Ticker

6/recent/ticker-posts

Ad Code

Responsive Advertisement

32ನೇ ವರ್ಷದ ರಾಜ್ಯಮಟ್ಟದ ಗಾಳಿಪಟ ಉತ್ಸವ

 ಕರ್ನಾಟಕ ಜಾನಪದ ಪರಿಷತ್ತು, ರಾಜ್ಯ ಪ್ರವಾಸೋದ್ಯಮ ಇಲಾಖೆ, ಕನ್ನಡ ಮತ್ತು ಸಂಸ್ಕÈತಿ ಇಲಾಖೆ ಮತ್ತು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ರಾಮನಗರ ಜಿಲ್ಲೆ – ಇವರ ಸಂಯುಕ್ತಾಶ್ರಯದಲ್ಲಿ 32ನೇ ವರ್ಷದ ಗಾಳಿಪಟ ಉತ್ಸವವನ್ನು ದಿನಾಂಕ: 29/07/2022ರಂದು ರಾಮನಗರ ಜಿಲ್ಲಾ ಕ್ರೀಡಾಂಗಣದಲ್ಲಿ ಬೆಳಗ್ಗೆ 10.00 ಗಂಟೆಗೆ ಗಾಳಿಪಟ ಉತ್ಸವ / ಸ್ಪರ್ಧೆಯ ಉದ್ಘಾಟನೆ ಮತ್ತು ಮಧ್ಯಾಹ್ನ 2.30ಕ್ಕೆ ಸಮಾರೋಪ ಸಮಾರಂಭ ಹಾಗೂ ಬಹುಮಾನ ವಿತರಣೆ ಕಾರ್ಯಕ್ರಮವಿದೆ. ಪ್ರೇಕ್ಷಕರಿಗೆ ಹಾಗೂ ಸ್ಪರ್ಧೆಗಳಲ್ಲಿ ಭಾಗವಹಿಸುವವರಿಗೆ ಉಚಿತ ಪ್ರವೇಶವಿದೆ. 

ಹಿನ್ನಲೆ :  ಕನ್ನಡ ನಾಡಿನ ಜಾನಪದ ಪರಂಪರೆಯ ಸಂವರ್ಧನೆ, ಸಂರಕ್ಷಣೆ, ಪ್ರಸರಣ, ದಾಖಲಾತಿ ಮತ್ತು ಪ್ರಚಾರಗಳನ್ನು ಪ್ರಧಾನ ಆಶಯಗಳನ್ನಾಗಿರಿಸಿಕೊಂಡು ವಿಶ್ರಾಂತ ಐ.ಎ.ಎಸ್‌ಅಧಿಕಾರಿ ಮತ್ತು ನಾಡಿನ ಉತ್ಕÈಷ್ಟ ಸೃಜನಶೀಲ ಲೇಖಕರಾದ ನಾಡೋಜ ಎಚ್. ಎಲ್. ನಾಗೇಗೌಡರು ಮಾರ್ಚ್ 21, 1979ರಂದು ಸ್ಥಾಪಿಸಿದ ಕರ್ನಾಟಕ ಜಾನಪದ ಪರಿಷತ್ತು ಕಳೆದ 43 ವರ್ಷಗಳ ಅವಧಿಯಲ್ಲಿ ಹಲವಾರು ಸಾಧನೆಯ ಮೈಲಿಗಲ್ಲುಗಳನ್ನು ಸಾಧಿಸಿದೆ.





