Ticker

6/recent/ticker-posts

Ad Code

Responsive Advertisement

ವರುಣನ ಆರ್ಭಟಕ್ಕೆ ಕೊಚ್ಚಿ ಹೋದ ಹನುಮಂತಪುರ ಗ್ರಾಮದ ನಿವಾಸಿ; ಸ್ಥಳಕ್ಕೆ ದಿಡೀರ್ ಭೇಟಿ ನೀಡಿದ ತಹಶೀಲ್ದಾರ್ ಸುರೇಶಚಾರ್

ವರುಣನ ಆರ್ಭಟಕ್ಕೆ ಕೊಚ್ಚಿ ಹೋದ ಹನುಮಂತಪುರ ಗ್ರಾಮದ ನಿವಾಸಿ

ಕೊಚ್ಚಿ ಹೋದ ಸ್ಥಳಕ್ಕೆ ದಿಡೀರ್ ಭೇಟಿ ನೀಡಿದ ತಹಶೀಲ್ದಾರ್ ಸುರೇಶಚಾರ್



ಮಧುಗಿರಿ: ತಾಲೂಕಿನ ಮಿಡಿಗೇಶಿ ಹೋಬಳಿಯ ಹನುಮಂತಪುರ ಗ್ರಾಮದ ನಿವಾಸಿಯಾದ ಸುಮಾರು 64 ವರ್ಷ ವಯಸ್ಸುಳ್ಳ ದ್ಯಾವಪ್ಪ ಬಿನ್ ನರಸಿಂಹಯ್ಯ ಎಂಬುವರು ದಿನನಿತ್ಯದಂತೆ ಹೊಲದಲ್ಲಿ ಕೆಲಸ ಮಾಡಲು ಹೋಗಿದ್ದರು. ಕೆಲಸ ಮುಗಿಸಿಕೊಂಡು ಮನೆಗೆ ವಾಪಸ್ ತೆರಳಿ ಬರುವ ಸಂದರ್ಭದಲ್ಲಿ ವರುಣ ಆರ್ಭಟ ಹೆಚ್ಚಿದ್ದ  ಕಾರಣ ಹನುಮಂತಪುರ ಕೆರೆಯ ಕೋಡಿ ನೀರು ಮತ್ತು ಊರಿನಲ್ಲಿ ಹರಿಯುವ ನೀರು, ಎರಡು ಕೂಡ ಕಾಲುವೆಗೆ ಬಂದು ರಭಸವಾಗಿ ಹರಿದು ಹೋಗುತ್ತಿದ್ದ ಕಾರಣ

ಸಂಜೆ ಸುಮಾರು 7:00 ಗಂಟೆ ಸಮಯದಲ್ಲಿ ದ್ಯಾವಪ್ಪ ಎಂಬುವರು ಹರಿಯುವ ನೀರಿಗೆ ಸಿಲುಕಿಕೊಂಡು ಕಾಲುವೆಯಲ್ಲಿ ಕೊಚ್ಚಿಕೊಂಡು ಹೋಗಿರುತ್ತಾರೆ. ವರುಣನ ಆರ್ಭಟ ರಾತ್ರಿಯಲ್ಲ ತುಂಬಾ ಸುರಿಯುತ್ತಿರುವುದರಿಂದ ರಕ್ಷಣಾ ಕಾರ್ಯಚರಣೆ ಕೈಗೊಳ್ಳಲು ಹಾಗೂ ಹುಡುಕಾಟ ನಡೆಸಲು ತುಂಬಾ ತೊಂದರೆ ಉಂಟಾಗಿದ್ದು. 

ಕೊಚ್ಚಿ ಹೋದ ವ್ಯಕ್ತಿಯ ವಿಚಾರ ತಿಳಿದ ತಕ್ಷಣ ಬೆಳಿಗ್ಗೆಯೇ ತಹಶೀಲ್ದಾರ್  ಸುರೇಶಚಾರ್, ಆರ್ ಐ  ವೇಣುಗೋಪಾಲ, ಡಿವೈಎಸ್ಪಿ ವೆಂಕಟೇಶ್ ನಾಯ್ಡು. ಸರ್ಕಲ್ ಇನ್ಸ್ಪೆಕ್ಟರ್ ಎಂ ಎಸ್ ಸರ್ದಾರ್ ಪಿ ಎಸ್ ಐ ತಾರಾ ಸಿಂಗ್ ಹಾಗೂ ಕಂದಾಯ ಇಲಾಖೆಯವರು ಅಗ್ನಿಶಾಮಕದಳದ ಸಿಬ್ಬಂದಿಗಳು ಈ ಹುಡುಕಾಟ ಕಾರ್ಯಾಚರಣೆಯಲ್ಲಿ ತೊಡಗಿದ್ದು ಹನುಮಂತಪುರದಿಂದ ಅಪೇನಹಳ್ಳಿ ಗ್ರಾಮದವರಿಗೂ ಹರಿಯುವ ಕಾಲುವೆಯಲ್ಲಿ ಜೆಸಿಬಿ ಮೂಲಕ ಎಷ್ಟೇ ಹುಡುಕಾಟ ನಡೆಸಿದರು ಕೂಡ ಆ ವ್ಯಕ್ತಿಯ ಸುಳಿವು ಮಾತ್ರ ಸಿಕ್ಕಿಲ್ಲ. ಮತ್ತೆ ತುಂಬಾ ಮಳೆ ಬಂದ ಕಾರಣ  ಸಂಜೆವರೆಗೂ ಗ್ರಾಮದಲ್ಲಿ ಇದ್ದು ಮಳೆಯ ನಿಂತ ತಕ್ಷಣ ಹುಡುಕಾಟ ಕಾರ್ಯಾಚರಣೆ ಪ್ರಾರಂಭ ಮಾಡಲಾಗುವುದು ಎಂದು ತಹಶೀಲ್ದಾರ್ ಸುರೇಶಚಾರ್ ತಿಳಿಸಿದ್ದಾರೆ.

ವರದಿ:ನಾಗೇಶ್ ಜೀವಾ ಮಧುಗಿರಿ.

ವಾರ್ತಾ ಜಾಲ.

Post a Comment

0 Comments

Ad Code

Responsive Advertisement