"ವಂದಾರುಜನಸಂದೋಹಮಂದಾರತರುಸನ್ನಿಭಮ್/
ವೃಂದಾರಕಗುರುಪ್ರಖ್ಯಂ ವಂದೇ ವಾದೀಂದ್ರ
ದೇಶಿಕಮ್//
ವಿದ್ಯಾಮಠವೆಂದೇ ಹೆಸರಾದ ಮಂತ್ರಾಲಯ
ಶ್ರೀಗುರುರಾಘವೇಂದ್ರಸ್ವಾಮಿಗಳ ಮಠ ಎಲ್ಲರ ಮನೆ-ಮನಗಳನ್ನು ಬೆಳಗಿದ ಶ್ರೀರಾಘವೇಂದ್ರ ಸ್ವಾಮಿಗಳ ಹೆಸರಿನಿಂದಲೇ ಪ್ರಖ್ಯಾತಿಯ
ಶಿಖರವನ್ನೇರಿತು.ಈ ಮಠದ ಪರಂಪರೆಯ
ಯಾದಿಯಲ್ಲಿ ಶ್ರೀವಾದೀಂದ್ರತೀರ್ಥರು ಅಚ್ಚಳಿ
ಯದ ಹೆಸರು.ಶ್ರೀರಾಯರ ನಂತರ ಐದನೆಯವರಾಗಿ
ಶ್ರೀಮಠದ ವೇದಾಂತ ಸಾಮ್ರಾಜ್ಯವನ್ನು ೨೨ವರ್ಷಗಳ ಕಾಲ ಆಳಿದ ಯತಿ ಚಕ್ರವರ್ತಿಗಳು.
ಶ್ರೀವಾದೀಂದ್ರತೀರ್ಥರು ಪೂರ್ವಾಶ್ರಮದಲ್ಲಿ
ಶ್ರೀರಾಘವೇಂದ್ರತೀರ್ಥರ ಮರಿ ಮೊಮ್ಮಕ್ಕಳು.
ಸಹಜವಾಗಿಯೇ ಅವರಿಗೆ ಅಗಾಧವಾದ ವಿದ್ವತ್ತು ,ಗ್ರಂಥ ನಿರ್ಮಾಣದಲ್ಲಿ ಕುಶಲತೆ,ಅನು
ಪಮವಾದ ಕವಿತ್ವಗಳು ವಂಶದ ಬಳುವಳಿಯಾಗಿ ಬಂದವು.ಶ್ರೀನಿವಾಸಾಚಾರ್ಯರೆಂಬ ಸಾರ್ಥಕ ನಾಮಧೇಯವನ್ನು ಪಡೆದು ವಿದ್ಯಾಲಕ್ಷ್ಮಿಯ
ಆವಾಸಸ್ಥಾನವೇ ಆಗಿದ್ದರು.ಅತ್ಯಂತ ಕಿರಿಯ
ವಯಸ್ಸಿನಲ್ಲಿ ಶ್ರೀಗುರುರಾಜರನ್ನು ಕಣ್ಣಾರೆಕಂಡ
ಭಾಗ್ಯಶಾಲಿಗಳು ಇವರು.ಇವರಿಗೆ ಸಂಸ್ಥಾನದ
ಮೇಲಿರುವ ದೀಕ್ಷೆ ಅಸಾಧಾರಣವಾದದ್ದು.
ಇವೆಲ್ಲ ಗುಣಗಳು ಇವರಿಗೆ ಪೀಠಾಧಿಪತ್ಯವನ್ನು
ದೊರಕಿಸಿಕೊಟ್ಟವು.ಶ್ರೀಉಪೇಂದ್ರತೀರ್ಥರು ಇವರಿಗೆ "ಪರಮಹಂಸಾಶ್ರಮ"ವನ್ನಿತ್ತು
ಶ್ರೀವಾದೀಂದ್ರತೀರ್ಥರೆಂಬ ಅಭಿದಾನವನ್ನು
ಕರುಣಿಸಿದರು.
