Ticker

6/recent/ticker-posts

Ad Code

Responsive Advertisement

ಕಾಂಗ್ರೆಸ್ ಗಿ/S ಬಿಜೆಪಿ ಸೇಡಿನ ರಾಜಕೀಯ ದುರುದ್ದೇಶಕ್ಕ್ಕೆ ದಲಿತ ಮಹಿಳೆಯ ಲೇಔಟ್ ಸರ್ವನಾಶ!!.

 ಬಳ್ಳಾರಿ ಮೇ 09. ನಗರದಲ್ಲಿ ಸೇಡಿನ,ದುರುದ್ದೇಶದ ರಾಜಕೀಯಗಳು ಆರಂಭವಾಗಿವೇ ಎಂದು ಸಾರ್ವಜನಿಕರ ಅಭಿಪ್ರಾಯ ವ್ಯಕ್ತ ಪಡಿಸುತಿದ್ದಾರೆ. 

ನಗರದ ವರಬಸಪ್ಪ ಗುಡಿ, ಹನುಮಾನ್ ನಗರದ ಹತ್ತಿರ ಪಾಲಿಕೆಯ ಕಂಪೋಷ್ಟು ಯಾರ್ಡ್ ಇದೆ. ಸೆರ್ವೆ ನಂಬರ್ 656/1&2,ಅಂದಾಜು 2ಎಕರೆ 36 ಸೆಂಟ್ಸ್ ಇದೆ. 1960ರಿಂದ ಇಂದಿನ 2019ವರಗೆ  ಅಂದಿನ ನಗರ ಸಭೆ ಸದಸ್ಯ ಅಗಿರವ ದುರ್ಗಪ್ಪ ನಾಗಮ್ಮ  ಅವರ ಹೆಸರಿನಲ್ಲಿ ಇದೆ. 2019ರಲ್ಲಿ ದುರ್ಗಪ್ಪ ಅವರ ಪುತ್ರ ಆಗಿರವ ವಿಜಯಕುಮಾರ್ ಪಾರ್ವತಮ್ಮ ಹೆಸರುನಲ್ಲಿ ದಾನ ವಿಕ್ರಯ ಮಾಡಿಕೊಂಡಿದ್ದಾರೆ. 

ಇವರು ಎಲ್ಲರು ದಲಿತ ಸಮಾಜದ ಅವರು ಇದರಲ್ಲಿ ನಾಗಮ್ಮ ಪೌರ  ಕಾರ್ಮಿಕರು ಕೂಡ ಹೌದು. ಸರ್ಕಾರದ ಮೂಲ ದಾಖಲೆಗಳು ಇಂದಿನವರೆಗೆ ದುರ್ಗಪ್ಪ,ನಾಗಮ್ಮ ವಿಜಯಕುಮಾರ್, ಪಾರ್ವತಮ್ಮ ಹೆಸರುಗೆ 17/7/21 ವರೆಗೆ ತೋರಿಸುತ್ತವೆ. 

ಮಾಹಿತಿ ