ಬಳ್ಳಾರಿ ಜುಲೈ 02: ವಿಶ್ವ ಆಹಾರ ಕಾರ್ಯಕ್ರಮದ ವರದಿಯ ಆಧಾರದ ಮೇಲೆ ಕೇಂದ್ರ
ಸರ್ಕಾರ ನ್ಯಾಯ ಬೆಲೆ ಅಂಗಡಿ ಮಾಲೀಕರಿಗೆ ಪ್ರತಿ ಕ್ವಿಂಟಾಲ್ ಗೆ 440 ರೂ.ಕಮಿಶನ್ ನೀಡುವುದು ಸೇರಿದಂತೆ ನಾನಾ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಒತ್ತಾಯಿಸಿ ಜೂ.5 ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ ಬಳಿ ಬೃಹತ್ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ರಾಜ್ಯ ಸರ್ಕಾರಿ ಪಡಿತರ ವಿತರಕರ ಸಂಘದ ಕಾರ್ಯಾಧ್ಯಕ್ಷ ಮೀನಳ್ಳಿ ತಾಯಣ್ಣ ಅವರು ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಶುಕ್ರವಾರ ನಡೆದ ಸುದ್ದಿಗೋಷ್ಢಿಯಲ್ಲಿ ಮಾತನಾಡಿದರು. ದೇಶದ ಗೋವಾ, ಕೇರಳ, ವೆಸ್ಟ್ ಬೆಂಗಾಲ್ ಸೇರಿದಂತೆ ನಾನಾ ರಾಜ್ಯಗಳಲ್ಲಿ ಪ್ರತಿ ಕ್ವಿಂಟಾಲ್ ಗೆ 300-350 ರೂ.ಕಮಿಷನ್ ನೀಡುತ್ತಿದ್ದು, ಇದೇ ಮಾದರಿಯಲ್ಲೇ ನಮ್ಮ ರಾಜ್ಯದ ಅಂಗಡಿ ಮಾಲೀಕರಿಗೂ ಪ್ರತಿ ಕ್ವಿಂಟಾಲ್ ಗೆ 440 ರೂ.ಕಮಿಶನ್ ವಿತರಿಸಬೇಕು, ರಾಜ್ಯಾದ್ಯಂತ ನಾನಾ ಕಡೆ 60 ವರ್ಷ ಮೇಲ್ಪಟ್ಟ ಅಂಗಡಿ ಮಾಲೀಕರಿದ್ದು, ಅವರ ಕುಟುಂಬದ ಸದಸ್ಯರಿಗೇ ಮತ್ತೆ ಪರವಾನಿಗೆ ನೀಡಬೇಕು, ಕಳೆದ 3-4 ತಿಂಗಳ ಬಾಕಿ ಕಮಿಶನ್ ಕೂಡಲೇ ವಿತರಿಸಬೇಕು, ಪ್ರತಿ ತಿಂಗಳು 30 ರಂದು ರಾಜ್ಯದ ಎಲ್ಲ ಅಂಗಡಿ ಮಾಲೀಕರಿಗೆ ಕಮಿಷನ್ ವಿತರಿಸಬೇಕು, ವಿದ್ಯುನ್ಮಾನ ಯಂತ್ರ ಮೂಲಕವೇ ಪಡಿತರ ಧಾನ್ಯಗಳನ್ನು ತೂಕ ಮಾಡಿ ವಿತರಿಸುವ ವ್ಯವಸ್ಥೆಯಾಗಬೇಕು ಸೇರಿದಂತೆ ನಾನಾ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಬೆಂಗಳೂರಿನ ಫ್ರೀಡಂ ಪಾರ್ಕ್ ಬಳಿ ಜೂ.5ರಂದು ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ರಾಜ್ಯದಾದ್ಯಂತ ಇರುವ ಎಲ್ಲ ನ್ಯಾಯ ಬೆಲೆ ಅಂಗಡಿಗಳ ಮಾಲೀಕರ ಸಂಘದ ತಾಲೂಕು ಅಧ್ಯಕ್ಷರು, ಕಾರ್ಯದರ್ಶಿಗಳು, ಜಿಲ್ಲಾಧ್ಯಕ್ಷರು, ತಾಲೂಕು ಕಾರ್ಯದರ್ಶಿ ಗಳು, ವಿಎಸ್ ಎಸ್ ಎನ್ ಕಾರ್ಯದರ್ಶಿಗಳು, ಎಲ್ಲ ನ್ಯಾಯ ಬೆಲೆ ಅಂಗಡಿಗಳ ಮಾಲೀಕರು, ಸೀಮೆಎಣ್ಣೆ ವಿತರಕರು, ಹಮಾಲಿ ಕಾರ್ಮಿಕರು, ಲಾರಿ ಮಾಲೀಕರು ಈ ಪ್ರತಿಭಟನೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು.
