Ticker

6/recent/ticker-posts

Ad Code

Responsive Advertisement

*ಕೆ.ಪಿ.ಟಿ.ಎ. ವತಿಯಿಂದ ಪ್ರತಿಭಾ ಪುರಸ್ಕಾರ*

ಗುರುಪೂರ್ಣಿಮೆ ಅಂಗವಾಗಿ ಮತ್ತೀಕೆರೆಯ ಕೆಪಿಟಿಎ ಕಛೇರಿಯಲ್ಲಿ  ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಕೋಳಿ ಉದ್ಯಮದಲ್ಲಿ ತೊಡಗಿರುವ ಸದಸ್ಯರ ಕುಟುಂಬದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಸಂಸ್ಥೆಯ ವತಿಯಿಂದ ಪ್ರೋತ್ಸಾಹ ನೀಡುವ ಸಲುವಾಗಿ ಸಾಂಕೇತಿಕವಾಗಿ ಪ್ರತಿಭಾ ಪುರಸ್ಕಾರ ವಿತರಣಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ವಿದ್ಯಾರ್ಥಿಗಳಾದ ಕು. ರಿಯಾ ಪೊನ್ನಮ್ಮ ಪಿಯುಸಿ ಯಲ್ಲಿ 97.6 ಪರ್ಸೆಂಟ್ ಹಾಗೂ ಆರ್. ರೋಹಿತ್ ಕುಮಾರ್ ಹತ್ತನೆಯ ತರಗತಿಯಲ್ಲಿ 96  ಪರ್ಸೆಂಟ್  ಗಳಿಸಿರುವ ಇಬ್ಬರು ವಿದ್ಯಾರ್ಥಿಗಳಿಗೆ ಸನ್ಮಾನಿಸಿ, ಪ್ರೋತ್ಸಾಹ ಧನ  ನೀಡಲಾಯಿತು. 


ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷರಾದ ಕೆ.ಎನ್.ನಾಗರಾಜು,  ಗೌರವಾಧ್ಯಕ್ಷರುಗಳಾದ ಸೈಯದ್ ಅಹಮದುಲ್ಲಾ,  ಎನ್.ಹೆಚ್.ನಾಗರಾಜು, ಪ್ರಧಾನ ಕಾರ್ಯದರ್ಶಿ ಎನ್.ಸೆಲ್ವರಾಜ್, ಜಂಟಿ ಕಾರ್ಯದರ್ಶಿ ಹಫೀಜ್,

ಬಿ.ಬಿ.ಎಂ.ಪಿ. ಪಶುಪಾಲನೆ ಸಹಾಯಕ ನಿರ್ದೇಶಕರು ಡಾ. ಎಂ.ಜಿ.ಹಳ್ಳಿ ಶಿವರಾಂ ಹಾಗೂ ಸದಸ್ಯರು ಉಪಸ್ಥಿತರಿದ್ದರು.

Post a Comment

0 Comments

Ad Code

Responsive Advertisement