Ticker

6/recent/ticker-posts

Ad Code

Responsive Advertisement

ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಉಚಿತ ನೋಟ್ ಪುಸ್ತಕಗಳನ್ನು ವಿತರಿಸಿದ ಗ್ರಾಮೀಣ ಶಾಸಕ ಬಿ.ನಾಗೇಂದ್ರ

ಬಳ್ಳಾರಿ ಜೂನ್ 22. ಹೊಸ ಮೋಕಾ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕರ್ನಾಟಕ ವಾಲ್ಮೀಕಿ ಯುವ ವೇದಿಕೆಯ ಬಳ್ಳಾರಿ ಜಿಲ್ಲಾ ಘಟಕ ಹಾಗೂ ಗ್ರಾಮಾಂತರ ತಾಲೂಕು ಘಟಕದ ವತಿಯಿಂದ ಬಳ್ಳಾರಿ ಗ್ರಾಮಾಂತರ ಜನಪ್ರಿಯ ಶಾಸಕರಾದ ಬಿ.ನಾಗೇಂದ್ರ ಅವರ ಅಭಿಮಾನಿಗಳು ಶಾಲೆಯ ಬಡ ಮಕ್ಕಳಿಗೆ  ಉಚಿತ ನೋಟ್ ಪುಸ್ತಕ ವಿತರಣಾ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು. ಕಾರ್ಯಕ್ರಮಕ್ಕೆ ಬಳ್ಳಾರಿ ಗ್ರಾಮಾಂತರ ಜನಪ್ರಿಯ ಶಾಸಕರಾದ ಬಿ.ನಾಗೇಂದ್ರ ಅವರು ಚಾಲನೆ ನೀಡಿದರು.


ನಂತರ ಮಾನ್ಯ ಶಾಸಕರಾದ ಬಿ.ನಾಗೇಂದ್ರ ಅವರು ಮಾತನಾಡಿ ಈ ಕಾರ್ಯಕ್ರಮಕ್ಕೆ ಆಗಮಿಸಿದ್ದು ನನ್ನ ಭಾಗ್ಯ, ಬಡ ವಿದ್ಯಾರ್ಥಿಗಳಿಗೆ ಬಹಳ ಅನುಕೂಲ ಆಗುತ್ತದೆ ಆದ್ದರಿಂದ ಯುವಕರು ಇಂತಹ ಕಾರ್ಯಕ್ರಮಗಳನ್ನು  ಹೆಚ್ಚಿನ ರೀತಿಯಲ್ಲಿ ಪ್ರತಿಯೊಂದು ಸರಕಾರ ಶಾಲೆಯಲ್ಲಿ ಹಮ್ಮಿಕೊಂಡಲ್ಲಿ ಅವರಿಗೆ ನನ್ನ ಸಂಪೂರ್ಣ ಸಹಕಾರ ನೀಡುವುದಾಗಿ ತಿಳಿಸಿದರು. ದಯವಿಟ್ಟು ಯಾರು ಶಿಕ್ಷಣದಿಂದ ಮಕ್ಕಳು  ವಂಚಿತರಾಗಬಾರದು  ಯಾಕೆಂದರೆ ನಮ್ಮ ಬಳ್ಳಾರಿ ಜಿಲ್ಲೆಯಲ್ಲಿ ಆರ್ಟಿಕಲ್ 371 ಜೆ ಒಳಪಟ್ಟಿರುವುದರಿಂದ ಹೆಚ್ಚಿನ ಉದ್ಯೋಗಗಳ ಅವಕಾಶವಿದೆ. ಈ 6 ಜಿಲ್ಲೆಗಳಿಗೆ ವಿಶೇಷ ಮೀಸಲಾತಿ ಇದೆ. ಬಡ ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆದು ಉನ್ನತ  ಸ್ಥಾನಕ್ಕೆ ತಲುಪಬೇಕು ಎಂದು ಕರೆ ನೀಡಿದರು. 

ಹೊಸ ಮೋಕಾ ಗ್ರಾಮದ ಗ್ರಾಮಸ್ಥರು ಹಾಗೂ ಶಾಲೆಯ ಮುಖ್ಯೋಪಾಧ್ಯಾಯರು ಈ ಹೊಸ ರಸ್ತೆಗೆ ಸ್ಪೀಡ್ ಬ್ರೇಕರ್ ಮತ್ತು ಶಾಲೆಯೊಳಗೆ ಹೊಸ ಶೌಚಾಲಯಗಳನ್ನು ನಿರ್ಮಿಸಲು ಮನವಿ ಸಲ್ಲಿಸಿದರು. ತಕ್ಷಣ ಅವರ ಮನವಿಗೆ ಸ್ಪಂದಿಸಿದ ಮಾನ್ಯ ಶಾಸಕರು ಕೂಡಲೆ ಸಂಬಂಧ ಪಟ್ಟ ಇಲಾಖೆ ಅಧಿಕಾರಿಗಳಿಗೆ ಮಾತನಾಡಿ ಆದಷ್ಟು ಬೇಗ ಪೂರ್ಣಗೊಳಿಸುವುದಾಗಿ ಅವರಿಗೆ ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಶಾಸಕರ ಆಪ್ತರಾದ ಅಣ್ಣ ನಾಗರಾಜ್, ಗೋವರ್ಧನ್ ರೆಡ್ಡಿ, ಮಹಾನಗರ ಪಾಲಿಕೆ ಸದಸ್ಯರಾದ ಬಿ.ಆರ್.ಎಲ್ ಸೀನಾ, ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ರಾಮಣ್ಣ, ಉಪಾಧ್ಯಕ್ಷರಾದ ಲೋಕೇಶ್ ಸ್ವಾಮಿ, SDMC ಅಧ್ಯಕ್ಷರಾದ ಮಹೇಶ್ ಗೌಡ, ಕರ್ನಾಟಕ ವಾಲ್ಮೀಕಿ ಯುವ ವೇದಿಕೆ ಜಿಲ್ಲಾಧ್ಯಕ್ಷರಾದ ಬಿ.ನಾಗರಾಜ್, ತಾಲೂಕು ಅಧ್ಯಕ್ಷರಾದ ಬಿ.ರಾಘವೇಂದ್ರ, ಹಾಗೂ ಸಂಘದ ಪದಾಧಿಕಾರಿಗಳು, ನಿವೃತ್ತ ಶಿಕ್ಷಕರಾದ ನಾರಾಯಣಪ್ಪ, ಶಾಲೆಯ ಮುಖ್ಯೋಪಾಧ್ಯಾಯರು, ಶಿಕ್ಷಕರು, ವಿದ್ಯಾರ್ಥಿಗಳು, ಮಾನ್ಯ ಶಾಸಕರ ಅಭಿಮಾನಿಗಳ ಸೇರಿದಂತೆ ಗ್ರಾಮದ ಕಾಂಗ್ರೆಸ್ ಪಕ್ಷದ ಮುಖಂಡರು ಉಪಸ್ಥಿತರಿದ್ದರು.


 

Post a Comment

0 Comments

Ad Code

Responsive Advertisement