Ticker

6/recent/ticker-posts

Ad Code

Responsive Advertisement

ಟಿ.ಎ.ನಾರಾಯಣಗೌಡರವರ 56ನೇ ಜನ್ಮ ದಿನಾಚರಣೆ-ಅನಾಥ ಆಶ್ರಮದಲ್ಲಿ ಹಣ್ಣು ಹಂಪಲು ವಿತರಣೆ

ಬಳ್ಳಾರಿ ಜೂನ್ 10. ಕರ್ನಾಟಕ ರಕ್ಷಣಾ ವೇದಿಕೆ, ಬಳ್ಳಾರಿ ಜಿಲ್ಲಾ ಘಟಕದವತಿಯಿಂದ ದಿನಾಂಕ 10-06-2022 ರಂದು ನಾಡ ಸೇನಾನಿ,ನಾಯಕರು ರಾಜ್ಯಾಧ್ಯಕ್ಷರಾದ  ಟಿ.ಎ.ನಾರಾಯಣಗೌಡರವರ ಜನ್ಮದಿನವನ್ನು ಬಳ್ಳಾರಿ ನಗರದಲ್ಲಿ ಮಹಾಪೌರರು "ಶ್ರೀಮತಿ ರಾಜೇಶ್ವರಿ ಸುಬ್ಬರಾಯುಡು" ಮತ್ತು ಕಸಾಪ ಅಧ್ಯಕ್ಷರಾದ ನಿಷ್ಠಿರುದ್ರಪ್ಪ" ಮತ್ತು ಮಹಾನಗರ ಪಾಲಿಕೆಯ ಸದಸ್ಯರು ಮತ್ತು ಪ್ರಧಾನ ಧರ್ಮಕರ್ತರಾದ ಪಿ.ಗಾದೆಪ್ಪ, ಇವರ ನೇತೃತ್ವದಲ್ಲಿ ಹಣ್ಣು ಮತ್ತು ಬ್ರೆಡ್‍ಗಳನ್ನು ಓ.ಪಿ.ಡಿ. ಹತ್ತಿರ ಇರುವ ಅನಾಥ ಆಶ್ರಮದಲ್ಲಿ ಹಂಚುವ ಮೂಲಕ ಅರ್ಥಗರ್ಭಿತವಾಗಿ ಕೇಕ್ ಕತ್ತರಿಸುವ ಮೂಲಕ ಸರಳವಾಗಿ ಆಚರಿಸಿ ಎಲ್ಲಾ ಬುದ್ದಿಮಾಧ್ಯಮದವರಿಗೆ ಬ್ರೆಡ್ ಮತ್ತು ಹಣ್ಣುಗಳನ್ನು ವಿತರಿಸಲಾಯಿತು.


ಸನ್ಮಾನ ಕಾರ್ಯಕ್ರಮವನ್ನು ಮಹಾಪೌರರು "ಶ್ರೀಮತಿ ರಾಜೇಶ್ವರಿ ಸುಬ್ಬರಾಯುಡು ಮತ್ತು ಕ.ಸಾ.ಪ. ಅಧ್ಯಕ್ಷರಾದ ನಿಷ್ಠಿರುದ್ರಪ್ಪ ಮತ್ತು ಮಹಾನಗರ ಪಾಲಿಕೆ ಪಾಲಿಕೆ ಸದಸ್ಯರಾದ ಪಿ.ಗಾದೆಪ್ಪ ಇವರನ್ನು ಸನ್ಮಾನಿಸಲಾಯಿತು

ಈ ಸಂದರ್ಭದಲ್ಲಿ ಕರವೇ ಕುಟುಂಬದ ಎಲ್ಲಾ ಪದಾಧಿಕಾರಿಗಳು ಕಾರ್ಯಕರ್ತರು ಮತ್ತು ಕನ್ನಡದ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಜನ್ಮದಿನದ ಶುಭ ಹಾರೈಸಲಾಯಿತು.

ಈ ಸಂದರ್ಭದಲ್ಲಿ ಕರವೇ ಜಿಲ್ಲಾಧ್ಯಕ್ಷರಾದ ಚಾನಾಳ್ ಶೇಖರ್, ಉಪಾಧ್ಯಕ್ಷರಾದ ಶಿವಕುಮಾರ್, ತಾಲ್ಲುಕು ಅಧ್ಯಕ್ಷರಾದ ಅಂಗಡಿ ಶಂಕರ್, ಆತ್ಮನಂದರೆಡ್ಡಿ, ಮೋಕಾ ಪೊಂಪನಗೌಡ, ಶಶಿಕುಮಾರ್ ಬೆಟ್ಟಪ್ಪ, ವಿರೇಶ್ ತೋಟದ, ವಿಶ್ವನಾಥ, ಮಂಜುನಾಥ ಬೆಳ್ಳಿಗಾರ್, ಗಂಗಾವತಿ ವಿರೇಶ್, ಸಿಂಧಿಗೇರಿ ಗೋವಿಂದ, ಶಿವಕುಮಾರ್, ರಾಜೇಶ್ ಶಂಕರಬಂಡೆ, ಕುಮಾರ್, ಶಿವಕುಮಾರ್ ಕುಡತಿನಿ, ಮಸ್ಕಿ ಮಹಾಂತೇಶ್, ಮಲ್ಲಿಕಾರ್ಜುನ ಚಾನಾಳ್ ಮುಂತಾದವರು ಉಪಸ್ಥಿತರಿದ್ದರು.



 

Post a Comment

0 Comments

Ad Code

Responsive Advertisement