ಹೆಸರಿಗೆ ತಕ್ಕಂತೆ ಶ್ರೀವಾದೀಂದ್ರರು ವಾದಿಶ್ರೇಷ್ಠರೇ.ಪ್ರಾರಂಭದ ವಿದ್ಯಾಭ್ಯಾಸವನ್ನು
ತಮ್ಮ ತಂದೆಯವರಾದ ಶ್ರೀಪುರುಷೋತ್ತಮಾ
ಚಾರ್ಯರಲ್ಲಿ ಮುಗಿಸಿದ ಶ್ರೀವಾದೀಂದ್ರರು
ಉನ್ನತಾಧ್ಯಯನವನ್ನು ಶ್ರೀಮಠದ ಮತ್ತೊಬ್ಬ
ಶಕ ಪುರುಷರಾದ ಶ್ರೀಸುಮತೀಂದ್ರತೀರ್ಥರಲ್ಲಿ
ಹಾಗೂ ಆಶ್ರಮ ಗುರುಗಳಾದ ಶ್ರೀಉಪೇಂದ್ರತೀರ್ಥರಲ್ಲಿ ಮಾಡಿದರು.
ಶ್ರೀವಾದೀಂದ್ರತೀರ್ಥರು ಅದ್ಭುತವಾದ ಕವಿಗಳೂ ಆಗಿದ್ದರು.ಅವರು ರಚಿಸಿದ "ಗುರುಗಣಸ್ತವನ" ಎನ್ನುವ ಖಂಡ ಕಾವ್ಯ
ಪ್ರತಿಯೊಬ್ಬ ಓದುಗರ ಮನವನ್ನು ಸೂರೆಗೊಂಡಿದೆ.ಶ್ರೀವಾದೀಂದ್ರರು ಶ್ರೀಗುರುರಾಜರ ಸನ್ನಿಧಿಯಲ್ಲಿ ಭಕ್ತಿಪೂರ್ಣ
ವಾಗಿ ಈ ಖಂಡ ಕಾವ್ಯವನ್ನು ಹಾಡಿದಾಗ
ಶ್ರೀ ಗುರುರಾಜರ ವೃಂದಾವನವೇ ತಲೆದೂಗಿ
ಮೆಚ್ಚಿಗೆಯನ್ನು ಸೂಚಿಸಿತಂತೆ.
ಶ್ರೀರಾಘವೇಂದ್ರತೀರ್ಥರಿಗೆ ಭಕ್ತರು ಕೊಟ್ಟ
ಬಿರುದು ಶ್ರೀಗುರುಸಾರ್ವಭೌಮ.ಇವರಿಗೆ
ಮಂತ್ರಿಯಂತೆ ಶ್ರೀವಾದೀಂದ್ರತೀರ್ಥರು ಸಹಕರಿ
ಸಿ ಅಸಂಖ್ಯ ಭಕ್ತರನ್ನು ಉದ್ಧರಿಸುತ್ತಾರೆಂದು
ಅಚಲವಾದ ನಂಬಿಕೆ ಇದೆ.ಶ್ರೀಗುರುರಾಜರಿಗೆ
ಶ್ರೀವಾದೀಂದ್ರರಲ್ಲಿ ಅಪಾರವಾದ ಪ್ರೀತಿ.
