ಬೆಂಗಳೂರು, ಜೂನ್ 01 (ಕರ್ನಾಟಕ ವಾರ್ತೆ) :ಬೆಂಗಳೂರು ಜಲಮಂಡಳಿಯು (ಪಶ್ಚಿಮ) -1, ನೈರುತ್ಯ) -1, (ಆಗ್ನೇಯ) -1, (ದಕ್ಷಿಣ-1) -1, (ಪೂರ್ವ-2) -1, (ಪೂರ್ವ-1) -1, (ಉತ್ತರ ವಿಲೇಜ್) -2, (ಕೇಂದ್ರ-1), ವಾಯುವ್ಯ-1) ಮತ್ತು (ವಾಯುವ್ಯ-4) ಉಪವಿಭಾಗಗಳಲ್ಲಿ ನೀರಿನ ಬಿಲ್ಲು, ನೀರು ಮತ್ತು ಒಳಚರಂಡಿ ಸಂಪರ್ಕ ಕಲ್ಪಿಸುವಲ್ಲಿನ ವಿಳಂಬ ಮತ್ತಿತರ ಕುಂದುಕೊರತೆಗಳಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಪರಿಹರಿಸಲು ನೀರಿನ ಅದಾಲತ್‍ನ್ನು ಜೂನ್ 02 ರಂದು ಬೆಳಿಗ್ಗೆ 9.30 ರಿಂದ 11 ಗಂಟೆಯವರೆಗೆ ನಡೆಸಲಾಗುವುದು.
ಕುಂದು ಕೊರತೆಗಳಿಗೆ ಸಂಬಂಧಿಸಿದಂತೆ ಮಂಡಳಿಯ 24/7 ದೂರು ನಿರ್ವಹನಾ ಕೇಂದ್ರದ ಸಹಾಯವಾಣಿ 1916 ಗೆ ಹಾಗೂ ವಾಟ್ಸ್ ಆಪ್ ಸಂಖ್ಯೆ: 8762228888 ಸಂದೇಶದ ಮೂಲಕ ದೂರನ್ನು ಸಲ್ಲಿಸಬಹುದಾಗಿದೆ. ಸಾರ್ವಜನಿಕರು ತಮ್ಮ ಸಮಸ್ಯೆಗಳನ್ನು ಬಗೆಹರಿಸಕೊಳ್ಳಲು ಈ ಅದಾಲತ್ ಸೌಲಭ್ಯವನ್ನು ಬಳಸಿಕೊಳ್ಳಬಹುದಾಗಿದೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.
0 Comments