Ticker

6/recent/ticker-posts

Ad Code

Responsive Advertisement

ಕ್ಷೇತ್ರದ ಅಭಿವೃದ್ಧಿ ಕೆಲಸಗಳು ನನಗೆ ಸಮಾಧಾನ ತಂದಿಲ್ಲ: ಶಾಸಕ ಎಂ.ವಿ.ವೀರಭದ್ರಯ್ಯ

 ಮಧುಗಿರಿ : ಕ್ಷೇತ್ರದ ಅಭಿವೃದ್ಧಿ ಕೆಲಸಗಳು ನನಗೆ ಸಮಾಧಾನ ತಂದಿಲ್ಲ. ಕುಮಾರಸ್ವಾಮಿ ಸಿಎಂ ಆಗಿ ಮುಂದುವರೆದಿದ್ದರೆ  ಕ್ಷೇತ್ರ ಸಾಕಷ್ಟು ಅಭಿವೃದ್ಧಿ ಹೊಂದುತಿತ್ತು ಎಂದು ಶಾಸಕ ಎಂ.ವಿ.ವೀರಭದ್ರಯ್ಯ ತಿಳಿಸಿದರು.

ತಾಲೂಕಿನ ಕೊಡಿಗೇನಹಳ್ಳಿ ಗ್ರಾಮದಲ್ಲಿ ಸೋಮವಾರ ಎಸ್.ಹೆಚ್.ಡಿ.ಪಿ ಯೋಜನೆಯಡಿ ಸುಮಾರು 10 ಕೋಟಿ ರೂ ವೆಚ್ಚದ ಮಿಡಿಗೇಶಿ-ಚೆಂದನದೂರು ಸರಪಳಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ಕುಮಾರಸ್ವಾಮಿ ಅಧಿಕಾರದಲ್ಲಿದ್ದ 14 ತಿಂಗಳಲ್ಲಿ ಕ್ಷೇತ್ರದ ಅಭಿವೃದ್ದಿಗೆ ಬಹಳಷ್ಟು ಅನುಧಾನ ತರಲಾಗಿತ್ತು. ಆದರೆ ಈಗ ಈಗ ಬಿಜೆಪಿ ಪಕ್ಷ ಆಡಳಿತ ನಡೆಸುತ್ತಿದ್ದು, ಅನುಧಾನ ತರುವುದು ಬಹಳ ಕಷ್ಟದ ಕೆಲಸ. ಅಲ್ಲದೇ 2 ವರ್ಷ ಕೋವಿಡ್ ಸಂಕಷ್ಟದ ಹಿನ್ನೆಲೆಯಲ್ಲಿ ಕ್ಷೇತ್ರದ ಅಭಿವೃದ್ದಿಗೆ ಹಿನ್ನಡೆಯಾಗಿದೆ. ಆದರೂ ಕ್ಷೇತ್ರದ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ ಪಡುತಿದ್ದೇನೆ ಎಂದ ಅವರು, ಗುತ್ತಿಗೆದಾರರು ಗುಣಮಟ್ಟದ ಕಾಮಗಾರಿ ಮಾಡಬೇಕು ಹಾಗೂ ಅಧಿಕಾರಿಗಳು ಆಗಾಗ್ಗೆ ಪರಿಶೀಲಿಸಬೇಕು ಎಂದರು.

ಈ ಭಾಗದಲ್ಲಿ ಕೈಗಾರಿಕಾ ವಲಯ ಆರಂಭಕ್ಕೆ 200 ಎಕರೆ ಸರ್ಕಾರಿ ಜಾಗವಿದೆ ಎಂದು ಹೇಳುತ್ತಿದ್ದು, ಅದರಲ್ಲಿ ಗಾಮೆರ್ಂಟ್ಸ್ ಕಾಮಗಾರಿ ಆರಂಭಿಸಿದಲ್ಲಿ ಈ ಭಾಗದ ಹೆಣ್ಣು ಮಕ್ಕಳಿಗೆ ಬಹಳಷ್ಟು ಅನುಕೂಲವಾಗಲಿದೆ. ಆದ್ದರಿಂದ ಮುಂದಿನ ದಿನಗಳಲ್ಲಿ ಕೈಗಾರಿಕಾ ವಲಯ ಪ್ರಾರಂಭಕ್ಕೆ ಪ್ರಯತ್ನಿಸಲಾಗುವುದು ಇದೇ ಸಂದರ್ಭದಲ್ಲಿ ರೆಡ್ಡಿ ಹಳ್ಳಿ ಗ್ರಾಮದಲ್ಲಿ ಶುದ್ದ ಕುಡಿಯುವ ನೀರಿನ ಘಟಕ ಬೇಕು ಎಂದು ಸಾರ್ವಜನಿಕರು ಮನವಿ ಮಾಡಿದ್ದು, ಶೀಘ್ರವಾಗಿ ಕುಡಿಯುವ ನೀರಿನ ಘಟಕ ಮಂಜೂರು ಮಾಡಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು

ಈ ಸಂದರ್ಭದಲ್ಲಿ ಮುಖಂಡರುಗಳಾದ ಸಯ್ಯದ್ ನಾಜೀರ್, ಹೆಚ್.ಎಂ.ಆರ್.ಹನುಮಂತರಾಯಪ್ಪ, ನರಸರೆಡ್ಡಿ, ಗೌಸ್, ಸುರೇಶ್, ಚಿನ್ನಪ್ಪರೆಡ್ಡಿ, ಲಕ್ಷ್ಮಿ ನರಸಿಂಹ ರೆಡ್ಡಿ, ಜಬೀ ಉಲ್ಲಾ, ರಾಮಕೃಷ್ಣಪ್ಪ, ಅಕ್ರಮ್ ಪಾಷ, ಜಯರಾಮ್, ಎಇಇ ರಾಜಗೋಪಾಲ್, ಗುತ್ತಿಗೆದಾರರಾದ ಗಿರೀಶ್ ಹಾಗೂ ಮುಂತಾದವರು ಇದ್ದರು.

Post a Comment

0 Comments

Ad Code

Responsive Advertisement