ಅದಕ್ಕೆಂದೇ ತಮ್ಮ ಎಡ ಬದಿಯ ಜಾಗವನ್ನು
ಅವರಿಗೆ ಮೀಸಲಿಟ್ಟು ತಮ್ಮ ಬಳಿಯಲ್ಲೇ
ಕುಳ್ಳಿರಿಸಿಕೊಂಡಿದ್ದಾರೆ.ಇವರಿಗೆ ಸೇವೆ ಸಲ್ಲಿಸದೆ
ಶ್ರೀಗುರುರಾಜರ ಸೇವೆಯು ಅಪೂರ್ಣವಾಗುತ್ತದೆ.ಅಷ್ಟು ಮಹತ್ವ ಅವರಿಗಿದೆ.ಇಂತಹ ಯತಿಪುಂಗವರನ್ನು ಪಡೆದ
ನಾವು ಧನ್ಯರು .ಇಂದು ಇವರ ಆರಾಧನೆಯ ದಿನ.ಇವರ ಮೂಲ ವೃಂದಾವನವಿರುವುದು
ಮಂತ್ರಾಲಯ ಕ್ಷೇತ್ರದಲ್ಲಿ ಅದೂ ಶ್ರೀರಾಯರ ಪಕ್ಕದಲ್ಲಿ.ಶ್ರೀರಾಯರು ತಮ್ಮ ಪರಂಪರೆಯಲ್ಲಿ
ಶ್ರೀವಾದೀಂದ್ರತೀರ್ಥರಂಥ ಶ್ರೇಷ್ಠ ಯತಿಗಳು ಸರ್ವಜ್ಞ
ಪೀಠಕ್ಕೆ ಬರುತ್ತಾರೆಂದು ತಿಳಿದಿದ್ದ ರಾಯರು ತಮಗೆಂದು ನಿರ್ಮಾಣ ಮಾಡಿಸಿದ್ದ ಬೃಂದಾವನವನ್ನು
ಶ್ರೀವಾದೀಂದ್ರತೀರ್ಥರಿಗಾಗಿಯೇ ಮೀಸಲಿಟ್ಟಿದ್ದರು.
ಭಕ್ತರು ತಮ್ಮ ಇಷ್ಟಾರ್ಥ ಸಿದ್ಧಿಗೆಂದು ಮಂತ್ರಾಲಯಕ್ಕೆ
ಗುರುರಾಯರ ಸೇವೆಗೆ ಹೋದವರು ಮೊದಲು ಶ್ರೀವಾದೀಂದ್ರತೀರ್ಥ ಗುರುಗಳಲ್ಲಿ ಭಕ್ತಿಯಿಂದ ತಮ್ಮ ಇಷ್ಟಾರ್ಥ ಸಿದ್ಧಿಗಾಗಿ ಪ್ರಾರ್ಥಿಸಿ ಕೊಂಡು ಶ್ರೀರಾಯರಿಂದಲೂ ಅನುಗ್ರಹವಾಗುವಂತೆ ಶ್ರೀವಾದೀಂದ್ರತೀರ್ಥ ಗುರುಗಳಲ್ಲಿ ಪ್ರಾರ್ಥಿಸಿಕೊಂಡರೆ
ಶ್ರೀರಾಯರ ಮತ್ತು ಶ್ರೀವಾದೀಂದ್ರರ ಅನುಗ್ರಹ ಶೀಘ್ರವಾಗಿ ಆಗುವುದೆಂದು ಬಹಳ ಜನ ಭಕ್ತರ ಅಭಿಪ್ರಾಯವಾಗಿದೆ.ಶ್ರೀಭೃಗು ಋಷಿಗಳ ಅಂಶ ಸಂಭೂತರಾದ ಶ್ರೀವಿಜಯರಾಯರು ತಮ್ಮ ಕುಲಗುರು ಗಳಾದ ದೇವಗುರು ಶ್ರೀಬೃಹಸ್ಪತಿ ಅವತಾರರಾದ ಶ್ರೀವಾದೀಂದ್ರತೀರ್ಥಗುರುಗಳನ್ನು ಬಹಳ ಭಕ್ತಿಯಿಂದ ಸ್ತುತಿಸಿದ್ದಾರೆ.
ಶ್ರೀಗಳವರ ಆರಾಧನಾ ದಿನದಂದು ಭಕ್ತಿಯ ನಮ
ಸ್ಕಾರಗಳನ್ನು ಅರ್ಪಿಸಿ ನಾವು ಅವರ ಅನುಗ್ರಹಕ್ಕೆ
ಪಾತ್ರರಾಗೋಣ.
