ಜೂನ್ ತಿಂಗಳು ಪ್ರಾರಂಭವಾದಾಗ ಈಶ್ವರೀಯ ವಿಶ್ವ ವಿದ್ಯಾಲಯದಲ್ಲಿ ಅಖಂಡ ಯೋಗ, ತಪಸ್ಸಿನ ಕಾರ್ಯಕ್ರಮಗಳು ನಡೆಯುತ್ತವೆ. ಸುಮಾರು 10 ಲಕ್ಷ ಅನುಯಾಯಿಗಳು ತಮ್ಮ ಆತ್ಮೋನ್ನತಿಗಾಗಿ ಹೆಚ್ಚಿನ ಸಾಧನೆಯ ಪಥದಲ್ಲಿ ಸಾಗುತ್ತಾರೆ. ಸದ್ಗುಣಗಳ ಧಾರಣೆಯಿಂದ ಅಂತರಂಗ ಶುದ್ಧಿ ಮಾಡಿಕೊಳ್ಳುತ್ತಾರೆ. ಅದಕ್ಕೆ ಕಾರಣೀಭೂತರು ಮತ್ತು ಪ್ರೇರಣಾದಾಯಕ ಶಕ್ತಿಯೇ ಮಾತೇಶ್ವರಿ ಜಗದಂಬಾ ಸರಸ್ವತಿ. ಆವರ ಪುಣ್ಯತಿಥಿಯನ್ನು ವಿಶ್ವದಾದ್ಯಂತ ಜೂನ್ 24 ರಂದು 8500 ಸೇವಾಕೇಂದ್ರಗಳಲ್ಲಿ ಆಧ್ಯಾತ್ಮಿಕ ಜ್ಞಾನದಿನವೆಂದು ಆಚರಿಸಲಾಗುತ್ತದೆ.
ವೇದಗಳಲ್ಲಿ ಮಾತೆಗೆ ನಿರ್ಮಾತೆ ಎಂದು, ಕುರಾನ್‍ನಲ್ಲಿ ತಾಯಿಯ ಹೆಜ್ಜೆಯಲ್ಲಿ ಸ್ವರ್ಗವಿದೆ ಎಂದು ಹೇಳಲಾಗಿದೆ. ಮಾತಾ-ಪಿತರನ್ನು ಗೌರವದಿಂದ ಕಾಣಬೇಕೆಂದು ಬೈಬಲ್‍ನಲ್ಲಿ ಹೇಳಲಾಗಿದೆ. ಗುರುಗ್ರ್ರಂಥ ಸಾಹೇಬದಲ್ಲಿ ಮಾತೆಗೆ ಮಾನ್ಯತೆ ನೀಡಲಾಗಿದೆ. ಭೂಮಿಗಿಂತಲೂ ಮಾತೆಯೇ ಮಹಾನ್ ಎಂದು ವೇದವ್ಯಾಸರು ಹೇಳಿದ್ದಾರೆ. ಮಾತೆಯೇ ಮೊದಲ ಗುರು ಎಂಬ ಮಹಿಮೆ ಇದೆ. ಪುತ್ರನು ಕುಪುತ್ರನಾಗಬಲ್ಲನು, ಆದರೆ ಮಾತೆ ಕುಮಾತೆ ಆಗುವುದಿಲ್ಲ ಎಂಬ ಗಾದೆ ಮಾತು ಇದೆ.
