Ticker

6/recent/ticker-posts

Ad Code

Responsive Advertisement

ಕರ್ನಾಟಕ ಸ್ವಾಭಿಮಾನಿ ಎಸ್.ಸಿ-ಎಸ್.ಟಿ ಸಂಘಟನೆಗಳ ಒಕ್ಕೂಟದಿಂದ ಜು.11 ರಂದು ಜಿಲ್ಲಾಧಿಕಾರಿಗಳ ಕಛೇರಿಗೆ ಮುತ್ತಿಗೆ, ಆರೆಸ್ಟಾಗಿ ಜೈಲಿಗೆ ಹೋಗಲು ಸಿದ್ಧ- ವಿ.ಎಸ್.ಶಿವಶಂಕರ

ಬಳ್ಳಾರಿ ಜು.02:ರಾಜನಹಳ್ಳಿ ಗುರು ಪೀಠದ ಸ್ವಾಮಿಗಳು ಎಸ್.ಸಿ-ಎಸ್.ಟಿ ಮೀಸಲಾತಿಗೆ ಆಗ್ರಹಿಸಿ ಅನಿರ್ಧಿಷ್ಟಾವಧಿ ಹೋರಾಟ ನಡೆಸುತ್ತಿದ್ದು ಜು.11ಕ್ಕೆ 150 ದಿನಗಳು ಆಗುತ್ತಿದೆ. ಅಂದು ಬಳ್ಳಾಯ ಜಿಲ್ಲಾಧಿಕಾರಿಗಳ ಕಛೇರಿಗೆ  ನುಗ್ಗಿ ಬೀಗ ಹಾಕಲಾಗುತ್ತದೆ. ಆ ಸಮಯದಲ್ಲ ಆರೆಸ್ಟಾದರೂ ಜೈಲಿಗೆ ಹೋದರೂ ಚಿಂತೆಯಿಲ್ಲ ಮೀಸಲಾತಿ ಪಡೆದೆ ಪಡೆಯುತ್ತೇವೆ ಎಂದು ಕರ್ನಾಟಕ ಸ್ವಾಭಿಮಾನಿ ಎಸ್.ಸಿ-ಎಸ್.ಟಿ ಸಂಘಟನೆಗಳ ಒಕ್ಕೂಟ ಮತ್ತು ಮೀಸಲಾತಿ ಕ್ರಿಯೆ ಸಮಿತಿಯ ಸಂಚಾಲಕ ವಿ.ಎಸ್.ಶಿವಶಂಕರ ತಿಳಿಸಿದರು. ಅವರು ಖಾಸಗಿ ಹೋಟೆಲ್‍ನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತಾನಾಡುತ್ತಾ (ಪೂರ್ವಭಾವಿ ಸಭೆಯ ಮುನ್ನಾ) ಎಸ್.ಸಿ-ಎಸ್.ಟಿ ಗಳಿಗೆ ಜನಸಂಖ್ಯೆಗೆ ಅನುಗುಣವಾಗಿ ಉದ್ಯೋಗದಲ್ಲಿ ಮೀಸಲಾತಿಯನ್ನು ಹೆಚ್ಚಿಸಲು ನಿವೃತ್ತ ನ್ಯಾಯಾಮೂರ್ತಿ ನಾಗಮೋಹನ್ ದಾಸ್ ಆಯೋಗವು ಮಾಡಿರುವ ಶಿಫಾರಸ್ಸನ್ನು ಶಿಘ್ರವೇ ಜಾರಿಗೊಳಿಸಬೇಕು. ಮತ್ತು ಇನ್ನು ಹಲವು ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಲು ಜನಜಾಗೃತಿ ಹಮ್ಮಿಕೊಂಡಿದ್ದೇವೆ. ಜು.11ರಂದು ಜಿಲ್ಲಾಧಿಕಾರಿಗಳ ಕಛೇರಿಗೆ ಮುತ್ತಿಗೆಯ ಸಮಯದಲ್ಲಿ ಎಸ್.ಸಿ-ಎಸ್.ಟಿ ಸಮುದಾಯದ ಶಾಸಕರು ಸಹ ಕೈ ಜೋಡಿಸಲಿದ್ದಾರೆ ಎಂದರು. ಮೀಸಲಾತಿಗೆ ಆಗ್ರಹಿಸಿ ಕಳೆದ ಮುವತ್ತೈದು ವರ್ಷಗಳಿಂದ ನಡೆಯುತ್ತಿರುವ ಹೋರಾಟಕ್ಕೆ ಸಮುದಾಯದ ಶಾಸಕರು, ಸಂಸದರು, ಸಚಿವರ ಇಚ್ಛಾಶ್ಚಕ್ತಿ ಕೋರಿದ್ದಾರೆ ಹಾಗೂ ಇದಕ್ಕೆ ಎಲ್ಲಾ ಪಕ್ಷಗಳು ಅನ್ವಯವಾಗುತ್ತವೆ ಎಂದರು.