ಶ್ರೀವಾದೀಂದ್ರತೀರ್ಥರು
********
"ವಂದಾರುಜನಸಂದೋಹಮಂದಾರತರುಸನ್ನಿಭಮ್/
ವೃಂದಾರಕಗುರುಪ್ರಖ್ಯಂ ವಂದೇ ವಾದೀಂದ್ರ
ದೇಶಿಕಮ್//
*********
ವಿದ್ಯಾಮಠವೆಂದೇ ಹೆಸರಾದ ಮಂತ್ರಾಲಯ
ಶ್ರೀಗುರುರಾಘವೇಂದ್ರಸ್ವಾಮಿಗಳ ಮಠ ಎಲ್ಲರ ಮನೆ-ಮನಗಳನ್ನು ಬೆಳಗಿದ ಶ್ರೀರಾಘವೇಂದ್ರ ಸ್ವಾಮಿಗಳ ಹೆಸರಿನಿಂದಲೇ ಪ್ರಖ್ಯಾತಿಯ
ಶಿಖರವನ್ನೇರಿತು.ಈ ಮಠದ ಪರಂಪರೆಯ
ಯಾದಿಯಲ್ಲಿ ಶ್ರೀವಾದೀಂದ್ರತೀರ್ಥರು ಅಚ್ಚಳಿ
ಯದ ಹೆಸರು.ಶ್ರೀರಾಯರ ನಂತರ ಐದನೆಯವರಾಗಿ
ಶ್ರೀಮಠದ ವೇದಾಂತ ಸಾಮ್ರಾಜ್ಯವನ್ನು ೨೨ವರ್ಷಗಳ ಕಾಲ ಆಳಿದ ಯತಿ ಚಕ್ರವರ್ತಿಗಳು.
ಶ್ರೀವಾದೀಂದ್ರತೀರ್ಥರು ಪೂರ್ವಾಶ್ರಮದಲ್ಲಿ
ಶ್ರೀರಾಘವೇಂದ್ರತೀರ್ಥರ ಮರಿ ಮೊಮ್ಮಕ್ಕಳು.
ಸಹಜವಾಗಿಯೇ ಅವರಿಗೆ ಅಗಾಧವಾದ ವಿದ್ವತ್ತು ,ಗ್ರಂಥ ನಿರ್ಮಾಣದಲ್ಲಿ ಕುಶಲತೆ,ಅನು
ಪಮವಾದ ಕವಿತ್ವಗಳು ವಂಶದ ಬಳುವಳಿಯಾಗಿ ಬಂದವು.ಶ್ರೀನಿವಾಸಾಚಾರ್ಯರೆಂಬ ಸಾರ್ಥಕ ನಾಮಧೇಯವನ್ನು ಪಡೆದು ವಿದ್ಯಾಲಕ್ಷ್ಮಿಯ
ಆವಾಸಸ್ಥಾನವೇ ಆಗಿದ್ದರು.ಅತ್ಯಂತ ಕಿರಿಯ
ವಯಸ್ಸಿನಲ್ಲಿ ಶ್ರೀಗುರುರಾಜರನ್ನು ಕಣ್ಣಾರೆಕಂಡ
ಭಾಗ್ಯಶಾಲಿಗಳು ಇವರು.ಇವರಿಗೆ ಸಂಸ್ಥಾನದ
ಮೇಲಿರುವ ದೀಕ್ಷೆ ಅಸಾಧಾರಣವಾದದ್ದು.
ಇವೆಲ್ಲ ಗುಣಗಳು ಇವರಿಗೆ ಪೀಠಾಧಿಪತ್ಯವನ್ನು
ದೊರಕಿಸಿಕೊಟ್ಟವು.ಶ್ರೀಉಪೇಂದ್ರತೀರ್ಥರು ಇವರಿಗೆ "ಪರಮಹಂಸಾಶ್ರಮ"ವನ್ನಿತ್ತು
ಶ್ರೀವಾದೀಂದ್ರತೀರ್ಥರೆಂಬ ಅಭಿದಾನವನ್ನು
ಕರುಣಿಸಿದರು.