ಜಗದಂಬಾ ಸರಸ್ವತಿ ಅವರ ಜನ್ಮವು 1919 ರಲ್ಲಿ ಅಮೃತಸರದಲ್ಲಿ ಆಯಿತು. ಅವರ ಲೌಕಿಕ ಹೆಸರು `ರಾಧೆ'. ಅವರ ತಂದೆಯ ಹೆಸರು `ಪೋಕರದಾಸ' ಮತ್ತು ತಾಯಿಯ ಹೆಸರು `ರೋಚ'. ಅವರ ತಂದೆ ಬೆಳ್ಳಿ ಬಂಗಾರದ ವ್ಯಾಪಾರದ ಜೊತೆಗೆ ತುಪ್ಪದ ಹೋಲ್‍ಸೇಲ್ ವ್ಯಾಪಾರಿ ಆಗಿದ್ದರು. ಅವರ ವ್ಯಾಪಾರವು ಮುಂಬಯಿ, ಚೆನ್ನೈ ಮತ್ತು ಶ್ರೀಲಂಕಾದಲ್ಲಿ ನಡೆಯತ್ತಿತ್ತು. ಆಕಸ್ಮಿಕವಾಗಿ ಹೃದಯಘಾತದಿಂದ ಅವರ ನಿಧನವಾಯಿತು. ನಂತರ ರಾಧೆ ತನ್ನ ಸಹೋದರಿ ಗೋಪಿ ಮತ್ತು ತಾಯಿಯ ಜೊತೆಗೆ ಸಿಂಧ್ ಹೈದರಾಬಾದ್‍ನಲ್ಲಿರುವÀ ತಮ್ಮ ಅಜ್ಜಿಯ ಮನೆಗೆ ಬಂದರು. ಅಲ್ಲಿಯೇ ಅವರು ಕುಂದನಮಲ್ ಮಾಡೆಲ್ ಸ್ಕೂಲ್‍ನಲ್ಲಿ ಮೆಟ್ರಿಕ್ ತನಕ ಓದಿದರು. ಲೌಕಿಕ ವಿದ್ಯೆಯ ಜೊತೆಗೆ ಹಾಡುಗಾರಿಕೆ ಮತ್ತು ನೃತ್ಯದಲ್ಲಿಯೂ ಅವರು ಪ್ರಥಮ ಸ್ಥಾನ ಪಡೆಯತ್ತಿದ್ದರು. ಅವರ ವ್ಯಕ್ತಿತ್ವವನ್ನು ನೋಡಿದಾಗ ದಿವ್ಯಲೋಕದಿಂದ ಬಂದಿರುವ ದೇವಿಯಂತೆ ಭಾಸವಾಗುತ್ತಿತ್ತು. ಅವರು ಪ್ರತಿಭಾವಂತ ಹಾಗೂ ಚಮತ್ಕಾರಿ ಬುದ್ಧಿಯುಳ್ಳವವರಾಗಿದ್ದರು. ವೀಣಾವಾದನ ಹಾಗೂ ಗಾಯನ ಕಲೆಯಲ್ಲಿ ನಿಪುಣರಾಗಿದ್ದರು.
1937 ರಲ್ಲಿ ದಾದಾ ಲೇಖರಾಜ ಅವರ ಮೂಲಕ ನಿರಾಕಾರ ಶಿವ ಪರಮಾತ್ಮನು ಈಶ್ವರೀಯ ವಿಶ್ವ ವಿದ್ಯಾಲಯದ ಸ್ಥಾಪನೆ ಮಾಡಿದರು. ಆಗ ಅವರ ಮನೆಯಲ್ಲಿ ನಡೆಯುವ ಸತ್ಸಂಗಕ್ಕೆ ತಾಯಿಯ ಜೊತೆ `ರಾಧೆ' ಹೋಗುತ್ತಿದ್ದರು. ಅವರು ಸತ್ಸಂಗದಲ್ಲಿ ಓಂ ಧ್ವನಿ ನುಡಿಸುತ್ತಿದ್ದರು. ಆಗ ಬ್ರಹ್ಮಾಬಾಬಾರವರು ಅವರ ಹೆಸರನ್ನು ‘ಓಂ ರಾಧೆ’ ಎಂದು ಇಟ್ಟರು. ಮಾತೆಯರು ಅಥವಾ ಕನ್ಯೆಯರನ್ನು ನೀವು ಎಲ್ಲಿಗೆ ಹೋಗುತ್ತಿದ್ದೀರಿ? ಎಂದು ಯಾರಾದರೂ ಕೇಳಿದಾಗ ಅವರು ಓಂ ರಾಧೆಯ ಹತ್ತಿರ ಹೋಗುತ್ತಿದ್ದೇವೆ; ಅವರು ನಮಗೆ ಓಂ ಧ್ವನಿ ಹೇಳುವುದನ್ನು ಕಲಿಸಿಕೊಡುತ್ತಾರೆ ಮತ್ತು ಅದರ ಅರ್ಥವನ್ನು ತಿಳಿಸಿ ಅದರಲ್ಲಿ ಏಕಾಗ್ರವಾಗುವುದನ್ನು ಕಲಿಸಿಕೊಡುತ್ತಾರೆ ಎಂದು ಹೇಳುತ್ತಿದ್ದರು.
