Ticker

6/recent/ticker-posts

Ad Code

Responsive Advertisement

ಆರ್.ವೈ.ಎಂ.ಇ.ಸಿಯಲ್ಲಿ ಮೆಕ್ಯಾನಿಕಲ್ ಇಂಜಿನೀರಿಂಗ್ ವಿಭಾಗದ ವತಿಯಿಂದ, “ಎಂಬಡೆಡ್ ಸಿಸ್ಟಮ್ಸ್ ವಿತ್ ಐ.ಓ.ಟಿ” ಉದ್ಘಾಟನಾ ಸಮಾರಂಭ

ಬಳ್ಳಾರಿ ಜೂನ್ 22. ಬಳ್ಳಾರಿ ನಗರದ ಪ್ರತಿಷ್ಠಿತ ತಾಂತ್ರಿಕ ಶಿಕ್ಷಣ ಸಂಸ್ಥೆಯಾದ ವೀ.ವಿ.ಸಂಘದ -ರಾವ್ ಬಹದ್ದೂರ್ ವೈ ಮಹಾಬಲೇಶ್ವರಪ್ಪ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಮೆಕ್ಯಾನಿಕಲ್ ಇಂಜಿನೀರಿಂಗ್ ವಿಭಾಗ ಮತ್ತು ಕರ್ನಾಟಕ ಸೈನ್ಸ್ ಟೆಕ್ನಾಲಜಿ ಎಕಾಡಮಿ , ಬೆಂಗಳುರು, ಕ್ಯಾಡ್ ಮ್ಯಾಕ್ಸ್ ಪ್ರವೈಟ್.ಲಿ, ಬೆಂಗಳುರು ,ಇವರುಗಳ ಸಂಯೋಜನೆಯಲ್ಲಿ “ಎಂಬಡೆಡಡ್ ಸಿಸ್ಟಮ್ಸ್ ವಿತ್ ಐ.ಓ.ಟಿ” ಉದ್ಘಾಟನಾ ಸಮಾರಂ¨ದಲ್ಲಿ ಮುಖ್ಯ ಅತಿಥಿಗಳಾಗಿ ಬಳ್ಳಾರಿ, ಡಿಸ್ಟ್ರಿಕ್ಟ್ ಇಂಡಸ್ಟರೀಸ್ ಕಾ. (ಡಿ.ಐ.ಸಿ.) ಜಂಟಿ ನಿರ್ದೇಶಕರು-ಸೋಮಶೇಖರ್, ಬಿ,  ಬಿಜಿನೆಸ್ ಯೂನಿಟ್ ಹೆಡ್-ಸ್ಕ್ಕಿಲ್ ಡೆವಲಪ್ಮೆಂಟ್, ಕ್ಯಾಡ್ ಮ್ಯಾಕ್ಸ್ ಪ್ರವೈಟ್.ಲಿ,  ದೊಡ್ಡಬಸಪ್ಪ ವೀರಾಪುರ್, ಪ್ರಾಂಶುಪಾಲರು ಡಾ|| ಟಿ. ಹನುಮಂತರೆಡಿ,್ಡ ಉಪ-ಪ್ರಾಂಶುಪಾಲೆ ಡಾ|| ಸವಿತ ಸೊನೊಳಿ, ಮೆಕ್ಯಾನಿಕಲ್ ಇಂಜಿನೀರಿಂಗ್ ವಿಭಾಗ ಮುಖ್ಯಸ್ಥರು ಡಾ|| ಕೋರಿ ನಾಗರಾಜ್, ಡಾ|| ತೋಟಪ್ಪ ಚಿತ್ರಿಕಿ, ಡಾ|| ವೀರಭದ್ರಪ್ಪ ಅಲಗೂರು, ಪ್ರೋ. ಬಸವರಾಜ ಕುಸುಮನ್ನವರು,  ಆರ್ ವೈ ಎಂ ಇ ಸಿ ಕಾಲೇಜಿನ ಎಲ್ಲಾ  ವಿಭಾಗದ ಮುಖ್ಯಸ್ಥರುಗಳು, ಬೋಧಕ- ಬೋಧಕೇತರರ ಸಿಬ್ಬಂದಿಯವರು ಭಾಗವಹಿಸಿದ್ದರು.

ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳು ಮಾತನಾಡುತ್ತಾ “ಶೈಕ್ಷಣಿಕ ಸಂಸ್ಥೆಗಳ ಜೊತೆ ಉದ್ಯಮ ಕ್ಷೇತ್ರದವರು ಕೈಜೋಡಿಸಿದರೆ ಮಾತ್ರ ನಮ್ಮ ಭಾರತದೇಶದ ಅಭಿವೃಧ್ದಿ, ಸಮಾಜದ ಉನ್ನತಿ ಪ್ರವರ್ಧಮಾನಕ್ಕೆ ಬರುತ್ತದೆ. ಭಾರತ ದೇಶದ ಮುಂದಿನ ಪೀಳಿಗೆಗಳು ಆಧುನಿಕ ಬೆಳವಣಿಗೆಗೆ ಪೂರಕವಾಗಿ ಕೆಲಸಮಾಡಬೇಕಿದೆ. ಇಂದಿನ  ಶೈಕ್ಷಣಿಕ ಪಠ್ಯಕ್ರಮದಲ್ಲಿ, ಮುಖ್ಯವಾಗಿ ಇಂಜಿನೀರಿಂಗ್ ವಿಭಾಗಗಳಲ್ಲಿ ಪ್ರಾಯೋಗಿಕ ಆಧಾರಿತ  ಆಧುನಿಕತೆ ಗಳನ್ನು ಜೋಡಿಸಿದರೆ ಮುಂದಿನ ದಿನಗಳಲ್ಲಿ ವಿಶ್ವದಲ್ಲಿ ಭಾರತದ ಬ್ರಾಂಡ್ ಎಂಬುವ ಸಾಧನೆ ಮಾಡಬಹುದು. ಇದರಲ್ಲಿ ವಿದ್ಯಾರ್ಥಿಗಳ ಜವಾಬ್ದಾರಿ ತುಂಬಾ ಇರುವುದು  ” ಎಂದು ವಿದ್ಯಾರ್ಥಿಗಳನ್ನು  ಉದ್ದೇಶಿಸಿ ಮಾತನಾಡಿದರು.

ವೀರಶೈವ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಗುರುಸಿದ್ದಸ್ವಾಮಿ, ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷರಾದ ಹಾಗು ಉಪಾಧ್ಯಕ್ಷರಾದ ಅಲ್ಲಂಚನ್ನಪ್ಪ, ಕಾರ್ಯದರ್ಶಿ ಬಿ.ವಿ. ಬಸವರಾಜ್, ಸಹಕಾರ್ಯದರ್ಶಿ ಜೆ. ಶಾಂತವೀರನಗೌಡರು, ಕೋಶಾಧಿಕಾರಿ ಗೋನಾಳ್ ರಾಜಶೇಖರ್‍ಗೌಡರು , ಆರ್.ವೈ.ಎಮ್,ಇ,ಸಿ ಆಡಳಿತ ಮಂಡಳಿಯ ಸದಸ್ಯರಾದ  ಜಿ.ಎಂ ಮಲ್ಲಿಕಾರ್ಜುನ ರೆಡ್ಡಿ, ಬಸವರಾಜ ರೂಪನಗುಡಿ, ಜಾನೆಕುಂಟೆ ಪೋಂಪನ ಗೌಡ, ಕೊರ್ಲಗುಂದಿ ಬಸವನ ಗೌಡ, ಹಲಕುಂದಿ ಸತೀಶ್ ಕುಮಾರ್ ಶು¨sಹಾರೈಸಿದರು.




 

Post a Comment

0 Comments

Ad Code

Responsive Advertisement