 ಯಾವುದೇ ಸಂಸ್ಕತಿಯ ಲವಲವಿಕೆಯ ರೂಪಗಳು ಹಬ್ಬ-ಹರಿದಿನಗಳು, ಉತ್ಸವ ಆಟೋಟಗಳು, ಕಾಲಮಾನದ ಚಲನೆಯಲ್ಲಿ ಒಳಿತಾದ ಆನಂದ ನೀಡುವ ಕ್ರೀಡಾರೂಪಗಳು ಬಳಕೆ ತಪ್ಪಿ ನಿಂತುಹೋಗಿರುವುದಿದೆ. ಇದನ್ನು ಮನಗಂಡ ಕರ್ನಾಟಕ ಜಾನಪದ ಪರಿಷತ್ತು- ಜಾನಪದ ಲೋಕದ ರೂವಾರಿಗಳಾದ ನಾಡೋಜ ಎಚ್. ಎಲ್. ನಾಗೇಗೌಡರು 1988ರಲ್ಲಿಯೇ ಜಾನಪದ ಲೋಕದಲ್ಲಿ ಗಾಳಿಪಟ ಉತ್ಸವವನ್ನು ಆರಂಭಿಸಿದರು. ಅದು ನಾಡಿನಲ್ಲಿ ವಿಶಿಷ್ಟವಾಗಿ ಬೆಳೆದಿದೆ. ಬೆಂಗಳೂರಿನ ಅರಮನೆ ಮೈದಾನ ಹಾಗೂ ಜಕ್ಕೂರು ಏರೋಡ್ರಾಮ್‌ಗಳಲ್ಲಿ ನಡೆಯುತ್ತಿದ್ದ ಉತ್ಸವಗಳಂತೂ ಜನಜಾತ್ರೆಯ ಉತ್ಸವಗಳಾಗಿದ್ದವು. ಅನಂತರ ಮೈಸೂರು, ಮಂಡ್ಯ, ದೊಡ್ಡಬಳ್ಳಾಪುರ, ಗುಲ್ಬರ್ಗಾ, ಚಾಮರಾಜನಗರ, ಚಿಕ್ಕಬಳ್ಳಾಪುರ, ತುಮಕೂರು ಜಿಲ್ಲೆ - ಹೀಗೆ ರಾಜ್ಯಾದ್ಯಂತ ಎಲ್ಲ ಕಡೆ ಈ ಉತ್ಸವವನ್ನು ಸಂಘಟಿಸಲಾಯಿತು.

 ಕರ್ನಾಟಕ ಜಾನಪದ ಪರಿಷತ್ತು ಕಳೆದ 32 ವರ್ಷಗಳಿಂದಲೂ ರಾಜ್ಯ ಪ್ರವಾಸೋದ್ಯಮ ಇಲಾಖೆಯ ಸಹಯೋಗದೊಂದಿಗೆ ರಾಜ್ಯದ ಬೇರೆ ಬೇರೆ ಜಿಲ್ಲೆಗಳಲ್ಲಿ ರಾಜ್ಯ ಹಾಗೂ ರಾಷ್ಟಮಟ್ಟದ ಗಾಳಿಪಟ ಉತ್ಸವವನ್ನು ಅದ್ದೂರಿಯಿಂದ ಆಚರಿಸಿಕೊಂಡು ಬರುತ್ತಿದೆ. ಜಗತ್ತಿನ ಬಹುತೇಕ ಪ್ರಾಚೀನ ಸಂಸ್ಕತಿಗಳಲ್ಲಿ ಸಾಂಸ್ಕತಿಕ ಘಟಕವಾಗಿ ಉಳಿದು ಬಂದಿರುವ ಗಾಳಿಪಟ ಹಾರಿಸು ಕಲೆಯನ್ನು ಆಧುನಿಕ ಸಂದರ್ಭದಲ್ಲಿ ನಶಿಸಿ ಹೋಗುವುದಕ್ಕೆ ಬಿಡದೇ ಆ ಕಲೆಯನ್ನು ಉಳಿಸಿ ಬೆಳೆಸಿ ಪ್ರೋತ್ಸಾಹಿಸಬೇಕೆಂಬ ಆಶಯದಿಂದ ಕರ್ನಾಟಕ ಜಾನಪದ ಪರಿಷತ್ತು ಈ ಉತ್ಸವವನ್ನು ಏರ್ಪಡಿಸಿರುತ್ತದೆ.

