Ticker

6/recent/ticker-posts

Ad Code

Responsive Advertisement

ವಿಶ್ವೇಶ್ವರಾಯತಾಂತ್ರಿಕ ವಿಶ್ವವಿದ್ಯಾಲಯದ ಕಲಬುರ್ಗಿ ವಲಯದ ಕ್ರಿಕೆಟ್ ಪಂದ್ಯಾವಳಿಯಲ್ಲಿ ರಾವ್ ಬಹದ್ದೂರ್ ವೈ ಮಹಾಬಲೇಶ್ವರಪ್ಪತಾಂತ್ರಿಕ ಮಹಾವಿದ್ಯಾಲಯದ ತಂಡಕ್ಕೆ ರನ್ನರಪ್ ಜಯ

ಬಳ್ಳಾರಿ ಜೂನ್ 22. ನಗರದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾದರಾವ್ ಬಹದ್ದೂರ್ ವೈ ಮಹಾಬಲೇಶ್ವರಪ್ಪತಾಂತ್ರಿಕ ಮಹಾವಿದ್ಯಾಲಯದ ತಂಡವು ದಿನಾಂಕ 14.06.2022 ರಿಂದ 21.06.2022 ರ ವರೆಗೆ ಜರುಗಿದ “ವಿಶ್ವೇಶ್ವರಾಯತಾಂತ್ರಿಕ ವಿಶ್ವವಿದ್ಯಾಲಯದ ಗುಲ್ಬರ್ಗಾ ಅಂತರ್ ವಲಯದ ಕ್ರಿಕೆಟ್ ಪಂದ್ಯಾವಳಿಗಳಲ್ಲಿ  ಅಂತಿಮ ಪಂದ್ಯಾವಳಿಯಲ್ಲಿ ರನ್ನರಪ್‍ಜಯಗಳಿಸಿತು. ಈ ಪಂದ್ಯಾವಳಿಗಳಲ್ಲಿ ಕಲಬುರ್ಗಿ ವಲಯದ ಒಟ್ಟು 18ತಂಡಗಳು  ಭಾಗವಹಿಸಲು ಆಗಮಿಸಿದ್ದವು.ಫೈನಲ್ ಮ್ಯಾಚ್ ನಲ್ಲಿ ,ರಾವ್ ಬಹದ್ದೂರ್ ವೈ ಮಹಾಬಲೇಶ್ವರಪ್ಪತಾಂತ್ರಿಕ ಮಹಾವಿದ್ಯಾಲಯದ ತಂಡವು, ಮೊದಲುಬೌಲಿಂಗ್ ಮಾಡಲುಆಯ್ಕೆ ಮಾಡಿತು ಹಾಗು ಬಾಗಲಕೋಟೆಯ ಬಸವೇಶ್ವರ ಇಂಜನೀರಿಂಗ್ ಕಾಲೇಜನ್ನು ಬ್ಯಾಟಿಂಗ್‍ಮಾಡಲು ಬಯಸಿತು. 

ಬಸವೇಶ್ವರ ಇಂಜನೀರಿಂಗ್ ಕಾಲೇಜ ತಂಡವು216ರನ್ ಮಾಡಿದರೆ, ನಂತರ ಬ್ಯಾಟಿಂಗ್ ಮಾಡಿದರಾವ್ ಬಹದ್ದೂರ್ ವೈ ಮಹಾಬಲೇಶ್ವರಪ್ಪತಾಂತ್ರಿಕ ಮಹಾವಿದ್ಯಾಲಯದತಂಡವು115ರನ್ ಗಳಲ್ಲಿ ಆಲ್-ಔಟ್‍ಆದರು ಹಾಗುರನ್ನರಪ್‍ಜಯಗಳಿಸಿತು. 

