Ticker

6/recent/ticker-posts

Ad Code

Responsive Advertisement

ಸಹಾಯಧನಕ್ಕೆ ಚಲನಚಿತ್ರ ನಿರ್ಮಾಪಕರಿಂದ ಅರ್ಜಿ ಆಹ್ವಾನ

 ಬೆಂಗಳೂರು, ಜುಲೈ 11 (ಕರ್ನಾಟಕ ವಾರ್ತೆ) : ಕರ್ನಾಟಕದಲ್ಲಿ ನಿರ್ಮಾಣಗೊಂಡಿರುವ ಕನ್ನಡ ಮತ್ತು ರಾಜ್ಯದ ಇತರೆ ಪ್ರಾದೇಶಿಕ ಭಾμÁ ಚಲನಚಿತ್ರಗಳಿಗೆ ಅನ್ವಯಿಸಿದಂತೆ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು 2019ರ ಕ್ಯಾಲೆಂಡರ್ (ದಿನದರ್ಶಿ) ವರ್ಷದ ಸಹಾಯಧನಕ್ಕಾಗಿ ಅರ್ಹ ನಿರ್ಮಾಪಕರಿಂದ ಅರ್ಜಿ ಆಹ್ವಾನಿಸಿದೆ. ಆನ್‍ಲೈನ್ ವ್ಯವಸ್ಥೆಯಡಿ ಅರ್ಜಿ ಸಲ್ಲಿಸಲು ಆಗಸ್ಟ್ 8 ಕೊನೆ ದಿನಾಂಕವಾಗಿದೆ.
 ದಿನಾಂಕ: 01-01-2019 ರಿಂದ ದಿನಾಂಕ: 31-12-2019 (ಎರಡು ದಿನಗಳು ಸೇರಿದಂತೆ) ರವರೆಗೆ ಸಿಬಿಎಫ್‍ಸಿ (ಸೆಂಟ್ರಲ್ ಬೋರ್ಡ್ ಆಫ್ ಫಿಲ್ಮ್ ಸರ್ಟಿಫಿಕೇಷನ್) ಯಿಂದ ಸೆನ್ಸಾರ್ ಪ್ರಮಾಣ ಪತ್ರ ಪಡೆದಿರುವ ಮತ್ತು ರಾಜ್ಯದಲ್ಲಿ ಚಿತ್ರೀಕರಣ ನಡೆಸಲು ಇಲಾಖೆಯಿಂದ ಅನುಮತಿ ಪಡೆದಿರುವ ಕನ್ನಡ ಮತ್ತು ಪ್ರಾದೇಶಿಕ ಭಾμÁ ಚಲನಚಿತ್ರಗಳು ಮಾತ್ರ 2019 ರ ಕ್ಯಾಲೆಂಡರ್ ವರ್ಷದ ಸಹಾಯಧನಕ್ಕೆ ಆನ್‍ಲೈನ್‍ನಲ್ಲಿ ಅರ್ಜಿ ಸಲ್ಲಿಸಲು ಅರ್ಹವಾಗಿರುತ್ತವೆ ಎಂದು ಇಲಾಖೆಯ ಆಯುಕ್ತ ಡಾ. ಪಿ. ಎಸ್. ಹರ್ಷ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಆಸಕ್ತ ಚಲನಚಿತ್ರ ನಿರ್ಮಾಪಕರು ಸಹಾಯಧನಕ್ಕಾಗಿ sevasindhuservices.karnataka.gov.in ನಲ್ಲಿ 10,647 ರೂ. ಶುಲ್ಕ ಪಾವತಿಸಿ, ಅಗತ್ಯ ಮಾಹಿತಿ, ದಾಖಲಾತಿ, ಪ್ರಮಾಣ ಪತ್ರದೊಂದಿಗೆ ಕೋರಿಕೆ ಅರ್ಜಿ ಸಲ್ಲಿಸಬೇಕು. 
