Ticker

6/recent/ticker-posts

Ad Code

Responsive Advertisement

ಮಲ್ಲೇಶ್ವರದಲ್ಲಿ ಯಶಸ್ಸು ಕಂಡ 'ಮಾವಿನ ಮೇಳ -2022'

ಈಗ ಮಾವಿನಹಣ್ಣಿನ ಕಾಲ... ಮಾವಿನ ಹೆಸರೇಳಿದರೆ ಸಾಕು ಎಲ್ಲರ ಬಾಯಲ್ಲೂ ನೀರೂರಿಸುವ ಉತ್ತಮ ತಳಿಯ ಮಾವಿನ ಹಣ್ಣುಗಳು ಕಣ್ಣ ಮುಂದೆ ಬರುತ್ತದೆ. ಕಳೆದ ಎರಡು ವರ್ಷಗಳಿಂದ ಕೊರೊನಾ ಸಂಕಷ್ಟದಿ0ದ ಮಾವಿನ ವ್ಯಾಪಾರ ಮತ್ತು ವ್ಯವಹಾರಕ್ಕೆ ಧಕ್ಕೆಯಾಗಿತ್ತು.





ಈ ವರ್ಷ ಮಾವಿನ ಹಣ್ಣು ಉತ್ತಮ ಫಸಲು ಬಂದಿದೆ. ಬೇಡಿಕೆಯೂ ಅಧಿಕವಾಗಿದೆ. ಕರ್ನಾಟಕದಲ್ಲಿ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಅತ್ಯಂತ ಹೆಚ್ಚು ಮಾವಿನ ಹಣ್ಣುಗಳ ಬೆಳೆಯುವ ಪ್ರದೇಶಗಳಾಗಿದ್ದು, ಶ್ರೀನಿವಾಸಪುರ ತಾಲೂಕು ಮಾವಿನ ಬೆಳೆಯಲ್ಲಿ ವಿಶೇಷ ಸ್ಥಾನಮಾನ ಪಡೆದುಕೊಂಡಿದೆ. 

ಅಂತೆಯೇ ಈ ಬಾರಿ ಮಲ್ಲೇಶ್ವರದ ಮೈದಾನದಲ್ಲಿ ಹಾಪ್‌ಕಾಮ್ಸ್ ನೇತೃತ್ವದಲ್ಲಿ ಮತ್ತು ಸ್ಥಳೀಯ ಶಾಸಕರು, ಸಚಿವರಾದ ಆಶ್ವಥನಾರಾಯಣರವರ  ಸಹಕಾರದಿಂದ ಮಾವಿನ ಮೇಳವನ್ನು ಮೂರು ದಿನಗಳ ಕಾಲ ಆಯೋಜಿಸಲಾಗಿತ್ತು. 

ಮಲ್ಲೇಶ್ವರದಲ್ಲಿ ಪರಮಪೂಜ್ಯ ಶ್ರೀ ಯದುಗಿರಿ ಯತಿರಾಜ ನಾರಾಯಣ ರಾಮಾನುಜ ಜೀಯರ್ ಸ್ವಾಮೀಜಿಗಳವರ ದಿವ್ಯ ಉಪಸ್ಥಿತಿಯಲ್ಲಿ "ಮಾವು ಮೇಳ"ಕ್ಕೆ ಚಾಲನೆ ನೀಡಲಾಯಿತು. ಜೂನ್ 3ರಿಂದ 5 ರವರೆಗೆ ಮೂರು ದಿನಗಳ ಕಾಲ ಮಲ್ಲೇಶ್ವರದ ಸರ್ಕಾರಿ ಶಾಲಾ ಆವರಣದಲ್ಲಿ ನಡೆಯುವ ಈ ಮೇಳದಲ್ಲಿ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದುದು ಕಂಡುಬ0ತು.

ಕೋಲಾರ ಜಿಲ್ಲೆ, ಚಿಕ್ಕಬಳ್ಳಾಪುರ ಜಿಲ್ಲೆ ಮತ್ತು ರಾಮನಗರ ಜಿಲ್ಲೆಯ ಮಾವು ಬೆಲೆಗಾರರು ಈ ಮೇಳದಲ್ಲಿ ಭಾಗವಹಿಸಿದ್ದರು. ಇವು ವಿಶೇಷವಾಗಿ ರಾಸಾಯಿನಿಕ ಮುಕ್ತವಾಗಿ ಮಾಗಿಸಿದ ಹಣ್ಣುಗಳಾಗಿದ್ದು ಎಲ್ಲರೂ ಬಳಸುವ ಆರೋಗ್ಯಕರ ಮಾವಿನ ಹಣ್ಣುಗಳಾಗಿವೆ.