`ರಾಧೆsÀ' ಅವರಿಗೆ ಮಧುರ ಹಾಗೂ ಪ್ರಭಾವಶಾಲಿ ವಾಣಿಯ ವರದಾನವು ಜನ್ಮದಿಂದಲೇ ಪ್ರಾಪ್ತವಾಗಿತ್ತು. ಅವರ ಮುಖಕಮಲದಿಂದ ಬಂದಿರುವ ವರದಾನಿ ಮಹಾವಾಕ್ಯಗಳಿಂದ ಅನೇಕರಲ್ಲಿ ಪರಿವರ್ತನೆ ಕಂಡುಬರುತಿತ್ತು. ಅವರು ನಿಜವಾಗಿಯೂ e್ಞÁನದ ಸತ್ಯದೇವಿ ಆಗಿದ್ದರು. ತ್ಯಾಗ, ತಪಸ್ಸು, ಸೇವೆಯ ಪ್ರತೀಕವಾಗಿದ್ದರು. `ರಾಧೆsÀ' ಅವರು ತಮ್ಮ ವಿಶಾಲ ಬುದ್ಧಿಯಿಂದ ಪರಮಾತ್ಮನ ದಿವ್ಯ ಸಂದೇಶವನ್ನು ಮಾತೃವಾತ್ಸಲ್ಯದಿಂದ ನೀಡಿದರು. ಅವರಲ್ಲಿ ಇರುವ ಮಾತೃ-ಸ್ವರೂಪವನ್ನು ಜನರು ಕಂಡು `ಮಮ್ಮಾ' ಎಂಬ ಬಿರುದನ್ನು ನೀಡಿದರು. ಪರಮಪಿತ ಪರಮಾತ್ಮನು ಅವರಿಗೆ `ಜಗದಂಬಾ ಸರಸ್ವತಿ' ಎಂಬ ಅಮರ ವರದಾನವನ್ನು ನೀಡಿ `ಜಗನ್ಮಾತೆ' `ಜಗತ್‍ಜನನಿ' ಎಂಬ ಬಿರುದು ನೀಡಿದನು. ಅವರಲ್ಲಿ ಇರುವ ಗಂಭೀರತೆ, ಮಧುರತೆ, ಹರ್ಷಿತಮುಖತೆಯಿಂದ ಮಾತೆಯ ಮಮತೆ ಅನುಭವಾಗುತಿತ್ತು. ಅವರು ಕುಶಲ ಆಡಳಿತಗಾರರು ಆಗಿದ್ದರು. ಕರ್ಮಯೋಗಿಯ ಜೀವನದಲ್ಲಿ ಎರಡು ನಿಯಮಗಳ ಪಾಲನೆಯ ಕಡೆಗೆ ಅವರು ವಿಶೇಷ ಗಮನ ಹರಿಸಿದರು. 1.ಒಮ್ಮೆ ಮಾಡಿದ ತಪ್ಪನ್ನು ಮತ್ತೊಮ್ಮೆ ಮಾಡಬಾರದು, 2.ಭಗವಂತನ ಶಿಕ್ಷಣವನ್ನು ತಮ್ಮ ಜೀವನದಲ್ಲಿ ಸಂಪೂರ್ಣ ಪಾಲಿಸುವುದು.