ಬಳಿಕ ಆನ್‍ಲೈನ್‍ನಿಂದ ಭರ್ತಿ ಮಾಡಿದ ಅರ್ಜಿ ಮತ್ತು ಶುಲ್ಕ ಪಾವತಿ ರಸೀದಿಯನ್ನು ಡೌನ್‍ಲೋಡ್ ಮಾಡಿಕೊಂಡು, ಅದರೊಂದಿಗೆ ಸೆನ್ಸಾರ್ ಪ್ರಮಾಣ ಪತ್ರದಲ್ಲಿ ನಮೂದಾಗಿರುವ ಅವಧಿಗೆ ಅನುಗುಣವಾಗಿ ಎರಡು ಬ್ಲೂರೇ ಡಿಸ್ಕ್ ಮತ್ತು ನಿರ್ಮಾಪಕರು ದೃಢೀಕರಿಸಿರುವ ಎಲ್ಲಾ ದಾಖಲಾತಿ ಮತ್ತು ಪ್ರಮಾಣ ಪತ್ರಗಳನ್ನು ಒಟ್ಟು 10 (ಹತ್ತು) ಸೆಟ್ ಗಳಂತೆ ಜೋಡಿಸಿಕೊಂಡು ಚಲನಚಿತ್ರ ಶಾಖೆ, ವಾರ್ತಾ ಸೌಧ, #17, ಮೊದಲನೇ ಮಹಡಿ, ಭಗವಾನ್ ಮಹಾವೀರ ರಸ್ತೆ, ಬೆಂಗಳೂರು-560001 ಈ ವಿಳಾಸಕ್ಕೆ ಖುದ್ದಾಗಿ ಕಚೇರಿ ಅವಧಿಯಲ್ಲಿ ಆಗಸ್ಟ್ 18 ರವರೆಗೆ ಭೇಟಿ ನೀಡಿ ಚಲನಚಿತ್ರ ನಿರ್ಮಾಪಕರು ಸಲ್ಲಿಸಬೇಕು. ಅಗತ್ಯ ಮಾಹಿತಿಗಳನ್ನು ನಿರ್ಮಾಣ ಸಂಸ್ಥೆಯ ಶೀರ್ಷಿಕೆ ಪತ್ರದಲ್ಲಿ (ಲೆಟರ್ ಹೆಡ್) ಮೊಹರು ಮತ್ತು ಸಹಿಯೊಂದಿಗೆ ನೀಡಬೇಕು. ಆನ್‍ಲೈನ್ ಅರ್ಜಿಯಲ್ಲಿ ನಮೂದಿಸಿರುವ ಚಲನಚಿತ್ರದ ಬ್ಲೂರೇ ಡಿಸ್ಕ್ ಅನ್ನು ಭೌತಿಕವಾಗಿ ಇಲಾಖೆಗೆ ನೀಡುವ ವೇಳೆಯೇ ಅದರಲ್ಲಿನ ದತ್ತಾಂಶವನ್ನು ಪ್ರದರ್ಶಿಸಿ ಖಾತ್ರಿಪಡಿಸಬೇಕು.
 ಆನ್‍ಲೈನ್‍ನಲ್ಲಿ ಶುಲ್ಕ ಮತ್ತು ಅರ್ಜಿ ಸಲ್ಲಿಸದೇ ನೇರವಾಗಿ ಸಹಾಯಧನ ಕೋರಿಕೆಯ ಅರ್ಜಿಗಳನ್ನು ಇಲಾಖೆಯಲ್ಲಿ ಸ್ವೀಕರಿಸುವುದಿಲ್ಲ. ಸೇವಾಸಿಂಧು ಹೊರತು ಪಡಿಸಿ ಅಂಚೆ, ಕೋರಿಯರ್, ಇಮೇಲ್ ಸೇರಿದಂತೆ ಇನ್ನಿತರ ಮಾರ್ಗಗಳÀಲ್ಲಿಯೂ ಅರ್ಜಿ ಸಲ್ಲಿಸಲು ಅವಕಾಶವಿರುವುದಿಲ್ಲ. ಅಂತೆಯೇ, ನಿಗದಿತ ಅವಧಿ ಬಳಿಕ ಅರ್ಜಿಗಳನ್ನು ಆನ್‍ಲೈನ್ ಇಲ್ಲವೆ ಭೌತಿಕವಾಗಿ ಅಥವಾ ಇನ್ಯಾವುದೇ ರೂಪದಲ್ಲಿಯೂ ಸ್ವೀಕರಿಸುವುದಿಲ್ಲ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

Post a Comment

0 Comments

Ad Code

Responsive Advertisement