ಬಳ್ಳಾರಿ,ಜು.11: ನಗರದ ದೇವಿನಗರದ ನಂದಗೋಕುಲ ಶಾಲೆಯಲ್ಲಿ ಇತ್ತೀಚೆಗೆ ನಡೆದ ಬಳ್ಳಾರಿ ಜಿಲ್ಲಾ ಯಾದವ ಸಂಘದ ನಿರ್ದೇಶಕರ ಚುನಾವಣೆಯಲ್ಲಿ ಪೂಜಾರಿ ಗಾದೆಪ್ಪ ಮತ್ತು ಕೆ.ಇ.ಚಿದಾನಂದಪ್ಪ ತಂಡದ 25 ಅಭ್ಯರ್ಥಿಗಳಲ್ಲಿ 20 ಅಭ್ಯರ್ಥಿಗಳು ಜಯಶಾಲಿಗಳಾಗಿ ಪೂರ್ಣ ಬಹುಮತವನ್ನು ಪಡೆದಿದ್ದಾರೆ. ಸುಮಾರು 1200 ಮತಗಳಲ್ಲಿ ಈ ಗುಂಪಿಗೆ 1050 ಮತಗಳನ್ನು ನೀಡಿ ಶೇ.90.44 ಮತಗಳಿಂದ ಗಾದೆಪ್ಪನವರ ಗುಂಪಿಗೆ ಜಯವಾಗಿರುತ್ತದೆ.
ಈ ಸಂದರ್ಭದಲ್ಲಿ ಪೂಜಾರಿ ಗಾದೆಪ್ಪ ಮತ್ತು ಚಿದಾನಂದಪ್ಪ ಮಾತನಾಡಿ, ಚುನಾವಣೆ ಪ್ರಚಾರ ಸಂದರ್ಭದಲ್ಲಿ ನೀಡಿರುವ ಅಶ್ವಾಸನೆಗಳನ್ನು ಪ್ರಮಾಣಿಕವಾಗಿ ಈಡೇರಿಸಿ ಗೊಲ್ಲ ಸಮುದಾಯದ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಲಾಗುವುದು ಎಂದರು.
ಇವರ ಎದುರಾಳಿ ಗುಂಪಿನ ತಿಮ್ಮಪ್ಪನವರ ಗುಂಪಿನಲ್ಲಿ 25 ಅಭ್ಯರ್ಥಿಗಳಲ್ಲಿ ಕೇವಲ ಐದು ಜನ ಅಭ್ಯರ್ಥಿಗಳು ಮಾತ್ರ ಗೆದ್ದು ಅವರ ತಂಡ ತೀವ್ರ ಮುಖಭಂಗ ಅನುಭವಿಸಿದೆ. ಸ್ವತಂತ್ರö್ಯವಾಗಿ ಸ್ಪರ್ಧಿಸಿದ್ದ ಮೂರು ಜನ ಅಭ್ಯರ್ಥಿಗಳು ಸೋತಿದ್ದಾರೆ. ಈ ಚುನಾವಣೆಯಲ್ಲಿ ಒಟ್ಟು 53 ಜನ ಅಭ್ಯರ್ಥಿಗಳು ಕಣದಲ್ಲಿದ್ದರು. ರಾತ್ರಿ 12ರ ಹೊತ್ತಿಗೆ ಸಂಪೂರ್ಣ ಫಲಿತಾಂಶ ದೊರೆತ ಹಿನ್ನೆಲೆಯಲ್ಲಿ ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಿಸಿದರು. ಬಳ್ಳಾರಿ ಆದಿದೇವತೆ ಕನಕದುರ್ಗಮ್ಮ ದೇವಸ್ಥಾನಕ್ಕೆ ಹೋಗಿ ದರ್ಶನ ಪಡೆದರು.

0 Comments