ಅಕ್ಕಿ, ಗೋದಿ, ಸಕ್ಕರೆ ಸೇರಿ ಇತರೇ ಪಡಿತರ ದಾನ್ಯಗಳಲ್ಲಿ ಕ್ವಿಂಟಾಲ್ ಗೆ 1ಕೇ. ಜಿ ನಿರ್ವಹಣೆ ನಷ್ಟವನ್ನು ನೀಡುವ ಒಪ್ಪಂದದ ಆಧಾರದ ಮೇಲೆ ಇದನ್ನು ಎಲ್ಲ ರಾಜ್ಯಗಳಲ್ಲಿ ತಕ್ಷಣವೇ ಜಾರಿಗೊಳಿಸಬೇಕು, ದೇಶದ ಹೆಚ್ಚಿನ ಜನಸಂಖ್ಯೆ ಆಹಾರದ ಜೊತೆಗೆ ತೈಲ, ಬೇಳೆ, ಸಕ್ಕರೆ, ಹಾಗೂ ದಿನ ನಿತ್ಯ ಬೇಕಾಗುವ ಆಹಾರ ಪದಾರ್ಥಗಳನ್ನು ಅನುಮತಿ ಕೊಡಬೇಕು, ದೇಶದ ಎಲ್ಲ ಜಿಲ್ಲೆಗಳಲ್ಲಿ ವಿತರಕರ ಮೂಲಕ ಗ್ರಾಹಕರಿಗೆ ವಿತರಿಸುವ ಎಲ್ ಪಿ ಜಿ ಗ್ಯಾಸ್ ಸೇರಿ ಕೆಲವು ಗ್ರಾಹಕರನ್ನು ಪಡಿತರ ಅಂಗಡಿಗಳೊಂದಿಗೆ ಜೋಡಿಸಲು ಹಾಗೂ ಎಲ್ ಪಿ ಜಿ ಸಿಲೆಂಡರ್ ಗಳನ್ನು ಮಾರಾಟ ಮಾಡಲು ಅವಕಾಶ ಕಲ್ಪಿಸಬೇಕು, ಇದು ಪಡಿತರ ಅಂಗಡಿಗಳ ಕಾರ್ಯ ಸಾಧ್ಯತೆಯನ್ನು ಹೆಚ್ಚಿಸಲಿದೆ, ಹಾಗೂ ಸಾರ್ವಜನಿಕರು ಅದರ ಪ್ರಯೋಜನವನ್ನು ಸುಲಭವಾಗಿ ಪಡೆಯಲು ಅವಕಾಶ ಮಾಡಿಕೊಡಬೇಕು ಸೇರಿದಂತೆ ನಾನಾ ಪ್ರಮುಖ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ, ಇದರ ಯಶಸ್ವಿಗೆ ಸಹಕರಿಸಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಕಾರ್ಯಾಧ್ಯಕ್ಷ ವೆಂಕಟೇಶ ಹೆಗಡೆ, ಸಿರಗುಪ್ಪ ತಾಲ್ಲೂಕು ಅದ್ಯಕ್ಷ ಮಲ್ಲಿಕಾರ್ಜುನ ಕೊಡ್ಲೆ, ಬಳ್ಳಾರಿ ಅದ್ಯಕ್ಷ ಜಗನ್ನಾಥ ಗೌಡ, ನಗರ ಅಧ್ಯಕ್ಷ ಪಾಲಾಕ್ಷಗೌಡ, ಕಾರ್ಯದರ್ಶಿ ಸಿದ್ದಪ್ಪ, ರಾಜ್ಯ ಕಾರ್ಯಕಾರಿಣಿ ಸದಸ್ಯ ಹೇಮಣ್ಣ ಇತರರಿದ್ದರು.
.jpg)
0 Comments