Ticker

6/recent/ticker-posts

Ad Code

Responsive Advertisement

*ದುಬೈನ ಅಂತರಾಷ್ಟ್ರೀಯ ಸಾಂಸ್ಕೃತಿಕ ಹಬ್ಬಕ್ಕೆ ಸರ್ವಾಧ್ಯಕ್ಷರಾಗಿ ಡಾ.ಸತೀಶಕುಮಾರ ಹೊಸಮನಿ

 *ದುಬೈನಲ್ಲಿ ನಡೆಯಲಿರುವ  ಅಂತರಾಷ್ಟ್ರೀಯ ಸಾಂಸ್ಕೃತಿಕ ಹಬ್ಬಕ್ಕೆ ಸರ್ವಾಧ್ಯಕ್ಷರಾಗಿ ಡಾ.ಸತೀಶಕುಮಾರ ಹೊಸಮನಿ  ಆಯ್ಕೆ.*

ಇಂಟರ್ ನ್ಯಾಶನಲ್ ಕಲ್ಬರಲ್ ಫೆಸ್ಟ್ ಕೌನ್ಸಿಲ್ಆಫ್ ಇಂಡಿಯಾ ಮತ್ತು ಕನ್ನಡ ಮಿತ್ರರು  ಯು.ಎ.ಇ ಸಂಘ ಇವರಜಂ ಟಿ ಆಶಯದಲ್ಲಿ ದುಬೈಯಲ್ಲಿ ಇದೇ ಆಗಸ್ಟ್ 27 ರಂದು ಜರುಗಲಿರುವ 34 ನೇ ಅಂತಾರಾಷ್ಟ್ರೀಯ ಸಾಂಸ್ಕೃತಿಕ ಹಬ್ಬವನ್ನು ಫಾರ್ಚ್ಯೂನ್ ಸಭಾಂಗಣದಲ್ಲಿ ಆಯೋಜಿಸಿವೆ.

ಕಾರ್ಯಕ್ರಮ ವನ್ನು ಅನಿವಾಸಿ ಭಾರತೀಯ ಕೋಶ - ಕರ್ನಾಟಕ ಇದರ ಯು. ಎ. ಇ. ಘಟಕದ ಅಧ್ಯಕ್ಷರಾದ ಪ್ರವೀಣ್ ಕುಮಾರ್ ಶೆಟ್ಟಿ ಉದ್ಘಾಟಿಸಲಿದ್ದು, ಸಾರ್ವಜನಿಕ

ಗ್ರಂಥಾಲಯ ಇಲಾಖೆಯ ನಿರ್ದೇಶಕರಾದ ಡಾ.ಸತೀಶಕುಮಾರ ಹೊಸಮನಿ ಇವರು ಸರ್ವಾಧ್ಯಕ್ಷತೆ ವಹಿಸಲಿದ್ದಾರೆ.

ದುಬೈಯ 'ಕನ್ನಡ ಮಿತ್ರರು' ಸಂಘದ ಅಧ್ಯಕ್ಷರಾದ ಶಶಿಧರ ನಾಗರಾಜಪ್ಪ, ಇಂಟರ್ ನ್ಯಾಶನಲ್ ಕಲ್ಟರಲ್ ಫೆಸ್ಟ್ ಕೌನ್ಸಿಲ್ಆಫ್ ಇಂಡಿಯಾದ ಅಧ್ಯಕ್ಷರಾದ ಕೆ.ಪಿ. ಮಂಜುನಾಥ್ ಸಾಗರ, ಕನ್ನಡ ಸಂಘ ಮಸ್ಕತ್ ನ ಅಧ್ಯಕ್ಷರಾದ ಪ್ರಸಾದ್  ಕೂರ್ಗ್, ದುಬೈ ಉದ್ಯಮಿ ಈಶ್ವರ ದಾಸ್ ಶೆಟ್ಟಿ,ಮಲ್ಲಿಕಾರ್ಜುನ ಗೌಡ ದುಬೈ, ಹಿದಾಯತ್ ಆಡ್ಡೂರು ದುಬೈಇವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ಸಾಹಿತಿಗಳಾದ ಪ್ರಭಾ ಸುವರ್ಣ ಮುಂಬೈ, ಡಾ. ಅರ್ಚನಾ ಅಥಣಿ, ಮಹೇಶ ಬಳ್ಳಾರಿ ಕೊಪ್ಪಳ  ಗಾಯಕರಾದ ಸವಿತಾ, ಗೋ ನಾ ಸ್ವಾಮಿ ಮಹೆಬೂಬ ಕಿಲ್ಲೇದಾರ, ಮರಿಯಪ್ಪ ಪಾಲ್ಗೊಳ್ಳಲಿದ್ದಾರೆ.

ಶೈಲಜಾ ಕುಮಾರ್ ಮತ್ತು ಜಯಶ್ರೀ ರವಿ ಶಿಷ್ಯ ವೃಂದದವರಿಂದ ನೃತ್ಯ ರೂಪಕ ಮತ್ತು ಜಾನಪದ ನೃತ್ಯ ಪ್ರದರ್ಶನಗೊಳ್ಳಲಿವೆ.

ಮಹದೇವ ಸತ್ತಿಗೇರಿ ಅವರಿಂದ ನಗೆ  ಹೊನಲು ಹೊರ ಹೊಮ್ಮಲಿದೆ.

ವಿವಿಧ ಕ್ಷೇತ್ರದ ಸಾದನಶೀಲ ಗಣ್ಯರಿಗೆ *ಗ್ಲೊಬಲ್ ಅಚೀವರ್ಸ್ ಅವಾರ್ಡ* ಪ್ರದಾನ ಮಾಡಲಾಗುತ್ತದೆ. ನೂರಾರು ಸ್ಥಳೀಯ ಕನ್ನಡಿಗರು ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಸಂಘಟಕರು ತಿಳಿಸಿದ್ದಾರೆ.

Post a Comment

0 Comments

Ad Code

Responsive Advertisement