ಬೆಂಗಳೂರು, ಜುಲೈ 11 (ಕರ್ನಾಟಕ ವಾರ್ತೆ) : ಬೆಂಗಳೂರು ನಗರ ವಿಶ್ವವಿದ್ಯಾನಿಲಯದ ಸಸ್ಯಶಾಸ್ತ್ರ ವಿಭಾಗ ಹಾಗೂ ಕರ್ನಾಟಕ ರಾಜ್ಯ ಔಷಧಿ ಗಿಡಮೂಲಿಕಾ ಪ್ರಾಧಿಕಾರ ಮತ್ತು ಕರ್ನಾಟಕ ರಾಜ್ಯ ಜೀವವೈವಿದ್ಯ ಮಂಡಳಿ ಜೊತೆಗೂಡಿ ಜುಲೈ 13 ರಂದು ನಗರದ ಜ್ಞಾನ ಜ್ಯೋತಿ ಸಭಾಂಗಣದ ಸೆಮಿನಾರ್ ಹಾಲ್‍ನಲ್ಲಿ ಸ್ಥಳೀಯ ಔಷಧೀಯ ಸಸ್ಯಗಳ ಸಂರಕ್ಷಣೆ (Conservation of Native Medicinal Plants) ಕುರಿತು ಕಾರ್ಯಾಗಾರವನ್ನು ಆಯೋಜಿಸಲಾಗಿದೆ.
ಕುಲಪತಿಗಳಾದ ಪ್ರೊ. ಲಿಂಗರಾಜ ಗಾಂಧಿ, ಸುದರ್ಶನ್ ಜಿ.ಎ. ಐ.ಎಫ್.ಎಸ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ, ಕರ್ನಾಟಕ ರಾಜ್ಯ ಔಷಧಿ ಗಿಡಮೂಲಿಕಾ ಪ್ರಾಧಿಕಾರ ಮತ್ತು ಶ್ರೀಮತಿ. ಅನಿತಾ ಎಸ್. ಆರೇಕಲ್ ಐ.ಎಫ್.ಎಸ್, ಸದಸ್ಯ ಕಾರ್ಯದರ್ಶಿ, ಕರ್ನಾಟಕ ರಾಜ್ಯ ಜೀವವೈವಿದ್ಯ ಮಂಡಳಿ ರವರು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ.
ಸಿ.ಎನ್. ಶ್ರೀಧರ ಕೆ.ಎ.ಎಸ್, ಕುಲಸಚಿವರು, ಡಾ. ವಿ. ಲೋಕೇಶ, ಕುಲಸಚಿವರು (ಮೌಲ್ಯಮಾಪನ), ರಘು ಜಿ.ಪಿ, ವಿತ್ತಾಧಿಕಾರಿಗಳು ಮತ್ತು ಡಾ. ವಿ.ಆರ್. ದೇವರಾಜ್, ಡೀನರು ವಿಜ್ಞಾನ ವಿಭಾಗ, ಬೆಂಗಳೂರು ನಗರ ವಿಶ್ವವಿದ್ಯಾನಿಲಯ ರವರುಗಳು ಉಪಸ್ಥಿತರಿರುವರು.
0 Comments