ಬೆಂಗಳೂರು, ಜೂನ್ 02 (ಕರ್ನಾಟಕ ವಾರ್ತೆ) :ಕೃಷಿ ವಿಶ್ವವಿದ್ಯಾನಿಲಯ, ಬೆಂಗಳೂರಿನ ಸಿಬ್ಬಂದಿ ತರಬೇತಿ ಘಟಕ, ವಿಸ್ತರಣಾ ನಿರ್ದೇಶನಾಲಯವು ಮ್ಯಾನೇಜ್, ಹೈದರಾಬಾದ್ ಇವರ ಸಂಯುಕ್ತಾಶ್ರಯದಲ್ಲಿ ಜೂನ್ 14 ರಿಂದ 16ರವರೆಗೆ 2022 ರಂದು ಮೂರು ದಿನಗಳ ಕಾಲ ಕೃಷಿ ಮಾರುಕಟ್ಟೆ ಮಾಹಿತಿ ಕುರಿತು ಆನ್ಲೈನ್ ತರಬೇತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ಆಸಕ್ತಿಯುಳ್ಳ ಪ್ರಗತಿಪರ ರೈತರು, ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ವಿಸ್ತರಣಾ ಕಾರ್ಯಕರ್ತರು ಜೂನ್ 11 ರೊಳಗೆ ಮ್ಯಾನೇಜ್, ಹೈದರಾಬಾದ್ನ ಜಾಲತಾಣದಲ್ಲಿ ನೊಂದಾಯಿಸಿಕೊಳ್ಳುವುದು. ತರಬೇತಿಯಲ್ಲಿ ಕೃಷಿ ಮಾರುಕಟ್ಟೆಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ನೀತಿ ನಿಯಮಗಳು, ಪೂರೈಕೆ ಸರಪಳಿ, ಇ-ಟ್ರೇಡಿಂಗ್, ಇ-ನಾಮ್, ಕೃಷಿ ಪೋರ್ಟಲ್, ಡಿಜಿಟಲ್ ಕೃಷಿ, ಕೃಷಿ ಉತ್ಪನ್ನಗಳಿಗೆ ಅಂತರಾಷ್ಟ್ರೀಯ ಮಾರುಕಟ್ಟೆ ಮುಂತಾದ ವಿಷಯಗಳ ಬಗ್ಗೆ ತಿಳಿಸಲಾಗುವುದು. ತರಬೇತಿಯಲ್ಲಿ ಯಶಸ್ವಿಯಾಗಿ ಭಾಗವಹಿಸಿದ ಶಿಕ್ಷಣಾರ್ಥಿಗಳಿಗೆ ಡಿಜಿಟಲ್ ಸರ್ಟಿಫಿಕೇಟ್ಅನ್ನು ನೀಡಲಾಗುವುದು.
ಹೆಚ್ಚಿನ ಮಾಹಿತಿಗೆ ಡಾ.ಕೆ. ಶಿವರಾಮು, ತರಬೇತಿ ಸಂಯೋಜಕರು, ಸಿಬ್ಬಂದಿ ತರಬೇತಿ ಘಟಕ, ಕೃಷಿ ವಿಶ್ವವಿದ್ಯಾನಿಲಯ, ಬೆಂಗಳೂರು, ಇವರ ಮೊಬೈಲ್ ಸಂಖ್ಯೆ: 9972035456 ಗೆ ಸಂಪರ್ಕಿಸಬಹುದಾಗಿದೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.
0 Comments