ಹೆಸರಿಗೆ ತಕ್ಕಂತೆ ಶ್ರೀವಾದೀಂದ್ರರು ವಾದಿಶ್ರೇಷ್ಠರೇ.ಪ್ರಾರಂಭದ ವಿದ್ಯಾಭ್ಯಾಸವನ್ನು
ತಮ್ಮ ತಂದೆಯವರಾದ ಶ್ರೀಪುರುಷೋತ್ತಮಾ
ಚಾರ್ಯರಲ್ಲಿ ಮುಗಿಸಿದ ಶ್ರೀವಾದೀಂದ್ರರು
ಉನ್ನತಾಧ್ಯಯನವನ್ನು ಶ್ರೀಮಠದ ಮತ್ತೊಬ್ಬ
ಶಕ ಪುರುಷರಾದ ಶ್ರೀಸುಮತೀಂದ್ರತೀರ್ಥರಲ್ಲಿ
ಹಾಗೂ ಆಶ್ರಮ ಗುರುಗಳಾದ ಶ್ರೀಉಪೇಂದ್ರತೀರ್ಥರಲ್ಲಿ ಮಾಡಿದರು.
ಶ್ರೀವಾದೀಂದ್ರತೀರ್ಥರು ಅದ್ಭುತವಾದ ಕವಿಗಳೂ ಆಗಿದ್ದರು.ಅವರು ರಚಿಸಿದ "ಗುರುಗಣಸ್ತವನ" ಎನ್ನುವ ಖಂಡ ಕಾವ್ಯ
ಪ್ರತಿಯೊಬ್ಬ ಓದುಗರ ಮನವನ್ನು ಸೂರೆಗೊಂಡಿದೆ.ಶ್ರೀವಾದೀಂದ್ರರು ಶ್ರೀಗುರುರಾಜರ ಸನ್ನಿಧಿಯಲ್ಲಿ ಭಕ್ತಿಪೂರ್ಣ
ವಾಗಿ ಈ ಖಂಡ ಕಾವ್ಯವನ್ನು ಹಾಡಿದಾಗ
ಶ್ರೀ ಗುರುರಾಜರ ವೃಂದಾವನವೇ ತಲೆದೂಗಿ
ಮೆಚ್ಚಿಗೆಯನ್ನು ಸೂಚಿಸಿತಂತೆ.
ಶ್ರೀರಾಘವೇಂದ್ರತೀರ್ಥರಿಗೆ ಭಕ್ತರು ಕೊಟ್ಟ
ಬಿರುದು ಶ್ರೀಗುರುಸಾರ್ವಭೌಮ.ಇವರಿಗೆ
ಮಂತ್ರಿಯಂತೆ ಶ್ರೀವಾದೀಂದ್ರತೀರ್ಥರು ಸಹಕರಿ
ಸಿ ಅಸಂಖ್ಯ ಭಕ್ತರನ್ನು ಉದ್ಧರಿಸುತ್ತಾರೆಂದು
ಅಚಲವಾದ ನಂಬಿಕೆ ಇದೆ.ಶ್ರೀಗುರುರಾಜರಿಗೆ
ಶ್ರೀವಾದೀಂದ್ರರಲ್ಲಿ ಅಪಾರವಾದ ಪ್ರೀತಿ.