ಸರ್ಕಾರ ಈ ಹಿಂದೆ ಆರ್‍ಡಿ ವರದಿಯನ್ನು ಮಾಡಲು ತಿಳಿಸಿದ್ದು ಇದು ಅಗತ್ಯವಿಲ್ಲ ಮತ್ತು ಇದನ್ನು ವಾಪಾಸು ಪಡೆಯುತ್ತೇವೆ ಎಂದಿರುವ ಸಚಿವರು ಬೇರೆ ಬೇರೆ ಜಿಲ್ಲೆಗಳಿಗೆ ಹೋದಲ್ಲೆಲ್ಲ ವಿಭಿನ್ನ ಹೇಳಿಕೆ ನೀಡುವ ಮೂಲಕ ಭರವಸೆಯಿಂದ ಜಾರಿಕೊಳ್ಳುತ್ತಿದ್ದಾರೆ ಈ ಎಲ್ಲಾ ಕಾರಣಕ್ಕಾಗಿ ಜು.11 ರಂದು ಸರ್ಕಾರಕ್ಕೆ ಬಿಸಿ ಮುಟ್ಟಿಸಲು ಈ ಹೋರಾಟವನ್ನು ಹಮ್ಮಿಕೊಂಡಿದ್ದೇವೆ ಎಂದರು. ನಂತರ ಮಾತಾನಾಡಿದ ಮುಂಡ್ರಿಗಿ ನಾಗರಾಜ್ ನಮಗೆ ಆಗ  ದ್ವನಿ ಎತ್ತಲು ಧ್ವನಿ ಇರಲಿಲ್ಲ, ಡಾ.ಬಿ.ಆರ್.ಅಂಬೇಡ್ಕರ್ ಅವರು ಸಂವಿಧಾನ ರಚಿಸಿದಾಗಿನಿಂದ ಹಿಂದುಳಿದರಿಗೆ ಧ್ವನಿ ಬಂದಿದೆ. ಅಂದಿನಿಂದ ಹೋರಾಟದ ಮೂಲಕ ನ್ಯಾಯಕ್ಕಾಗಿ ಹೋರಾಡುತ್ತಿದ್ದೇವೆ ಎಂದರು.  ಈ ಪತ್ರಿಕಾಗೋಷ್ಠಿಯಲ್ಲಿ ಎಸ್.ಸಿ-ಎಸ್.ಟಿ ಮುಖಂಡರುಗಳಾದ ಶಿವಶಂಕರಪ್ಪ, ಮುಂಡಿಗೆ ನಾಗರಾಜ್, ಜಯರಾಮ್, ತೆಕ್ಕಲಕೋಟೆ ಸಿದ್ದಪ್ಪ, ಮಾನಯ್ಯ, ಮಹಾನಗರ ಪಾಲಿಕೆ ಸದಸ್ಯ ಹನುಮಂತಪ್ಪ, ಯರ್ರಿಸ್ವಾಮಿ, ವೀರೇಶಪ್ಪ, ಶಿವರುದ್ರಪ್ಪ, ವಿಜಯ್ ಕುಮಾರ್ ಸೇರಿದಂತೆ ಇನ್ನೂ ಹಲವಾರು ಮುಖಂಡರುಗಳು, ಸದಸ್ಯರುಗಳು ಭಾಗವಹಿಸಿದ್ದರು.




 


Post a Comment

0 Comments

Ad Code

Responsive Advertisement