ರಾಜ್ಯದ ನಗರ ಸ್ಥಳಿಯ ಸಂಸ್ಥೆಗಳಾದ ಪಟ್ಟಣ ಪಂಚಾಯತ್, ಪುರ ಸಭೆ, ನಗರ ಸಭೆ,ನಗರ ಪಾಲಿಕೆ, ಗಳಲ್ಲಿ ಗುತ್ತಿಗೆ. ಹೋರ ಗುತ್ತಿಗೆ,ನೇರ ಪಾವತಿ, ಸಮಾನ ಕೆಲಸಕ್ಕೆ ಸಮಾನ ವೇತನ,ದಿನಗೂಲಿ, ದ ಅಡಿಯಲ್ಲಿ ದುಡಿಯುತ್ತಿರುವ ಪೌರ ಕಾರ್ಮಿಕರು, ಲೋಡರ್ ಗಳು, ವಾಟರ್ ಮ್ಯಾನ್ಗಳು, ಕಸದ ಅಟೋ ಚಾಲಕರು, ಕಂಪ್ಯೂಟರ್ ಅಪರೇಟರ್ಗಳು, ಯು.ಜಿ.ಡಿ ಕಾರ್ಮಿಕರು,ಕಛೇರಿ ಸಹಾಯಕರು, ಘನ ತ್ಯಾಜ್ಯ ವಿಲೇವಾರಿ ಘಟಕದ ಕಾರ್ಮಿಕರು, ಸ್ಮಶಾಣ, ಪಾರ್ಕಗಳಲ್ಲಿ ದುಡಿವ ಕಾರ್ಮಿಕರು, ಯುಜಿಡಿ ನೀರು ಸಂಸ್ಕರಣೆ ಘಟಕದ ಕಾರ್ಮಿಕರು, ಹತ್ತಾರು ವರ್ಷಗಳಿಂದ ನಿರಂತರವಾಗಿ ಗುತ್ತಿಗೆ - ಹೊರ ಗುತ್ತಿಗೆ, ದಿನಕೂಲಿ, ಇತರೆ ಹೆಸರುಗಳಲ್ಲಿ ಖಾಯಂ ಅಲ್ಲದ ಕಾರ್ಮಿಕರಾಗಿ ದುಡಿಯುತ್ತ ಬಂದಿರುತ್ತಾರೆ. ಈ ಕಾರ್ಮಿಕರು ಖಾಯಂ ಕಾರ್ಮಿಕರ ಮಾಡುವ ಕೆಲಸವನ್ನು ಮಾಡುತ್ತಿದ್ದಾರೆ. ಈ ಎಲ್ಲಾ ಕಾರ್ಮಿಕರು ಗುತ್ತಿಗೆ ನಿಯಂತ್ರಣ ಮತ್ತು ನಿಷೇಧ ಕಾಯಿದೆ- 1970 ರಡಿಯಲ್ಲಿ ಸಮಾನ ವೇತನಕ್ಕೆ ಅರ್ಹರಾಗಿದ್ದರೆ, ಅದರೆ ಸರ್ಕಾರಗಳು ಕಾನುನೂನಿನ ಈ ಅಂಶವನ್ನು ಜಾರಿಮಾಡದೆ ವಂಚಿಸುತ್ತಿದೆ ಎಂದು ಮುನಸಿಪಲ್ ಕಾರ್ಮಿಕರ ಸಂಘಟನೆಗಳು ಅರೂಪಿಸಿವೆ.