ರಾವ್ ಬಹದ್ದೂರ್ ವೈ ಮಹಾಬಲೇಶ್ವರಪ್ಪತಾಂತ್ರಿಕ ಮಹಾವಿದ್ಯಾಲಯದತಂಡದಲ್ಲಿಜಗದೀಶ(ಕೆಪ್ಟನ್), ವೀರಭದ್ರ, ಶಶಾಂಕ್, ಉದಯ್, ಅಜ್ಮಲ್, ಹೇಮಂತ್, ಡಾನಿಯಲ್, ಇಬ್ರಹೀಂ, ಶಿವಶಾಂತ್, ತಿಲಕ್, ಅಭಿಷೇಕ್, ನಿಖಿಲ್, ಗಣೇಶ, ಸಂದೀಪ್, ಪವನ್, ಮಂಜು, ಹರೀಷ್, ಚಂದ್ರಶೇಖರ್ ಇವರು ಭಾಗವಹಿಸಿದ್ದರು.

ವೀರಶೈವ ವಿದ್ಯಾವರ್ಧಕ ಸಂಘದಅಧ್ಯಕ್ಷರಾದ ಗುರುಸಿದ್ದಸ್ವಾಮಿ, ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷರಾದಹಾಗು ಉಪಾಧ್ಯಕ್ಷರಾದ ಅಲ್ಲಂಚನ್ನಪ್ಪ, ಕಾರ್ಯದರ್ಶಿ ಬಿ.ವಿ. ಬಸವರಾಜ್, ಸಹಕಾರ್ಯದರ್ಶಿ ಶಾಂತವೀರನಗೌಡರು, ಕೋಶಾಧಿಕಾರಿ ಗೋನಾಳ್ ರಾಜಶೇಖರ್‍ಗೌಡರು , ಆರ್.ವೈ.ಎಮ್,ಇ,ಸಿ ಆಡಳಿತ ಮಂಡಳಿಯ ಸದಸ್ಯರಾದ  ಜಿ.ಎಂಮಲ್ಲಿಕಾರ್ಜುನರೆಡ್ಡಿ,  ಬಸವರಾಜರೂಪನಗುಡಿ, ಜಾನೆಕುಂಟೆÉ ಪೋಂಪನಗೌಡ, ಕೊರ್ಲಗುಂದಿ ಬಸವನ ಗೌಡ, ಹಲಕುಂದಿ ಸತೀಶ್‍ಕುಮಾರ್ ಹಾಗು ರಾವ್ ಬಹದ್ದೂರ್ ವೈ ಮಹಾಬಲೇಶ್ವರಪ್ಪ ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ||ಟಿ.ಹನುಮಂತರೆಡ್ಡಿ, ವಿನ್ನರ್ಸ್‍ಟ್ರೋಫಿಯನ್ನು ನೀಡುತ್ತ ಈ ಪಂದ್ಯಾವಳಿಗಳಲ್ಲಿ ಭಾಗವಹಿಸಿದ ಎಲ್ಲಾ ತಂಡಗಳಿಗೆ ಅಭಿನಂದನೆಗಳು ವಿಜೇತರಿಗೆ ಇನ್ನು ಹೆಚ್ಚಿನ ಸಾಧನೆಗೈದು ನಮ್ಮ ದೇಶದ ಕ್ರಿಕೆಟ್ ಟೀಂನಲ್ಲಿ ಸೇರ್ಪಡೆಯಾಗಲು ಪ್ರಯತ್ನಿಸಬೇಕಾಗಿದೆ"ಎಂದು ಪ್ರೋತ್ಸಾಹಿಸಿದರು. ಈಕಾರ್ಯಕ್ರಮದಲ್ಲಿ ಬಳ್ಳಾರಿ-ಗಾಂಧೀನಗರದ ಪಿ.ಎಸ್.ಐ  ನಾಗರಾಜ ಕೋಟಗಿ, ತುಮಕೂರ ಜೋನಲ್ ಸೆಲೆಕ್ಷನ್ ಕಮಿಟೀ ಚೈರ್Àಮನ್ ಕಿಶೋರ್ ಬಾಬು, ನಮ್ಮಕಾಲೇಜಿನ ಧೈಹಿಕ ಶಿಕ್ಷಕರಾದ ವಿಜಯಮಹಂತೇಶ ಇನ್ನಿತರರು ಉಪಸ್ಥಿತರಿದ್ದರು.





 

Post a Comment

0 Comments

Ad Code

Responsive Advertisement