ಕೋಲಾರ ಜಿಲ್ಲೆಯ ಮಾವು ಬೆಳಗಾರರು ಆದ ಆನಂದ ರೆಡ್ಡಿಯವರು ವಾರ್ತಾಜಾಲ ವರದಿಗಾರರೊಂದಿಗೆ ಮಾತನಾಡುತ್ತಾ, ತಾವು 20 ಎಕರೆ ಜಮೀನಿನಲ್ಲಿ ವಿವಿಧ ತಳಿಗಳ ಮಾವುಗಳನ್ನು ಬೆಳೆಯುತ್ತಿದ್ದ. ಅದರಲ್ಲಿ ಮಲ್ಲಕಾ, ಬಾದಮಿ, ರಸಪುರಿ ಮತ್ತು ತೋತೋಪುರಿ ತಳಿಗಳು ಮುಖ್ಯವಾದವು. ಇವಲ್ಲದೆ ಮಲಗೋವ, ಬಂದರಪಲ್ಲಿ ಮಾವಿನ ತಳಿಗಳೂ ಸೇರಿವೆ. ಮಾವಿನ ಮೇಳಗಳಲ್ಲಿ ಹಣ್ಣನ್ನು ಕೃತಿಕವಾಗಿ ರಾಸಾಯಿನಿಕ ಪದಾರ್ಥಗಳನ್ನು ಬಳಸಿ ಮಾಗಿಸಿದೆ. ಸಹಜ ರೀತಿಯಲ್ಲಿ ಮಾಗಿಸಿದ ಹಣ್ಣುಗಳನ್ನೇ ಮಾರಾಟ ಮಾಡುತ್ತಿದ್ದೆ ಇದು ಬಳಕೆದಾರರ ಹಿತದೃಷ್ಟಿಯಿಂದ ಮಾಡುತ್ತಿದ್ದೇವೆ. ವ್ಯಾಪಾರ ಸುಮಾರಾಗಿ ನಡೆಯುತ್ತದೆ. ಹೆಚ್ಚಿನ ಪ್ರಚಾರವಿದಿದ್ದರೆ ಉತ್ತಮ ವ್ಯಾಪಾರವಾಗುತ್ತಿತ್ತು ಎಂದು ಪ್ರತಿಕ್ರಿಯೆಸಿದರು.

ಮತ್ತೊಬ್ಬ ಮಾವಿನ ರೈತರಾದ ಗಂಗಾಧರ ಗೌಡರವರು ತಮ್ಮ ಅನಿಸಿಕೆಗಳನ್ನು ಹಂಚಿಕೊಳ್ಳುತ್ತಾ ನಾನು ವೃತ್ತಿಯಲ್ಲಿ ವಕೀಲನಾದರೂ, ಕೃಷಿಕರ ಮನೆಯಲ್ಲಿ ಹುಟ್ಟಿ ಬೆಳೆದವನು, ಜನರಿಗೆ ಉತ್ತಮ ಗುಣಮಟ್ಟದ ರಾಸಾಯನಿಕ ಮುಕ್ತ ಮಾವಿನ ಹಣ್ಣುಗಳನ್ನು ಜನರಿಗೆ ಒದಗಿಸುವ ಉದ್ದೇಶದಿಂದ ಮೇಳದಲ್ಲಿ ಭಾಗವಹಿಸಿ, ಜನರಿಗೆ ರುಚಿಕರ ಆರೋಗ್ಯಕರ ಮಾವಿನ ಹಣ್ಣುಗಳನ್ನು ಬೆಳೆದು ಮಾರಾಟ ಮಾಡುತ್ತಿದ್ದೇವೆ. ರೈತನಿಂದ ಇದು ನೇರವಾಗಿ ಬಳಕೆದಾರನಿಗೆ ತಲುಪಿಸುವ ವ್ಯವಸ್ಥೆಯೇ ಮಾವಿನ ಮೇಳವಾಗಿದ್ದ ಇದರಲ್ಲಿ ಪಾಲ್ಗೊಳ್ಳುವುದು ಸಂತಸದ ಸಂಗತಿಯಾಗಿದೆ.

ಬಳಕೆದಾರರು ಮಾತನಾಡುತ್ತಾ ಮಾವಿನ ಮೇಳದಲ್ಲಿ ರುಚಿಕರವಾದ ಮಾವಿನ ಹಣ್ಣುಗಳು ಕಡಿಮೆ ಬೆಲೆಗೆ ದೊರಕುತ್ತಿರುವುದು ಸಂತೋಷದ ಸಂಗತಿಯಾಗಿದ್ದು. ಇದರ ಉಪಯೋಗವನ್ನು ಮಲ್ಲೇಶ್ವರದ ಜನರು ಸರಿಯಾದ ರೀತಿಯಲ್ಲಿ ಬಳಸಿಕೊಂಡರೆ ರೈತರಿಗೂ ಲಾಭ, ಬಳಕೆದಾರನಿಗೂ ಲಾಭವಾಗುತ್ತೆಂದು ಅಭಿಪ್ರಾಯ ವ್ಯಕ್ತ ಪಡಿಸಿದರು.

-ವರದಿ: ಕೆ. ರಾಜಣ್ಣ, ಮಾಲೂರು

Post a Comment

0 Comments

Ad Code

Responsive Advertisement