ಬೆಂಗಳೂರು, ಜುಲೈ 06 (ಕರ್ನಾಟಕ ವಾರ್ತೆ) : ಕರ್ನಾಟಕ ಅರಣ್ಯ ಇಲಾಖೆ, ಅಧಿಕೃತ ಅಧಿಕಾರಿ ಹಾಗೂ ಉಪ ಅರಣ್ಯ ಸಂರಕ್ಷಣಾಧಿಕಾರಿ, ಅರಣ್ಯ ಸಂಚಾರಿ ದಳ, ಬೆಂಗಳೂರು ರವರ ನ್ಯಾಯಾಲಯ ಈ ಘಟಕದಲ್ಲಿ ದಾಖಲಾಗಿರುವ ಮೊಕದ್ದಮೆ ಸಂಖ್ಯೆ 11/2022-23, ದಿನಾಂಕ 01-06-2022 ಈ ಪ್ರಕರಣದಲ್ಲಿ ಒಟ್ಟು 559.4 ಕೆ.ಜಿ ರಕ್ತಚಂದನ ಮರದ ತುಂಡುಗಳು ಹಾಗೂ ಚಕ್ಕೆಯನ್ನು ಟಾಟಾ ಸೂಪರ್ ಎಸ್ ವಾಹನ ನೊಂದಣಿ ಸಂಖ್ಯೆ:ಕೆಎ-01-ಎಬಿ-6548 ರಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ಅಪರಾಧಕ್ಕಾಗಿ ಮಾಲು ವಾಹನವನ್ನು ಸರ್ಕಾರದ ಪರವಾಗಿ ಜಪ್ತುಪಡಿಸಲಾಗಿದ್ದು, ಕರ್ನಾಟಕ ಅರಣ್ಯ ಕಾಯ್ದೆ 1963ರ ಕಲಂ 71ಎ ರಡಿ ಮುಟ್ಟುಗೋಲು ಹಾಕಿಕೊಳ್ಳುವ ಬಗ್ಗೆ ನಡಾವಳಿ ಕೈಗೊಳ್ಳಲಾಗಿದೆ.
ಆದುದರಿಂದ ಸದರಿ ವಾಹನದ ನೋಂದಣಿ ಮಾಲೀಕರಾದ ಫೇವರ್ ರಾಮ್ ಬಿನ್ ಮಿಶ್ರಿಲಾಲ್, ನಂ.116/4ಎ ಎಸ್.ಜಿ.ಆರ್. ಕಾಲೇಜು ರಸ್ತೆ, ರೈಲ್ವೇ ಕ್ರಾಸಿಂಗ್ ಹತ್ತಿರ, ಮುನ್ನೆಕೊಳಲ, ಮಾರತ್ತಹಳ್ಳಿ, ಬೆಂಗಳೂರು ಉತ್ತರ, ಬೆಂಗಳೂರು - 560037 ಅಥವಾ ವಾಹನದ ವಾರಸುದಾರರಿಗೆ ಈ ಮೂಲಕ ತಿಳಿಯಪಡಿಸುವುದೇನೆಂದರೆ, ಟಾಟಾ ಸೂಪರ್ ಏಸ್ ಸರಕುವಾಹನ ನೋಂದಣಿ ಸಂಖ್ಯೆ: ಕೆಎ-01-ಎಬಿ-6548 ವಾಹನದಲ್ಲಿ ಅಕ್ರಮವಾಗಿ ರಕ್ತಚಂದನ ಮರದ ತುಂಡುಗಳು ಮತ್ತು ಚಕ್ಕೆಯನ್ನು ಸಾಗಾಣಿಕೆ ಮಾಡಿರುವ ಅಪರಾಧಕ್ಕಾಗಿ ಮಾಲು ಸಮೇತ ವಾಹನವನ್ನು ಸರ್ಕಾರಕ್ಕೆ ಏಕೆ ಮುಟ್ಟುಗೋಲು ಹಾಕಿಕೊಳ್ಳಬಾರದು ಎಂಬುದರ ಬಗ್ಗೆ ಕರ್ನಾಟಕ ಅರಣ್ಯ ಕಾಯ್ದೆ 1963ರ ಕಲಂ 71ಬಿ ರ ಪ್ರಕಾರ ಅಂತಿಮ ಕಾರಣ ಕೇಳುವ ನೋಟೀಸನ್ನು ಜಾರಿಗೊಳಿಸಿದೆ.
ಈ ಬಗ್ಗೆ ಆಕ್ಷೇಪಣೆಗಳು, ತಂಟೆ ತಕರಾರುಗಳು ಇದ್ದಲ್ಲಿ, ಈ ನೋಟೀಸ್ ಜಾರಿಯಾದ ದಿನಾಂಕದಿಂದ ಹದಿನೈದು (15) ದಿವಸದೊಳಗಾಗಿ ಈ ನ್ಯಾಯಾಲಯಕ್ಕೆ ಆಕ್ಷೇಪಣೆ ಸಲ್ಲಿಸತಕ್ಕದ್ದು, ಸಕಾಲದಲ್ಲಿ ಆಕ್ಷೇಪಣೆ ಸಲ್ಲಿಸದೇ ಇದ್ದಲ್ಲಿ, ನಿಮ್ಮ ಆಕ್ಷೇಪಣೆಗಳು ಏನು ಇರುವುದಿಲ್ಲವೆಂದು ಪರಿಗಣಿಸಿ ಏಕಪಕ್ಷೀಯವಾಗಿ ತೀರ್ಮಾನವನ್ನು ತೆಗೆದುಕೊಂಡು, ವಾಹನವನ್ನು ಸರ್ಕಾರಕ್ಕೆ ಮುಟ್ಟುಗೋಲು ಹಾಕಿಕೊಳ್ಳಲು ಸೂಕ್ತವಾದ ಆದೇಶವನ್ನು ಕರ್ನಾಟಕ ಅರಣ್ಯ ಕಾಯ್ದೆ 1963ರ ಕಲಂ 71ರ ರೀತ್ಯಾ ಹೊರಡಿಸಲಾಗುವುದು ಎಂದು ಅಧಿಕೃತ ಅಧಿಕಾರಿ ಹಾಗೂ ಉಪ ಅರಣ್ಯ ಸಂರಕ್ಷಣಾಧಿಕಾರಿ, ಅರಣ್ಯ ಸಂಚಾರಿ ದಳ, ಬೆಂಗಳೂರು ಅವರು ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
0 Comments