತೆಯನ್ನು ಹೊರಗೆ ಕರೆತರಲಾಯಿತು, ಕೊಡಗದಲ ಮಜರೆ ಬಳಿಯ ಚನ್ನ ಸಾಗರದ ಸುಮಾರು ಇನ್ನೂರಕ್ಕೂ ಹೆಚ್ಚು ಮನೆಗಳು ಸಂಪೂರ್ಣವಾಗಿ ಜಲಾವೃತಗೊಂಡಿದೆ ಇದರಿಂದಾಗಿ ಮನೆಯಲ್ಲಿ ನೀರು ಅವರಿಸಿ ಕೊಂಡಿದ್ದು ವಾಸಿಸಲು ಯೋಗ್ಯವಲ್ಲದ ಪರಿಸ್ಥಿತಿ ನಿರ್ಮಾಣಗೊಂಡಿದೆ.

 ಈ ನೀರನ್ನು ನೋಡಿ ಶಾಲಾ ಮಕ್ಕಳು ಮತ್ತು ವೃದ್ಧರು ಯೋಚಿಸುತ್ತ ಕುಳಿತಿರುವ ಸ್ಥಿತಿ ಶೋಚನೀಯವಾಗಿದೆ ಜಯಮಂಗಲಿ ನದಿಯು ತುಂಬಾ ವರ್ಷಗಳಿಗೊಮ್ಮೆ ತುಂಬಿಹರಿಯುವ ನದಿಯಾಗಿದ್ದು ಈ ವರ್ಷವೇ ಹೆಚ್ಚಿನ ಪ್ರಮಾಣದಲ್ಲಿ ಹರಿಯುತ್ತಿರುವುದರಿಂದ ನದಿ ಪಾತ್ರದಲ್ಲಿರುವ ಹಳ್ಳಿಗಳು ನೀರಿನಿಂದ ಜಲಾವೃತವಾಗಿ ಸಾರ್ವಜನಿಕರನ್ನು ಹಿಂಸಿಸುತ್ತಿದೆ ಇಂತಹ ಸಂದರ್ಭದಲ್ಲಿ ಅಧಿಕಾರಿಗಳು ಜೆಸಿಪಿ ಗಳನ್ನು ಕಳಿಸಿ ನೀರು ಹೋಗಲು ದಾರಿಗಳನ್ನು ಮಾಡಿ ಹೆಚ್ಚಿನ ಪ್ರಮಾಣದ ನೀರನ್ನು ಹೊರಗೆ ಬಿಡುತ್ತಿದ್ದಾರೆ ನೀರಿನ ಹರಿವು ಕಡಿಮೆಯಾಗುತ್ತಿದೆ ಎಂದು ಉಪವಿಭಾಗಾಧಿಕಾರಿ ಸೋಮಪ್ಪ ಕಡೆಕೊಳ ಹಾಗೂ ತಾಲೂಕು ದಂಡಾಧಿಕಾರಿ ಸುರೇಶಚಾರ್ ಈ ಸಮಯದಲ್ಲಿ ಹೇಳಿದರು ಪ್ರಾಣಾಪಾಯದ ಸ್ಥಿತಿಯಲ್ಲಿರುವ ಜನರನ್ನು ಪಾರು ಮಾಡಬೇಕಾಗಿರುವುದು ಸರ್ಕಾರದ ಕರ್ತವ್ಯವಾಗಿದೆ ಮಳೆಯಿಂದಾದ ಅವಘಡವನ್ನು ವೀಕ್ಷಿಸಿ...

ಸ್ಥಳಕ್ಕೆ ಜಿಲ್ಲಾ ವರಿಷ್ಠಾಧಿಕಾರಿ ರಾಹುಲ್ ಕುಮಾರ್ ಶಾಪುರ್, ವಿಶೇಷ ಜಿಲ್ಲಾಧಿಕಾರಿ ಚನ್ನಬಸಪ್ಪ, ಜಿಲ್ಲಾ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಿಧ್ಯಾಕುಮಾರಿ, ಇಓ ಲಕ್ಷ್ಮಣ್, ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಹಾಗೂ ಕಂದಾಯ ಇಲಾಖೆಯ ಸಹಕಾರದೊಂದಿಗೆ , ಜನಗಳ ಪ್ರಾಣ ಅಪಾಯದಿಂದ ಕರೆ ತಂದರು.

ವರದಿ:ನಾಗೇಶ್ ಜೀವಾ ಮಧುಗಿರಿ. ವಾರ್ತಾ ಜಾಲ.

Post a Comment

0 Comments

Ad Code

Responsive Advertisement