ವಿಜಯನಗರ ಜಿಲ್ಲೆಯ ಹೂವಿನಹಡಗಲಿ ಪಟ್ಟಣದ ಎಂ.ಎಂ.ಪಾಟೀಲ್ ಪ್ರೌಢಶಾಲೆಯ ವಿದ್ಯಾರ್ಥಿನಿ ಎಂ.ಪಿ.ಎಂ.ಸೌಜನ್ಯ ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ 625ಕ್ಕೆ625 ರಾಜ್ಯಕ್ಕೆ ಪ್ರಥಮ ಸ್ಥಾನವನ್ನು ಪಡೆದು ಶಾಲೆಗೆ ತಾಲ್ಲೂಕಿಗೆ ಜಿಲ್ಲೆಗೆ ಕೀರ್ತಿ ತಂದಿದ್ದಾಳೆ. ಸತತ ಅಧ್ಯಯನ ಮತ್ತು ಪರಿಶ್ರಮದಿಂದ ಈ ಸಾಧನೆಯನ್ನು ಮಾಡಲು ಸಾಧ್ಯವಾಗಿದೆ.
ಇವರ ತಂದೆ ಎಂ.ಪಿ.ಎಂ.ಶಿವಪ್ರಕಾಶಸ್ವಾಮಿ ಅತಿಥಿ ಉಪನ್ಯಾಸಕರು ಹಾಗೂ ಪತ್ರಿಕಾ ವರದಿಗಾರರಾಗಿ ಕಾರ್ಯನಿರ್ವಹಿಸುತ್ತಾರೆ, ತಾಯಿ ಎ.ಎಚ್.ಎಂ.ವಿದ್ಯಾವತಿ ಶಾಲಾ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಾರೆ.
ಇದು ಎಂ.ಪಿ.ಎಂ ಸೌಜನ್ಯಳ ಯಶೋಗಾಥೆ. ಇತ್ತೀಚಿಗೆ ಪ್ರಕಟವಾದ ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಮೊದಲು 625ಕ್ಕೆ 624 ಅಂಕ ಬಂದಿತ್ತು ವಿಜ್ಞಾನ ಪತ್ರಿಕೆಯಲ್ಲಿ 80ಕ್ಕೆ80 ಅಂಕ ಬಂದಿದ್ದರು ರಿಸಲ್ಟ್ ಸೀಟಲ್ಲಿ 79 ಎಂದು ಬಂದಿತ್ತು ತನ್ನ ಸಾಮಥ್ರ್ಯದ ಮೇಲೆ ಇದ್ದ ನಂಬಿಕೆಯನ್ನು ಒರೆಗೆ ಹಚ್ಚಿ ವಿಜ್ಞಾನ ಪತ್ರಿಕೆಯ ಜರಾಕ್ಸ್‍ನ್ನು ತರಿಸಿ ನೋಡಿದರೆ ಮರು ವಿಜ್ಞಾನದಲ್ಲಿ 80ಕ್ಕೆ 80ಪಡೆದದ್ದು ಬಯಲಿಗೆ ಬಂತು. ಅಂದರೆ 625ಕ್ಕೆ 625 ಅಂಕ ಪಡೆದುಕೊಂಡು ರಾಜ್ಯ ಮಟ್ಟದಲ್ಲಿ ಹೆಸರು ಮಾಡಿದ್ದಾಳೆ. ಆಕೆಯ ಛಲ, ಆತ್ಮ ವಿಶ್ವಾಸ ಶ್ಲಾಘನೀಯ. ಒಂದು ಅಂಕವನ್ನು ಬೇರೆ ದೃಷ್ಟಿ ಯಿಂದ ನೋಡಿದ್ದವರಿಗೆ ಸರಿಯಾಗಿ ಉತ್ತರಿಸಿದ್ದಾಳೆ. ಶಿಕ್ಷಣದ ಪಾವಿತ್ರ್ಯತೆಯನ್ನು ಎತ್ತಿಹಿಡಿದಿದ್ದಾಳೆ. ಮೊದಲ ಫಲಿತಾಂಶದಲ್ಲಿ 625 ಬಂದಿದ್ದರೆ ಅದರ ಸಂತೋಷವೇ ಬೇರೆಯಾಗಿರುತ್ತದೆ ಗಣಕ ಯಂತ್ರದಲ್ಲಿ ಕೆಲಸ ಮಾಡುವ ಸಮಯದಲ್ಲಿ ಎಸಗಿದ ತಪ್ಪಿನಿಂದ ರಾಜ್ಯ ಮಟ್ಟದಲ್ಲಿ ಮೊದಲ ಸ್ಥಾನದಲ್ಲಿ ಗುರುತಿಸಿಕೊಳ್ಳ ಬೇಕಿದ್ದ ಸೌಜನ್ಯ ಎರಡನೇ ಸ್ಥಾನದಲ್ಲಿ ಗುರುತಿಸಿಕೊಂಡಳು ಯಾರೋ ಮಾಡುವ ತಪ್ಪಿನಿಂದ ಮಕ್ಕಳಿಗೆ ಶಿಕ್ಷೆ ಯಾವ ನ್ಯಾಯ. ಇದಕ್ಕೆ ಎಚ್ಚರದಿಂದ ಕಾರ್ಯನಿರ್ವಹಿಸಬೇಕಾಗುತ್ತದೆ, 1ತರಗತಿಯಿಂದ 8ನೇ ತರಗತಿಯವರೆಗೆ ಪಟ್ಟಣದ ಮೌಂಟ್ ಕಾರ್ಮೆಲ್ ಶಾಲೆಯಲ್ಲಿ ಅಧ್ಯಯನ ನಂತರ 9ಮತ್ತು 10ನೇ ತರಗತಿಯನ್ನು ಎಂ.ಎಂ.ಪಾಟೀಲ್ ಪ್ರೌಢಶಾಲೆಯಲ್ಲಿ ಅಭ್ಯಾಸ ಮಾಡಿ ಕರೋನ್ ಸಮಯದಲ್ಲಿ 9ನೇ ತರಗತಿ ಅಭ್ಯಾಸ ಮಾಡಲು ಸಾಧ್ಯವಾಗಿಲ್ಲ ಎಸ್‍ಎಸ್‍ಎಲ್‍ಸಿ ತರಗತಿಯಲ್ಲಿ ಬಹಳ ಶ್ರಮದಿಂದ ಅಭ್ಯಾಸ ಮಾಡಿ ಈ ಸಾಧನೆ ಮಾಡಿರುವುದು ಶ್ಲಾಘನೀಯವಾಗಿದೆ. ತನ್ನ ಯಶಸ್ಸಿನ ಹಿಂದಿರುವ ತನ್ನ ತಂದೆ-ತಾಯಿ, ಬಂಧು-ಬಳಗ, ಶಾಲಾ ಸಂಸ್ಥೆಯವರು, ಶಿಕ್ಷಕ ವೃಂದ ಮತ್ತು ಸ್ನೇಹಿತರಿಗೆ ಸೌಜನ್ಯ ಅಭಿನಂದನೆ ಸಲ್ಲಿಸಿದ್ದಾಳೆ.
0 Comments