Ticker

6/recent/ticker-posts

Ad Code

Responsive Advertisement

ರಾಷ್ಟ್ರೀಯ ವೈದ್ಯರ ದಿನ

ಭಾರತದಲ್ಲಿ ಪ್ರತಿವರ್ಷಜುಲೈ 1 ರಂದು ರಾಷ್ಟ್ರೀಯ ವೈದ್ಯರ ದಿನವಾಗಿ ಆಚರಿಸಲಾಗುತ್ತದೆ. ಈ ವರ್ಷ ರಾಷ್ಟ್ರೀಯ ವೈದ್ಯರ ದಿನದ ವಿಷಯ “ಕುಟುಂಬ ವೈದ್ಯರ ಪ್ರಮುಖ ಪಾತ್ರ”. ಜಗತ್ತಿನಲ್ಲಿ ಸಾಂಕ್ರಾಮಿಕ ಕಾಯಿಲೆಗಳ ಕರಿಮೋಡಕ ವಿದಾಗ ಜನಸಾಮಾನ್ಯರ ರಕ್ಷಣೆಯಲ್ಲಿ ವೈದ್ಯರ ಪಾತ್ರ ಬಹುಮುಖ್ಯವಾಗಿರುತ್ತದೆ.ಅವರು ತಮ್ಮ ಸರ್ವಸ್ವವನ್ನು ಅರ್ಪಣೆ ಮಾಡಿ ಸೇವೆಗಾಗಿ ನಿಂತಿರುತ್ತಾರೆ.ಅದಕ್ಕೆ ಅವರನ್ನು “ವೈದ್ಯೋನಾರಾಯಣೋ ಹರಿ: ಧನ್ವoತರಿ”ಎಂದು ಮಹಿಮೆ ಮಾಡುತ್ತಾರೆ.

ವಿಶ್ವದಲಿ (ಕೋವಿಡ್-19)ಮಹಾಮಾರಿ ಎರಡು ವರ್ಷ ಕಳೆದರೂ ಸಂಪೂರ್ಣವಾಗಿ ಮಾಯವಾಗಿಲ್ಲ. ಅದರ ಬಹುರೂಪಗಳಾದ ಡೆಲ್ಟಾ ಫ್ಲಸ್, ಒಮಿಕ್ರಾನ್ ಬಿ.ಎ-2, ಬಿ.ಎ-5 ಮತ್ತು ಜೊತೆಗೆ ಪ್ಲೇಗ್, ಫ್ಲೂ, ಏಡ್ಸ್, ಎಬೋಲಾ ಇತರೆ ರೋಗಗಳು ತಾಂಡವವಾಡುತ್ತಿವೆ.ಎರಡು ವರ್ಷಗಳ ಸಂಕಟಕಾಲದಲ್ಲಿ ವೈದ್ಯರುಯೋಧರ ಪಾತ್ರವನ್ನು ನಿಭಾಯಿಸಿದ್ದಾರೆ. ಈ ಪರಿಸ್ಥಿತಿಯಲ್ಲಿ ಸಾರ್ವಜನಿಕ ಸುರಕ್ಷೆ ಹಾಗೂ ಸಾಮಾಜಿಕ ಆರೋಗ್ಯ ಕಾಪಾಡಲು ಅವರ ಪ್ರಯತ್ನ ಶ್ಲಾಘನೀಯವಾಗಿದೆ.

ದೇಶ-ರಕ್ಷಣೆ ಕಾರ್ಯವನ್ನು ಮಾಡುತ್ತಾರೆ. ಆದರೆ ಅನೇಕ ಮಹಾಮಾರಿಗಳಿಂದ ರಕ್ಷಣೆ ಹಾಗೂ ದೀರ್ಘಾಯುಷ್ಯ ಕೊಡುವ ಜವಾಬ್ದಾರಿಯನ್ನು ವೈದ್ಯರು ನಿಭಾಯಿಸುತ್ತಾರೆ.ಯುದ್ಧದಲ್ಲಿ ಸೈನಿಕರು ಘಾಯಗೊಂಡಾಗ ಅವರನ್ನು ವೈದ್ಯರು ಔಷಧೋಪಚಾರ ಮಾಡುತ್ತಾರೆ.ಯಾರು ತಮ್ಮ ಜೀವವನ್ನು ಲೆಕ್ಕ್ಕಿಸದೇ ಬೇರೆಯವರ ರಕ್ಷಣೆ ಮಾಡುತ್ತಾರೆಯೋಅವರೇ ನಿಜವಾದ ವೈದ್ಯರು. ಅವರು ಮಾಡುವ ನಿಸ್ವಾರ್ಥ ಸೇವೆಯನ್ನು ಶಬ್ದಗಳಲ್ಲಿ ವರ್ಣಿಸಲುಅಸಾಧ್ಯ.