ಸೇಟ್ ಅಫ್ ಪಂಜಾಬ್ ಗಿS ಜಗಜೀತ್ ಸಿಂಗ್ & ಇತರರು ವಿವಾಧದಲ್ಲಿ ದೇಶದ ಸವೋಚ್ಚ ನ್ಯಾಯಲವು ‘’ ಸಮಾನ ಕೆಲಸಕ್ಕೆ ಸಮಾನ ವೇತನದ ತತ್ವವನ್ನು ಎತ್ತಿಹಿಡಿದಿದೆ. ಈ ಹಿನ್ನೆಲೆಯಲ್ಲಿ ಮತ್ತು ಒಂದೇ ಸ್ವರೂಪದ ಕೆಲಸಗಳನ್ನು ಮಾಡುತ್ತಿರುವವರ ವೇತನದಲ್ಲಿನ ತಾರತಮ್ಯವು ಕಡಿಮೆ ವೇತನಕ್ಕೆ ದುಡಿಸುವ ಶೋಷಣೆಯು ಮತ್ತು ಸ್ವಭಾವಿ ನ್ಯಾಯಕ್ಕೆ ವಿರುದ್ದವಾದ್ದು ಎಂದು ಸಂಘಟನೆಗಳು ಅಭಿಪ್ರಾಯಪಟ್ಟಿವೆ,
ಈ ಕರಿತು ಸರ್ಕಾರ ಮತ್ತು ನಾಗರಿಕ ಸಮಾಜದ ಗಮನ ಸೇಳೆಯಲು ದಿನಾಂಕ; 28-06-2022 ರ ಮಂಗಳವಾರದಂದು ಬೇಳಿಗ್ಗೆ- 10-30 ರಿಂದ 1-30 ತನಕ ತುಮಕೂರಿನ ಬಾಲಭವನದಲ್ಲಿ ಕರ್ನಾಟಕ ರಾಜ್ಯ ಮುನಿಸಿಪಲ್ ಕಾರ್ಮಿಕರ ಸಂಘ. ರಿ ಸಿಐಟಿಯು ವತಿಯಿಂದರಾಜ್ಯ ಮಟ್ಟದ ಸಮಾನ ಕೆಲಸಕ್ಕೆ ಸಮಾನ ವೇತನ - ರಾಜ್ಯ ಸಮಾವೇಶ ಸಂಘಟಿಸಲಾಗುತ್ತಿದೆ. ಈ ಸಮಾವೇಶವನ್ನು ನಿವೃತ್ತಿ ನ್ಯಾಯಮೂರ್ತಿ ಹೆಚ್. ಎನ್. ನಾಗಮೋಹನ್ ದಾಸ್, ಅವರು ಉಧ್ಘಾಟಿಸಲಿದ್ದಾರೆ. ನಗರಾಭಿವೃದ್ದಿ ಇಲಾಖೆಯ ಪ್ರಧಾನ ಕಾರ್ಯಧರ್ಶಿಗಳಾದ ಶ್ರೀ ಅಜಯ್ ನಾಗಬೂಷಣ್, ಪೌರಾಡಳಿ ನೀರ್ಧೇಶಕರಾದ ಶ್ರೀಮತಿ ಅರ್ಚನಾ , ತುಮಕೂರು ಜಿಲ್ಲಾಧಿಕಾರಿಗಳಾದ . ಶ್ರೀ ವೈ.ಎಸ್ ಪಾಟಿಲ್, ಜಿಲ್ಲಾ ಯೋಜನಾ ನೀರ್ಧೇಶಕರಾದ . ಶ್ರೀ ಅಂಜನಪ್ಪ, ಮಹಾ ನಗರ ಪಾಲಿಕೆಯ ಆಯುಕ್ತರಾದ ಶ್ರೀಮತಿ ರೇಣಿಕಮ್ಮ, ಚಿಂತಕ ಪ್ರೋ; ಕೆ .ದೂರೈರಾಜು, ಸ್ಲಂ ಜನಂದೋಲನದ ರಾಜ್ಯ ಸಂಚಾಲಕರಾದ.ಎ ನರಸಿಂಹ ಮೂರ್ತಿ, ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಅಧ್ಯಕ್ಷತೆಯನ್ನು ಸಂಘಟನೆಯ ರಾಜ್ಯ ಅಧ್ಯಕ್ಷರಾದ ಹರಿಶ್ ನಾಯಕ್ ಅವರು ವಹಿಸಲಿದ್ದು ಪ್ರಾಸ್ತವಿಕ ಮಾತನ್ನು ಸಂಘದ ಪ್ರಧಾನ ಕಾರ್ಯಧರ್ಶಿಗಳಾದ ಸೈಯದ್ ಮುಜೀಬ್ ಅಡಳಿದ್ದಾರೆ. ಈ ಸಮಾವೇಶಕ್ಕೆ ರಾಜ್ಯದ ವಿವಿಧ ಜಿಲ್ಲೆಗಳಿಂದ ಮುನಿಸಿಪಲ್ ಕಾರ್ಮಿಕರ ಭಾಗವಹಿಸಲಿದಾರೆ.
0 Comments