ಗಾಳಿಪಟ ಉತ್ಸವ – 2022 : ನಾಡಿನ ನಾನಾ ಭಾಗಗಳಿಂದ ಸ್ಪರ್ಧಿಗಳು ಪಾಲ್ಗೊಳ್ಳುತ್ತಿದ್ದಾರೆ. ಎಳೆಯ ಮಕ್ಕಳಿಂದ ಹಿಡಿದು ಹಿರಿಯರು, ಹಳ್ಳಿಗರು ಮತ್ತು ನಗರದವರೂ ಪಾಲ್ಗೊಳ್ಳುವ ಈ ಉತ್ಸವದಲ್ಲಿ ಗ್ರಾಮೀಣ ಮೂಲದ ಬೋರಂಟಿ, ಗುಂಡು ಚಕ್ರದಂತಹ ಪಟಗಳೊಂದಿಗೆ ನಗರ ಮೂಲಕ ಸಂಯೋಜನೆಯ ಸರಮಾಲೆ ಪಟ, ಎರಡು ದಾರಗಳ ಪಟಗಳಂತಹ ಪಟಗಳು ಇಲ್ಲಿ ಪಾಲ್ಗೊಳ್ಳುವುದಿದೆ. ಒಟ್ಟಿನಲ್ಲಿ ಮರೆತು ಹೋಗುತ್ತಿದ್ದ ಈ ಕಲೆ ಈಗ ಪುನಶ್ಚೇತನಗೊಂಡಿವೆ. ಅದರ ಪ್ರತೀಕ ಈ ಉತ್ಸವವಾಗಿದೆ. ಗಾಳಿಪಟ ಸ್ಪರ್ಧೆಯಲ್ಲಿ ಭಾಗವಹಿಸುವ ಸ್ಪರ್ಧಿಗಳೆಲ್ಲರೂ ಬೆಳಗ್ಗೆ 8.30 ಗಂಟೆಗೆ ಬಂದು ಸ್ಥಳದಲ್ಲೇ ನೋಂದಾಯಿಸಿಕೊ0ಡು ಸ್ಪರ್ಧೆಯಲ್ಲಿ ಭಾಗವಹಿಸಬಹುದಾಗಿದೆ. 

ಗಾಳಿಪಟ ಉತ್ಸವನ್ನು ರಾಮನಗರದ ಉಸ್ತುವಾರಿ ಸಚಿವ ಅಶ್ವಥ್‌ನಾರಾಯಣ ಅವರು ಉದ್ಘಾಟನೆ ಮಾಡಲಿದ್ದು, ಗಾಳಿಪಟ ಕಾರ್ಯಗಾರವನ್ನು ಪ್ರವಾಸೋದ್ಯಮ ಇಲಾಖೆಯ ಸಚಿವ ಅನಂದ್ ಸಿಂಗ್ ಅವರು ಉದ್ಘಾಟನೆ ಮಾಡಲಿದ್ದಾರೆ. ಉತ್ಸವದ ಅಧ್ಯಕ್ಷತೆಯನ್ನು ರಾಮನಗರ ವಿಧಾನಸಭಾ ಕ್ಷೇತ್ರ ಶಾಸಕರಾದ ಶ್ರೀಮತಿ ಅನಿತಾ ಕುಮಾರಸ್ವಾಮಿಯವರು ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಮಾಜಿ ಸಚಿವರು, ಶಾಸಕರು ಭಾಗವಹಿಸುತ್ತಿದ್ದಾರೆ. ಅಂತರರಾಷ್ಟೀಯ ಗಾಳಿಪಟ ಕಲಾವಿದ ವಿ.ಕೆ. ರಾವ್ ಅವರು, ಮತ್ತು ಇತರ ಗಾಳಿಪಟ ಕಲಾವಿದರುಗಳಿಂದ ಸುಮಾರು 50 ಕ್ಕಿಂತ ಹೆಚ್ಚು ಗಾಳಿಪಟ ಹಾರಾಟ ಮತ್ತು ಪ್ರದರ್ಶನವು ಇರುತ್ತದೆ.

Post a Comment

0 Comments

Ad Code

Responsive Advertisement