ಭಾರತದಲ್ಲಿ ರಾಷ್ಟ್ರೀಯ ವೈದ್ಯರ ದಿನವನ್ನು ಜುಲೈ 1, 1991ರಂದು ಡಾ|| ಭಿಧಾನಚಂದ್ರರಾಯ್‍ರವರು ಆರೋಗ್ಯ ಕ್ಷೇತ್ರದಲ್ಲಿ ಮಾಡಿರುವಗಣನೀಯ ಸೇವೆಯ ಸ್ಮರಣಾರ್ಥ ಆಚರಿಸಲಾಯಿತು. ಜುಲೈ1, ಅವರ ಸ್ಮøತಿದಿನ ಮತ್ತು ಜನ್ಮದಿನವಾಗಿರುವುದು ವಿಶೇಷ. ಡಾ|| ಭಿಧಾನಚಂದ್ರರಾಯ್‍ರವರು ಸುಪ್ರಸಿದ್ಧ ವೈದ್ಯರು, ಸ್ವಾತಂತ್ರ್ಯವೀರರು, ಶಿಕ್ಷಣತಜ್ಞರು ಮತ್ತು ರಾಜಕಾರಣಿ ಆಗಿದ್ದರು.  ಅವರು 14 ವರ್ಷಗಳ (1948-1962)  ಕಾಲ ಪಶ್ಚಿಮ ಬಂಗಾಳದ ಮುಖ್ಯಮಂತ್ರಿಯಾಗಿದ್ದರು. 1961 ರಲ್ಲಿ ಭಾರತರತ್ನ ನೀಡಿ ಅವರನ್ನು ಗೌರವಿಸಲಾಯಿತು. ಅವರು ತಮ್ಮ ಅಮೂಲ್ಯ ಜೀವನವನ್ನು ಲೋಕಕಲ್ಯಾಣಕ್ಕಾಗಿ ಮುಡುಪಾಗಿಟ್ಟಿದ್ದರು. ಅನೇಕರ ಸೇವೆ ಮಾಡಿ ಪ್ರೇರಣೆಯನ್ನು ನೀಡಿದರು. ಮಹಾತ್ಮಗಾಂಧೀಜಿಯವರಿಗೆ  ನಿಜಿ ವೈದ್ಯರಾಗಿದ್ದರು.

ವೈದ್ಯರು ಸಮಾಜದಲ್ಲಿಒಂದು ಮಹತ್ವದ ಪಾತ್ರ ನಿಭಾಯಸುತ್ತಾರೆ. ರೋಗಿಗಳಿಗೋಸ್ಕರ ತಮ್ಮಜೀವನವನ್ನು ಸರ್ಮಪಿತ ಮಾಡುತ್ತಾರೆ. ಕಾಯಿಲೆಗಳಿಂದ ಬೇಗ ಗುಣಪಡಿಸಲು ಸಹಾಯ ಮಾಡುತ್ತಾರೆ. ಸದಾ ನಿರೋಗಿಯಾಗಿರಲು ಮಾರ್ಗದರ್ಶನ ನೀಡುತ್ತಾರೆ. ಅವರೇ ಕುಟುಂಬ ವೈದ್ಯರು. (ಫ್ಯಾಮಿಲಿ ಡಾಕ್ಟರ್). ಇವರ ಅವಶ್ಯಕತೆ ಪ್ರತಿಯೊಂದು ಪರಿವಾರಕ್ಕೆ ಇದೆ. ಅವರ  ಕುಟುಂಬಕ್ಕೆ ಭರವಸೆ ನೀಡುವ ಸದಸ್ಯರಾಗಿರುತ್ತಾರೆ. ಅವರ ಕೊಡುವ ಸಲಹೆ-ಸೂಚನೆಯನ್ನು ಪಾಲನೆ ಮಾಡಲಾಗುತ್ತದೆ. ಕುಟುಂಬ ವೈದ್ಯರುಇರುವುದರಿಂದಅನಾವಶ್ಯಕಚಿಂತೆ ಮತ್ತು ಒತ್ತಡಗಳಿಂದ ದೂರವಾಗಬಹುದು. ಇದರಿಂದ ಸಮಯದ ಉಳಿತಾಯ ಮಾಡಬಹುದು.

ಕರೋನ-19 ಪೆಡಂಭೂತದ ಸಮಯದಲ್ಲಿ ಅನೇಕ ವೈದ್ಯರು(ಕರೋನ ವಾರಿರ್ಯಸ್) ಮಾಡಿರುವ ವಿಶೇಷ ಮತ್ತು ನಿಸ್ವಾರ್ಥಸೇವೆಗಾಗಿ ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯದ ಅಂಗ ಸಂಸ್ಥೆಯಾದ ರಾಜಯೋಗ ಶಿಕ್ಷಣ ಮತ್ತು ಸಂಶೋಧನಾ ಪ್ರತಿಷ್ಠಾನದ ಆರೋಗ್ಯ ವಿಭಾಗವು ತಮ್ಮ ಸೇವಾಕೇಂದ್ರಗಳಲ್ಲಿ ಅವರನ್ನು ಗೌರವಿಸಿ ಸನ್ಮಾನ ಮಾಡಲಿದೆ. ಸರ್ವೊಚ್ಚ ವೈದ್ಯನಾದ ನಿರಾಕಾರ ಭಗವಂತಎಲ್ಲಾ ವೈದ್ಯರಿಗೆ ಆರೋಗ್ಯ, ಆಯುಷ್ಯ, ನೆಮ್ಮದಿ ಮತ್ತು ಶಾಂತಿನೀಡಲೆಂದು ಹಾರೈಸೋಣ.  

--ಬ್ರ.ಕು.ವಿಶ್ವಾಸ ಸೋಹೋನಿ.

ಬ್ರಹ್ಮಾಕುಮಾರೀಸ್, ಮೀಡಿಯಾ ವಿಂಗ್,

9483937106.


Post a Comment

0 Comments

Ad Code

Responsive Advertisement