ಬೆಂಗಳೂರು ಜೂನ್ 14.06.2022: ಇಸ್ಕಾನ್ ವತಿಯಿಂದ ನಿರ್ಮಾಣಗೊಂಡಿರುವ ಶ್ರೀ ರಾಜಾಧಿರಾಜ ಗೋವಿಂದ ದೇವಾಲಯದ ವಾಸ್ತುಶಿಲ್ಪ ಮತ್ತು ಕಲ್ಲಿನ ಕೆತ್ತನೆಗಳು ಭವ್ಯವಾಗಿವೆ ಎಂದು ಕರ್ನಾಟಕದ ಗೌರವಾನ್ವಿತ ರಾಜ್ಯಪಾಲರಾದ ಶ್ರೀ ಥಾವರ್ ಚಂದ್ ಗೆಹ್ಲೋಟ್ ಅವರು ಹೇಳಿದರು.
ತಿರುಪತಿ ಮಾದರಿಯಲ್ಲಿ ನಗರದ ವಸಂತಪುರದ ವೈಕುಂಠ ಬೆಟ್ಟದಲ್ಲಿ ಇಸ್ಕಾನ್ ವತಿಯಿಂದ ನಿರ್ಮಾಣಗೊಂಡಿರುವ ಶ್ರೀ ರಾಜಾಧಿರಾಜ ಗೋವಿಂದ ದೇವಸ್ಥಾನವನ್ನು ಮಂಗಳವಾರ ಗೌರವಾನ್ವಿತ ರಾಷ್ಟರಪತಿಗಳಾದ ಶ್ರೀ ರಾಮನಾಥ್ ಕೋವಿಂದ್, ದೇಶದ ಪ್ರಥಮ ಮಹಿಳೆ ಗೌರವಾನ್ವಿತ ಶ್ರೀಮತಿ ಸವಿತಾ ಕೋವಿಂದ್ ಅವರು ಲೋಕಾರ್ಪಣೆಗೊಳಿಸಿದರು. ಈ ಕಾರ್ಯಕ್ರಮದಲ್ಲಿ ಘನತೆವೆತ್ತ ರಾಜ್ಯಪಾಲರು ಭಾಗಿಯಾಗಿ ಮಾತನಾಡಿದರು.
ವಾಸ್ತವವಾಗಿ ಬೆಂಗಳೂರು ಇಸ್ಕಾನ್ ದೇವಾಲಯವು ದೇಶದಾದ್ಯಂತ ಆಕರ್ಷಣೆಯ ಕೇಂದ್ರವಾಗಿದೆ. ಇತ್ತೀಚೆಗೆ, ಬೆಂಗಳೂರಿನ ರಾಜಾಜಿ ನಗರದಲ್ಲಿರುವ ಇಸ್ಕಾನ್ ಶ್ರೀ ರಾಧಾ-ಕೃಷ್ಣ ದೇವಸ್ಥಾನಕ್ಕೆ ಭೇಟಿ ನೀಡುವ ಸೌಭಾಗ್ಯ ನನಗೆ ಸಿಕ್ಕಿತು. ಭವ್ಯವಾದ ಮತ್ತು ಆಕರ್ಷಣೀಯವಾದ ದೇವತೆಗಳ ವಿಗ್ರಹಗಳನ್ನು ನೋಡಿ ಕಣ್ತುಂಬಿಕೊಂಡೆ. ದೇವಸ್ಥಾನದ ವಿವಿಧ ಸಾಂಸ್ಕøತಿಕ ಹಾಗೂ ಸಾಮಾಜಿಕ ಚಟುವಟಿಕೆಗಳ ಬಗ್ಗೆ ಮಾಹಿತಿ ಪಡೆದುಕೊಂಡೆ. ದೇವಸ್ಥಾನದ ವತಿಯಿಂದ ನಡೆಯುವ ಅನ್ನದಾನ ಕಾರ್ಯಕ್ರಮ ಅಭೂತಪೂರ್ವವಾಗಿದೆ ಎಂದರು.