ಅದಕ್ಕೆಂದೇ ತಮ್ಮ ಎಡ ಬದಿಯ ಜಾಗವನ್ನು
ಅವರಿಗೆ ಮೀಸಲಿಟ್ಟು ತಮ್ಮ ಬಳಿಯಲ್ಲೇ
ಕುಳ್ಳಿರಿಸಿಕೊಂಡಿದ್ದಾರೆ.ಇವರಿಗೆ ಸೇವೆ ಸಲ್ಲಿಸದೆ
ಶ್ರೀಗುರುರಾಜರ ಸೇವೆಯು ಅಪೂರ್ಣವಾಗುತ್ತದೆ.ಅಷ್ಟು ಮಹತ್ವ ಅವರಿಗಿದೆ.ಇಂತಹ ಯತಿಪುಂಗವರನ್ನು ಪಡೆದ
ನಾವು ಧನ್ಯರು .ಇಂದು ಇವರ ಆರಾಧನೆಯ ದಿನ.ಇವರ ಮೂಲ ವೃಂದಾವನವಿರುವುದು
ಮಂತ್ರಾಲಯ ಕ್ಷೇತ್ರದಲ್ಲಿ ಅದೂ ಶ್ರೀರಾಯರ ಪಕ್ಕದಲ್ಲಿ.ಶ್ರೀರಾಯರು ತಮ್ಮ ಪರಂಪರೆಯಲ್ಲಿ
ಶ್ರೀವಾದೀಂದ್ರತೀರ್ಥರಂಥ ಶ್ರೇಷ್ಠ ಯತಿಗಳು ಸರ್ವಜ್ಞ
ಪೀಠಕ್ಕೆ ಬರುತ್ತಾರೆಂದು ತಿಳಿದಿದ್ದ ರಾಯರು ತಮಗೆಂದು ನಿರ್ಮಾಣ ಮಾಡಿಸಿದ್ದ ಬೃಂದಾವನವನ್ನು
ಶ್ರೀವಾದೀಂದ್ರತೀರ್ಥರಿಗಾಗಿಯೇ ಮೀಸಲಿಟ್ಟಿದ್ದರು.
ಭಕ್ತರು ತಮ್ಮ ಇಷ್ಟಾರ್ಥ ಸಿದ್ಧಿಗೆಂದು ಮಂತ್ರಾಲಯಕ್ಕೆ
ಗುರುರಾಯರ ಸೇವೆಗೆ ಹೋದವರು ಮೊದಲು ಶ್ರೀವಾದೀಂದ್ರತೀರ್ಥ ಗುರುಗಳಲ್ಲಿ ಭಕ್ತಿಯಿಂದ ತಮ್ಮ ಇಷ್ಟಾರ್ಥ ಸಿದ್ಧಿಗಾಗಿ ಪ್ರಾರ್ಥಿಸಿ ಕೊಂಡು ಶ್ರೀರಾಯರಿಂದಲೂ ಅನುಗ್ರಹ ವಾಗುವಂತೆ ಶ್ರೀವಾದೀಂದ್ರತೀರ್ಥ ಗುರುಗಳಲ್ಲಿ ಪ್ರಾರ್ಥಿಸಿಕೊಂಡರೆ
ಶ್ರೀರಾಯರ ಮತ್ತು ಶ್ರೀವಾದೀಂದ್ರರ ಅನುಗ್ರಹ ಶೀಘ್ರವಾಗಿ ಆಗುವುದೆಂದು ಬಹಳ ಜನ ಭಕ್ತರ ಅಭಿಪ್ರಾಯವಾಗಿದೆ.ಶ್ರೀಭೃಗು ಋಷಿಗಳ ಅಂಶ ಸಂಭೂತರಾದ ಶ್ರೀವಿಜಯರಾಯರು ತಮ್ಮ ಕುಲಗುರು ಗಳಾದ ದೇವಗುರು ಶ್ರೀಬೃಹಸ್ಪತಿ ಅವತಾರರಾದ ಶ್ರೀವಾದೀಂದ್ರತೀರ್ಥಗುರುಗಳನ್ನು ಬಹಳ ಭಕ್ತಿಯಿಂದ ಸ್ತುತಿಸಿದ್ದಾರೆ.
ಶ್ರೀಗಳವರ ಆರಾಧನಾ ದಿನದಂದು ಭಕ್ತಿಯ ನಮ
ಸ್ಕಾರಗಳನ್ನು ಅರ್ಪಿಸಿ ನಾವು ಅವರ ಅನುಗ್ರಹಕ್ಕೆ
ಪಾತ್ರರಾಗೋಣ.
*******
ಲೇಖಕರು :
ಜಯಭೀಮ ಜೋಯಿಸ್, ಶಿವಮೊಗ್ಗ

0 Comments