ಮಮ್ಮಾರವರ ಜೀವನದಲ್ಲಿ ಜೀವನ ಪರಿವರ್ತನೆ ಮಾಡುವ ಅನೇಕ ಸತ್ಯ ಘಟನೆಗಳು ನಡೆದವು. ಅದರಲ್ಲಿ ಒಂದು ಘಟನೆ ಈ ರೀತಿಯಾಗಿದೆ. ಒಬ್ಬ ಜಾಗತಿಕ ಮಟ್ಟದ ಶ್ರೀಮಂತ ವ್ಯಾಪಾರಿ ಪಾರ್ಟಿಗಳಲ್ಲಿ ದುಂದು ವೆಚ್ಚ ಮಾಡುತ್ತಿದ್ದರು. ಅವರು ಸತ್ಸಂಗಕ್ಕೆ ಬರಲು ಅರಂಭಿಸಿದರು. ಮಮ್ಮಾರವರು ಜ್ಞಾನದ ತರಗತಿಗಳನ್ನು ನೀಡಿದರು. ‘ನಿಮ್ಮ ಶರೀರ ಮಂದಿರವಾಗಿದೆ, ನೀವು ಅದರಲ್ಲಿರುವ ಚೈತನ್ಯ ಮೂರ್ತಿ ಆಗಿದ್ದೀರಿ. ಮಂದಿರದಲ್ಲಿರುವ ಮೂರ್ತಿಗಳಗೆ ನೀವು ಪವಿತ್ರ ಶುದ್ಧ ನೈವೇದ್ಯ ನೀಡುತ್ತೀರಿ. ಆದರೆ ನಿಮ್ಮ ಶರೀರದಲ್ಲಿ ಇರುವ ಮೂರ್ತಿಗೆ ಯಾವ ನೈವೇದ್ಯ ಅರ್ಪಣೆ ಮಾಡುವಿರಿ?’ ಈ ಹಿತವಚನಗಳ ಪ್ರಭಾವದಿಂದ ಅವರು ಅಂದಿನಿಂದ ಎಲ್ಲಾ ದುಶ್ಚಟಗಳನ್ನು ಬಿಟ್ಟರು. ನಾನು ಸತ್ತು ಹೋದರೂ ಚಿಂತೆಯಿಲ್ಲ, ಮತ್ತೆ ಹಳೆಯ ಮಾರ್ಗದಲ್ಲಿ ನಡೆಯುವುದಿಲ್ಲ’ ಎಂದು ಮಮ್ಮಾರವರಿಗೆ ವಚನ ನೀಡಿದರು. ಒಂದು ಸಾರಿ ಕಾಯಿಲೆ ಬಂದಾಗ ವೈದ್ಯರು ಶ್ರೀಮಂತ ವ್ಯಾಪಾರಿಗೆ ಧೂಮ್ರಪಾನ ಮತ್ತು ಮದ್ಯಪಾನ ಮಾಡಲು ಸಲಹೆ ನೀಡಿದರು. ಇಲ್ಲವಾದರೆ ನೀವು ಸಾಯುತ್ತಿರಿ ಎಂದು ಹೇಳಿದರು. ಆದರೆ ಅವರು ಸಲಹೆ ನಿರಾಕರಿಸಿದರು. ತಮ್ಮ ಶುಭ ಸಂಕಲ್ಪದಿಂದಲೇ ಸ್ವಲ್ಪ ಸಮಯದಲ್ಲಿ ಗುಣಮುಖರಾದರು.
ಈಶ್ವರೀಯ ನಿಯಮಗಳ ಪಾಲನೆ ಮಾಡುವವರಲ್ಲಿ ಕಾಳಿ ರೂಪವನ್ನು ಅವರು ತಾಳಿದರು. ಸರ್ವರ ಮನೋಕಾಮನೆಗಳನ್ನು ಪೂರ್ಣಗೊಳಿಸಿ ಅನ್ಯರಿಗೆ ಮಹಾದಾನಿ-ವರದಾನಿ ಆಗಿ, ವಿಷಯ-ವಿಕಾರಗಳಿಂದ ಮುಕ್ತ ಮಾಡಿದರು. ಮಧುರತೆ, ಕೋಮಲತೆ, ಸ್ನೇಹ, ನಿರ್ಮಲತೆ, ಸರಳತೆ, ನಮ್ರತೆ, ಶಾಂತತೆ, ಪವಿತ್ರತೆ, ಮುಂತಾದ ದೈವಿಗುಣಗಳು ಹಾಗೂ ಕಲೆಗಳನ್ನು ಕಲಿಯಲು ಅವರ ಜೀವನ ಅನೇಕರಿಗೆ ಪ್ರೇರಣಾದಾಯಕವಾಗಿದೆ. `ಜಗದಂಬಾ ಸರಸ್ವತಿ' ಅವರು 24-06-1965 ರಂದು ತಮ್ಮ ಸಾಕಾರ ದೇಹವನ್ನು ತ್ಯಜಿಸಿದರು. ಈ ಸ್ಮøತಿದಿನವನ್ನು ವಿಶ್ವದಾದ್ಯಂತ ಆಧ್ಯಾತ್ಮಿಕ ಜ್ಞಾನದಿನವೆಂದು ಆಚರಿಸಲಾಗುತ್ತದೆ.
.jpg)
0 Comments