Ticker

6/recent/ticker-posts

Ad Code

Responsive Advertisement

ಇಂಧನ ಸಚಿವ ಸುನೀಲ್ ಕುಮಾರ್ ರವರಿಗೆ ಅಭಿನಂದನಾ ಸಮಾರಂಭ

ಕರ್ನಾಟಕ ರಾಜ್ಯ ವಿದ್ಯುತ್ ಗುತ್ತಿಗೆದಾರರ ಸಮಾವೇಶ  ಮತ್ತು ಅಭಿನಂದನಾ ಕಾರ್ಯಕ್ರಮವನ್ನು ಅರಮನೆ ಮೈದಾನ ,ರಾಯಲ್ ಸೆನೇಟ್ ಸಭಾಂಗಣದಲ್ಲಿ ಆಯೋಜಿಸಲಾಗಿತ್ತು.

ಇಂಧನ ಸಚಿವರಾದ ಸುನೀಲ್ ಕುಮಾರ್ ರವರು,ವಿಧಾನಪರಿಷತ್ ಸದಸ್ಯರಾದ ಕೇಶವ್ ಪ್ರಸಾದ್, ಕರ್ನಾಟಕ ರಾಜ್ಯ ವಿದ್ಯುತ್ ಗುತ್ತಿಗೆದಾರರ ಸಂಘದ ರಾಜ್ಯಾಧ್ಯಕ್ಷರಾದ ಸಿ.ರಮೇಶ್ ರವರು ದೀಪಾ ಬೆಳಗಿಸಿ ಉದ್ಘಾಟನೆ ಮಾಡಿ, ಸಂಘದ ವೆಬ್ ಸೈಟ್ ಮತ್ತು ಲಾಂಛನ ಬಿಡುಗಡೆ ಮಾಡಿದರು.

ಇಂಧನ ಸಚಿವರಾದ ಸುನೀಲ್  ಕುಮಾರ್ ರವರು ಮಾತನಾಡಿ ವಿದ್ಯುತ್ ಗುತ್ತಿಗೆದಾರಿಗೆ ನಮ್ಮ ಸರ್ಕಾರ ನೆರವು ನೀಡುತ್ತದೆ.

ಇಂಧನ ಇಲಾಖೆ ಒಂದು ವರ್ಷದಿಂದ ಸುಧಾರಣೆ ಮಾಡಲಾಗಿದೆ. ನಮ್ಮ ಪಕ್ಷ ನನಗೆ ಅಧಿಕಾರ ನೀಡಿದೆ. ಪ್ರಾಮಾಣಿಕವಾಗಿ ಕೆಲಸ ಮಾಡಿಕೊಂಡು ಬಂದ್ದಿದೇನೆ.

ಗುತ್ತಿಗೆದಾರರ ಸಹಕಾರದಿಂದ ಇಂಧನ ಇಲಾಖೆ ಯಶ್ವಸಿಯತ್ತ ಸಾಗುತ್ತಿದೆ. 13ಜಿಲ್ಲೆ ಸಂಘದ ಸ್ವಂತ ಕಟ್ಟಡವಿದೆ. ಎಲ್ಲರಿಗೂ ಒಳ್ಳೆಯದು ಆಗಬೇಕು. ಸಾಮಾನ್ಯ ಕಾರ್ಯಕರ್ತ ಸಿಪಾಯಿಯಾಗಿ ಕೆಲಸ ಮಾಡುತ್ತಿದ್ದೇನೆ. ಒಟ್ಟಾಗಿ ರಾಜ್ಯ ಮತ್ತು ಇಲಾಖೆಗೆ ಹೆಸರು ಬರುವಂತೆ ಕೆಲಸ ಮಾಡೋಣ.

1ಲಕ್ಷ5ಲಕ್ಷದವರಗೆ ಸ್ಥಳೀಯ ಗುತ್ತಿದಾರರಿಗೆ ನೀಡಿಕೆ, ಸಣ್ಣ ಗುತ್ತಿಗೆದಾರರು ಬದುಕಬೇಕು .

100ದಿನ ವಿಶೇಷ ಯೋಜನೆಯಲ್ಲಿ ಕಾರ್ಯಕ್ರಮದಲ್ಲಿ ಬೆಳಕು ಯೋಜನೆ ವಿದ್ಯುತ್ ಇಲ್ಲದ ಮನೆಗಳಲ್ಲಿ ಸಂಪರ್ಕ ನೀಡಲು ಪಂಚಾಯ್ತಿ ಅನುಮತಿ ಕಡ್ಡಾಯವಲ್ಲ ಎಂದು ಆದೇಶ ನೀಡಲಾಗಿದೆ .

ಹೆಸ್ಕಾಂ,ಬೆಸ್ಕಾಂ ಚಸ್ಕಾಂ ಏಕಾ ದರ ನಿಗದಿ ಮಾಡಲಾಗುವುದು .

