Ticker

6/recent/ticker-posts

Ad Code

Responsive Advertisement

ಕಷ್ಟದ ನೆರವು ನೆನೆದ ಮಹಿಳೆ...

ತುಮಕೂರು ಜಿಲ್ಲೆಯಗುಬ್ಬಿ ತಾಲ್ಲೂಕು ಪ್ರಜಾವಾಣಿ ಪತ್ರಿಕೆಯ ವರದಿಗಾರ ಜಯಣ್ಣ ಕೋವಿಡ್ ಗೆ ಬಲಿಯಾಗಿದ್ದರು.

ಮಗು ಚಿಕ್ಕದು. ಮನೆಯಲ್ಲಿ ಕಡು ಕಷ್ಟದ ಕಾಲ. ಆಗ ಅವರ ಕುಟುಂಬಕ್ಕೆ 5 ಲಕ್ಷ ಪರಿಹಾರವನ್ನು ಆಗಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಂದ ಮಂಜೂರು ಮಾಡಿಸಿ ಕೊಡಿಸಲಾಗಿತ್ತು. ಈ ಘಟನೆ ನಡೆದು ಒಂದೂವರೆ ವರ್ಷ ಕಳೆದಿದೆ.

ತುಮಕೂರಿನಲ್ಲಿ ನಡೆದ ಕೆಯುಡಬ್ಲ್ಯೂಜೆ ಜಿಲ್ಲಾ ಘಟಕದ ಅಧಿಕಾರ ಸ್ವೀಕಾರ ಕಾರ್ಯಕ್ರಮಕ್ಕೆ ಜಯಣ್ಣ ಪತ್ನಿ ಜ್ಯೋತಿ ಬಂದಿದ್ದರು.

ಕಾರ್ಯಕ್ರಮ ನಡೆಯುವಾಗ ವೇದಿಕೆಗೆ ಬಂದ ಜ್ಯೋತಿ ಅವರು ಬಂದು ಒಂದ್ನಿಮಿಷ ಮಾತನಾಡುತ್ತೇನೆಂದರು. ಆಸ್ಪತ್ರೆಗೆ ಹೋದವರು ಮತ್ತೆ ಮರಳಿ ಬರಲೇ ಇಲ್ಲ ಎಂದು ಗಂಡ ಸತ್ತ ಕಷ್ಟದ ದಿನ ನೆನೆದು, ಬದುಕು ಏನೂ ತೋಚದೆ ಕತ್ತಲಾಗಿದ್ದ ಹೊತ್ತಿನಲ್ಲಿ ಕೆಯುಡಬ್ಲ್ಯೂಜೆ ನೆರವಾಗಿದ್ದನ್ನು ಪ್ರಸ್ತಾಪಿಸಿದರು.

5 ಲಕ್ಷ ರೂ ಪರಿಹಾರ ಸಂಕಷ್ಟದಲ್ಲಿರುವ ಸಂದರ್ಭದಲ್ಲಿ ತಮ್ಮ ಬದುಕು ಬದಲಿಸಿದ ಬಗೆಯನ್ನು ವಿವರಿಸಿದಾಗ ಶ್ರಮವಹಿಸಿ ಪರಿಹಾರ ಮಂಜೂರು ಮಾಡಿಸಿದ ನನಗೂ ಒಂದು ಕ್ಷಣ ಸಾರ್ಥಕ ಭಾವ ಮೂಡಿತು.

ಚಿಕ್ಕ ಮಗು ಕಟ್ಟಿಕೊಂಡು ಹೇಗೆ ಜೀವನ ನಿಭಾಯಿಸುವುದು?

ಏನೇನು ಆಸ್ತಿ, ವರಮಾನವಿಲ್ಲದೆ ಬಾಡಿಗೆ ಮನೆಯಲ್ಲಿ ಜೀವನ ನಡೆಸುವುದು? ಎನ್ನುವ ಹತ್ತಾರು ಚಿಂತೆಯ

ಕಷ್ಟದಲ್ಲಿದ್ದಾಗ ನೆರವು ನೀಡಿ, ಬದುಕಿನ ಭರವಸೆ ಮೂಡಿಸಿದ್ದಕ್ಕೆ ಕಾಲಿಗೆರಗಿ ನಮಸ್ಕರಿಸಿದ ಆ ಹೆಣ್ಮಗಳಿಗೆ ಅದೇ ವೇದಿಕೆಯಲ್ಲಿ ಯಡಿಯೂರಪ್ಪ ಅವರಿಂದ ಕೆಯುಡಬ್ಲ್ಯೂಜೆ ಹೊರ ತಂದಿರುವ ಕೋವಿಡ್ ಕಥೆಗಳು ಪುಸ್ತಕವನ್ನು ನೆನಪಿಗೆ ನೀಡಿದ ಸಂದರ್ಭಕ್ಕೆ ಗೃಹ ಸಚಿವ ಆರಗ ಜ್ಞಾನೇಂದ್ರ ಸೇರಿದಂತೆ ಸಭೆ ಸಾಕ್ಷಿಯಾಯಿತು. 

ಹೊಟ್ಟೆ ಹಸಿದವರಿಗೆ, ಕಷ್ಟದಲ್ಲಿರುವವರಿಗೆ ಸಹಾಯ ಮಾಡಿದರೆ ಅವರು ಖಂಡಿತವಾಗಿ ನಿಮ್ಮ ಮರೆಯಲಾರರು.

-ಶಿವಾನಂದ ತಗಡೂರು

Post a Comment

0 Comments

Ad Code

Responsive Advertisement