Ticker

6/recent/ticker-posts

Ad Code

Responsive Advertisement

ಎಂ.ಆರ್.ರಂಗನಾಥ್ ರಾವ್ ನಿಧನಕ್ಕೆ ಮಾತಾ. ಬಿ. ಮಂಜಮ್ಮ ಜೋಗತಿ ಅವರಿಂದ ಸಂತಾಪ

ಬೆಂಗಳೂರು, ಜುಲೈ 22 (ಕರ್ನಾಟಕ ವಾರ್ತೆ) :ಸೂತ್ರದ ಬೊಂಬೆಯಾಟದ ಭೀಷ್ಮ ಎಂದು ಖ್ಯಾತಿ ಪಡೆದ ಎಂ.ಆರ್. ರಂಗನಾಥ್ ರಾವ್ ಅವರು ರಂಗಪುತ್ಥಳಿ ಸಂಸ್ಥೆಯ ಸಂಸ್ಥಾಪಕರಾಗಿ ತಮ್ಮದೆ ವಿಶಿಷ್ಟ ಬೊಬೆಯಾಟದ ಮೂಲಕ ವೃತ್ತಿಯನ್ನು ಆರಂಭಿಸಿದರು ಹಾಗೂ ಶಿಕ್ಷಕರಾಗಿಯೂ ಸೇವೆ ಸಲ್ಲಿಸಿದವರು.

ಕರ್ನಾಟಕ ಜಾನಪದ ಅಕಾಡೆಮಿಯು ಡಾ.ಜಿ.ಶಂ. ಪರಮಶಿವಯ್ಯ ಅವರು ಅಧ್ಯಕ್ಷರಾಗಿದ್ದ ಸಂದರ್ಭದಲ್ಲಿ ಗೊಂಬೆಗಳ ತಯಾರಿಕ ತರಬೇತಿ ಶಿಬಿರದಲ್ಲಿ ಗುರುಗಳಾಗಿ ತರಬೇತಿಯಲ್ಲಿ ಭಾಗವಹಿಸಿದ ಶಿಬಿರಾರ್ಥಿಗಳಿಗೆ ತರಬೇತಿಯನ್ನು ನೀಡಿರುತ್ತಾರೆ. ನೂರಾರು ಕಲಾವಿದರಿಗೆ ತರಬೇತಿಯನ್ನು ನೀಡಿ ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದ್ದಾರೆ. ಇವರಿಗೆ ಕರ್ನಾಟಕ ಜಾನಪದ ಅಕಾಡೆಮಿಯು 2007ನೇ ಸಾಲಿನಲ್ಲಿ ಕರ್ನಾಟಕ ಜಾನಪದ ಅಕಾಡೆಮಿ ಪ್ರಶಸ್ತಿ ನೀಡಿ ಗೌರವಿಸಿದೆ. ಇಂತಹ ಮಹಾನ್ ಕಲಾವಿದರ ನಿಧನದಿಂದಾಗಿ ಜಾನಪದ ಮತ್ತು ಯಕ್ಷಗಾನ ಬೊಂಬೆಯಾಟ ಕ್ಷೇತ್ರಕ್ಕೆ ತುಂಬಲಾರದ ನಷ್ಟವಾಗಿದೆ. ಇವರ ಅಗಲಿಕೆಯಿಂದಾದ ನೋವನ್ನು  ಕುಟುಂಬದವರಿಗೆ ಭರಿಸುವ ಶಕ್ತಿ ನೀಡಲೆಂದು ಭಗವಂತನಲ್ಲಿ ಪ್ರಾರ್ಥಿಸುವೆ ಎಂದು ಪದ್ಮಶ್ರೀ ಪುರಸ್ಕøತರು ಹಾಗೂ ಕರ್ನಾಟಕ ಜಾನಪದ ಅಕಾಡೆಮಿಯ ಅಧ್ಯಕ್ಷರಾದ ಮಾತಾ.ಬಿ.ಮಂಜಮ್ಮ ಜೋಗತಿ ತಮ್ಮ ಸಂತಾಪ ವ್ಯಕ್ತಪಡಿಸಿದ್ದಾರೆ.

Post a Comment

0 Comments

Ad Code

Responsive Advertisement