Ticker

6/recent/ticker-posts

Ad Code

Responsive Advertisement

ರಾಜ್ಯಸಭೆಗೆ ನಾಮ ನಿರ್ದೇಶಿತ ರಾಗಿರುವ ಧರ್ಮಸ್ಥಳದ ಧರ್ಮಾಧಿಕಾರಿಗಳಿಗೆ ಅಭಿನಂದನೆ

 ಬೆಂಗಳೂರು, ಜುಲೈ 07 (ಕರ್ನಾಟಕ ವಾರ್ತೆ) : ರಾಜ್ಯಸಭೆಗೆ ನಾಮ ನಿರ್ದೇಶಿತ ರಾಗಿರುವ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗಡೆ ಅವರನ್ನು  ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಡಾ. ಟಿ ಎಸ್‌ ನಾಗಾಭರಣ  ಅವರು ಅಭಿನಂದಿಸಿದ್ದಾರೆ.

ಸಮಾಜ ಸೇವೆಯಲ್ಲಿ ಅಪ್ರತಿಮ ಸೇವೆ ಸಲ್ಲಿಸಿರುವ ವೀರೇಂದ್ರ ಹೆಗಡೆ ಅವರನ್ನು ರಾಜ್ಯಸಭೆಗೆ  ನಾಮನಿರ್ದೇಶನ ಮಾಡಿರುವುದಕ್ಕಾಗಿ ಕೃತಜ್ಞತೆಗಳನ್ನು ಸಲ್ಲಿಸಿರುವ ಡಾ.ಟಿ.ಎಸ್.ನಾಗಾಭರಣ ಅವರು  ಇದು ಕರ್ನಾಟಕ ರಾಜ್ಯದ ಸಮಸ್ತ ಜನತೆಗೆ ಸಂದ ಗೌರವ ಎಂದಿದ್ದಾರೆ.

ಡಾ. ವೀರೇಂದ್ರ ಹೆಗಡೆ ಅವರು ಧರ್ಮಸ್ಥಳದ ಧರ್ಮಾಧಿಕಾರಿಯಾಗಿ ಮಾತ್ರವಲ್ಲದೆ ಗ್ರಾಮೀಣ  ಅಭಿವೃದ್ಧಿ, ದೇಗುಲಗಳ ಪುನರುತ್ಥಾನ, ಪರಿಸರ ಸಂರಕ್ಷಣೆ, ಆರ್ಥಿಕ ದುರ್ಬಲರಿಗೆ ವಿವಿಧ ರೀತಿಯ ನೆರವು ನೀಡುವ ಮೂಲಕ ಸಾರ್ಥಕ ಸಮಾಜ ಸೇವೆ ಮಾಡುತ್ತಿದ್ದಾರೆ. ಕನ್ನಡ ಸಾಂಸ್ಕೃತಿಕ ಲೋಕಕ್ಕೂ ಅವರ  ಸೇವೆ ಬಹಳ ಮಹತ್ವವಾದುದು ಎಂದು ಅವರು ತಿಳಿಸಿದ್ದಾರೆ.

.

Post a Comment

0 Comments

Ad Code

Responsive Advertisement