Ticker

6/recent/ticker-posts

Ad Code

Responsive Advertisement

ಬಿಜೆಪಿ ವತಿಯಿಂದ ತ್ರಿವೇಣಿ ರಸ್ತೆಯಲ್ಲಿ ಮನೆ ಮನೆಗೂ ತ್ರಿವರ್ಣ ಧ್ವಜಗಳ ವಿತರಣೆ

ಬೆಂಗಳೂರು : ನಮ್ಮ ಹೆಮ್ಮೆಯ ಭಾರತ ದೇಶವು  ಈ ಬಾರಿ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವವನ್ನು ಆಚರಿಸುತ್ತಿರುವ ಈ ಶುಭ ಸಂದರ್ಭದಲ್ಲಿ, ಮಾನ್ಯ ಪ್ರಧಾನ ಮಂತ್ರಿಗಳಾದ ಶ್ರೀ ನರೇಂದ್ರ ಮೋದಿಯವರು ಕರೆಕೊಟ್ಟಿರುವ ಮೇರೆಗೆ, ಮನೆ ಮನೆಗೂ ತ್ರಿವರ್ಣ ಧ್ವಜ ತಲುಪಿಸುವ ನಿಟ್ಟಿನಲ್ಲಿ, ಮಲ್ಲೇಶ್ವರಂ ವಿಧಾನ ಸಭಾ ಕ್ಷೇತ್ರದ ಯಶವಂತಪುರ ತ್ರಿವೇಣಿ ರಸ್ತೆಯ ಶ್ರೀ ಶಂಕರ್ ಆಟೋಮೊಬೈಲ್ಸ್ ಬಳಿ ಸಾರ್ವಜನಿಕರಿಗೆ ಸಚಿವರು ಹಾಗೂ ಸ್ಥಳೀಯ ಶಾಸಕರು ಆಗಿರುವ ಡಾ. ಸಿ.ಎನ್. ಅಶ್ವತ್ಥನಾರಾಯಣರವರ ನಿರ್ದೇಶಾನುಸಾರ, ಸಮಾಜ ಸೇವಕರಾದ ಸುರೇಶ್ ಗೌಡರವರ ಸಹಕಾರದೊಂದಿಗೆ,      ಬಿಜೆಪಿ ಬೆಂಗಳೂರು ನಗರ ಉತ್ತರ ಜಿಲ್ಲಾ ಉಪಾಧ್ಯಕ್ಷ ಡಾ. ವಾಸುದೇವ್ ಅವರ ಮಾರ್ಗದರ್ಶನದಲ್ಲಿ, ಮಲ್ಲೇಶ್ವರಂ ವಿಧಾನ ಸಭಾ ಕ್ಷೇತ್ರದ ಬಿಜೆಪಿ ಪಕ್ಷದ  ಅಧ್ಯಕ್ಷರಾಗಿರುವ ಕಾವೇರಿ ಕೇದಾರನಾಥರವರ ಸಹಕಾರದೊಂದಿಗೆ,  ಬೆಂಗಳೂರು ನಗರ ಬಿಜೆಪಿ ಉತ್ತರ ಜಿಲ್ಲಾ  ಕಾರ್ಯಕಾರಿಣಿ ಸದಸ್ಯರುಗಳಾದ ಡಾ. ಜಿ.ಎಸ್.ಚೌಧರಿ ಹಾಗೂ ಎನ್.ಆರ್. ಪರಮೇಶ್ವರಯ್ಯನವರ ನೇತೃತ್ವದಲ್ಲಿ  ರಾಷ್ಟ್ರ ಧ್ವಜಗಳನ್ನು ಗೌರವಪೂರ್ಣವಾಗಿ ವಿತರಿಸುವುದರೊಂದಿಗೆ, 'ಹರ್ ಘರ್ ತಿರಂಗಾ' ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. 





ಬಿಜೆಪಿ ಸ್ಥಳೀಯ  ಮುಖಂಡರುಗಳಾದ ವೆಂಕಟೇಶ, ಸಿ.ಮಂಜುನಾಥ್ ಹಾಗೂ ಇನ್ನಿತರ ಸ್ವಯಂ ಸೇವಕರ ಸಹಕಾರದೊಂದಿಗೆ ರಾಷ್ಟ್ರ ಧ್ವಜವನ್ನು ನಿಯಮಬದ್ಧವಾಗಿ ಅವರವರ ಮನೆಗಳ ಮೇಲೆ  ಹಾರಿಸಲು ತೆಗೆದುಕೊಳ್ಳಬೇಕಾದ ಜಾಗರೂಕತೆ ಹಾಗೂ ವಿಧಿವಿಧಾನಗಳ ಬಗ್ಗೆ     ಮಾಹಿತಿಯನ್ನು ಸಹ ಈ ಸಂದರ್ಭದಲ್ಲಿ  ಧ್ವಜಗಳನ್ನು ಪಡೆದವರಿಗೆ ನೀಡಲಾಯಿತು.

Post a Comment

0 Comments

Ad Code

Responsive Advertisement