ವಿದ್ಯುತ್ ಸಂಪರ್ಕ ಪಡೆಯಲು ಓ.ಸಿ.ನೀಡಬೇಕು ಎಂದು ಹಿಂದಿನ ಕಾಂಗ್ರೆಸ್ ಸರ್ಕಾರದ  ಜನವಿರೋಧಿ ನಿಲುವು ತೆಗೆದುಕೊಂಡಿದ್ದರು  ನಮ್ಮ ಸರ್ಕಾರ ವಾಸ ದೃಡೀಕರಣ ಪತ್ರ ರದ್ದು ಮಾಡಲಾಗಿದೆ.

ಟ್ರಾನ್ಸ್ ಫಾರ್ಮರ್ 4ಗಂಟೆಗಳಲ್ಲಿ ಬದಲಾವಣೆ ಕಾರ್ಯಾಧೇಶ ನೀಡಲಾಗಿದೆ ಎಂದು ಹೇಳಿದರು.

ರಾಜ್ಯಾಧ್ಯಕ್ಷರಾದ ಸಿ.ರಮೇಶ್ ರವರು ಮಾತನಾಡಿ ಕರ್ನಾಟಕ ರಾಜ್ಯ ವಿದ್ಯುತ್ ಗುತ್ತಿಗೆದಾರರ ಸಂಘವು 100ವರ್ಷಗಳ ಇತಿಹಾಸವಿದೆ.

ವಿದ್ಯುತ್ ಗುತ್ತಿಗೆದಾರರ ಸಂಕಷ್ಟ,ಸಮಸ್ಯೆಗಳಿಗೆ ಸಂಘವು ಸದಕಾಲ ಶ್ರಮಿಸುತ್ತಿದೆ.

2022ರ ಸಾಲಿನಲ್ಲಿ  ವಾಸ ದೃಡೀಕರಣ ಇಲ್ಲದಿದ್ದರು ವಿದ್ಯುತ್ ಸಂಪರ್ಕ ಕೊಡಬೇಕು ಎಂದು ರಾಜ್ಯ ಸರ್ಕಾರದ ಆದೇಶದಿಂದ ಲಕ್ಷಾಂತರ ಜನರ ಬಾಳಿಗೆ ಬೆಳಕು ನೀಡಿದೆ .

ಅದರಿಂದ ನಮ್ಮ ಸಂಘದ ಮುಖ್ಯಮಂತ್ರಿಗಳಿಗೆ ಇಂಧನ ಸಚಿವರಿಗೆ ಅಭಿನಂದನೆಗಳು.

ರಾಜ್ಯದಲ್ಲಿ 30ಸಾವಿರ ವಿದ್ಯುತ್ ಗುತ್ತಿಗೆದಾರರು ಇದ್ದು ಅವರನ್ನ ನಂಬಿಕೊಂಡು 10ಲಕ್ಷ ಜನರು ಕೆಲಸ ಮಾಡುತ್ತಿದ್ದಾರೆ .

1ಲಕ್ಷದಿಂದ5 ಲಕ್ಷದವರಗೆ ತುಂಡು ಗುತ್ತಿಗೆ ನೀಡಬೇಕು ಮತ್ತು ಪ್ಯಾಕೇಜ್ ಮಾಡುವುದರಿಂದ ಸಣ್ಣಮಟ್ಟದ ವಿದ್ಯುತ್ ಗುತ್ತಿಗೆದಾರರು ಬೀದಿ ಪಾಲಾಗುತ್ತಾರೆ ಇದರ ಬಗ್ಗೆ ಸರ್ಕಾರ ಗಮನ ಹರಿಸಬೇಕು. 

ಕರ್ನಾಟಕ ರಾಜ್ಯ ವಿದ್ಯುತ್ ಗುತ್ತಿಗೆದಾರರ ಸಂಘದ ಸಾಮಾಜಿಕ ಸೇವೆ ಗುರುತಿಸಿ,ನಮ್ಮ ಸಂಘಕ್ಕೆ ರಾಜ್ಯೋತ್ಸವ ಪ್ರಶಸ್ತಿ ನೀಡಬೇಕು ಎಂದು ಹೇಳಿದರು.

ಇಂಧನ ಸಚಿವರಾದ ಸುನೀಲ್ ಕುಮಾರ್ ರವರಿಗೆ ಸಂಘದ ವತಿಯಿಂದ ಅದ್ದೂರಿಯಾಗಿ ಸನ್ಮಾನಿಸಲಾಯಿತು

 ಪದಾಧಿಕಾರಿಗಳಾದ ಎಂ.ಎನ್.ರಮೇಶ್,ಊರ್ಬನ್ ಪಿಂಟೊ,ಚಂದ್ರಬಾಬು,ಅನ್ನರ್ ಮಿಯಾ,ಶಿವಾನಂದ್ ಬಾಲಪ್ಪನವರ್,ಚಂದ್ರಬಾಬುರವರು  ಪಾಲ್ಗೊಂಡಿದ್ದರು.

Post a Comment

0 Comments

Ad Code

Responsive Advertisement