ಇಸ್ಕಾನ್ ಸಂಸ್ಥಾಪಕರಾದ ಶ್ರೀಮದ್ ಪ್ರಭುಪಾದರನ್ನು ಅನುಸರಿಸಿ ಭಕ್ತಿ ಸಂಪ್ರದಾಯವನ್ನು ಶ್ರದ್ಧೆಯಿಂದ ಉತ್ತೇಜಿಸುತ್ತಿರುವುದು ಸಂತಸ ತಂದಿದೆ. ಯಾವುದೇ ತಾರತಮ್ಯವಿಲ್ಲದೆ ಜನರು ಮನಸ್ಸಿನ ಶಾಂತಿ ಮತ್ತು ಆನಂದದಿಂದ ಬದುಕಲು ಅವಕಾಶವನ್ನು ಪಡೆಯಬೇಕು ಎಂಬ ದೃಷ್ಠಿಯಿಂದ ತಮ್ಮ ಜೀವಿತಾವಧಿಯಲ್ಲಿ, ಶ್ರೀಮದ್ ಪ್ರಭುಪಾದರು ಪ್ರಪಂಚದ ಪ್ರಮುಖ ನಗರಗಳಲ್ಲಿ ನೂರಕ್ಕೂ ಹೆಚ್ಚು ದೇವಾಲಯಗಳನ್ನು ಸ್ಥಾಪಿಸಿದರು. ಭಾರತದ ಆಧ್ಯಾತ್ಮಿಕ ಸಂಸ್ಕೃತಿ, ತತ್ತ್ವಶಾಸ್ತ್ರ ಮತ್ತು ಧಾರ್ಮಿಕ ಸಂಪ್ರದಾಯಗಳನ್ನು ಪ್ರಪಂಚದಾದ್ಯಂತ ಪ್ರಚಾರ ಮಾಡಲು ಶ್ರೀಮದ್ ಪ್ರಭುಪಾದರು ಮತ್ತು ಅವರ ಎಲ್ಲಾ ಅನುಯಾಯಿಗಳ ಕೊಡುಗೆ ಶ್ಲಾಘನೀಯವಾಗಿದೆ ಎಂದು ತಿಳಿಸಿದರು.
ಶ್ರೀ ರಾಜಾಧಿರಾಜ್ ಗೋವಿಂದ ದೇವಾಲಯದ ಸಂಕೀರ್ಣ ಜನರಲ್ಲಿ ಆಧ್ಯಾತ್ಮಿಕ ಮತ್ತು ಧಾರ್ಮಿಕ ಆಸಕ್ತಿಯನ್ನು ಜಾಗೃತಗೊಳಿಸುವ ಮೂಲಕ ಸಮಾಜದಲ್ಲಿ ಸಕಾರಾತ್ಮಕ ಬದಲಾವಣೆಯನ್ನು ತರುವಲ್ಲಿ ಯಶಸ್ಸನ್ನು ಸಾಧಿಸಲಿದೆ ಎಂದು ಭರವಸೆ ವ್ಯಕ್ತಪಡಿಸಿದರು.
ಸಮಾರಂಭದಲ್ಲಿ ಸನ್ಮಾನ್ಯ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಶಾಸಕರಾದ ಎಂ. ಕೃಷ್ಣಪ್ಪ, ಶ್ರೀ ಮಧು ಪಂಡಿತ್ ದಾಸಾ, ಚಂಚಲಾಪತಿ ದಾಸ್ ಮುಂತಾದ ಗಣ್ಯರು ಉಪಸ್ಥಿತರಿದ್ದರು.
Rajadhiraja Sri Govinda temple architecture is magnificent, says Karnataka Governor
Bengaluru June 14.06.2022: Hon'ble President Shri Ram Nath Kovind, First Lady of India Smt. Savitha Kovind and Governor of Karnataka Shri Thaawarchand Gehlot on Tuesday attended the 'Lokarpana' of ISKCON Sri Rajadhiraja Govinda Temple today at Vaikunta hill Vasanthapura.
Chief Minister Basavaraj Bommai, MLA Krishnappa were among those who graced the occasion.
Addressing the occasion, the governor said " The architecture and stone carvings of this temple are magnificent. Recently, I had the privilege of visiting the ISKCON Shri Radha-Krishna Temple in Rajaji Nagar, Bangalore. I am overwhelmed to see the grand and alluring idols of deities. I was informed about the various cultural and social activities of the temple. The Annadanam program conducted by the temple is extraordinary and unprecedented.
" The ISKCON Temple Bangalore has become the center of attraction across the country. I am happy to see that ISKCON Bangalore is diligently promoting the Bhakti tradition following its Guru and Founder Srimad Prabhupada. His great desire was that people should get an opportunity to live a life of peace of mind and bliss without any discrimination. So he encouraged his disciples to establish temples," he added.
He also said " I am sure that by awakening spiritual and religious interest in the people who visit Shri Rajadhiraj Govind Temple Complex, success will be achieved in bringing positive change in society.
ISKCON President Shri Madhu Pandit Dasa, Shri Chanchalapathi dasa and other dignitaries were present.
0 Comments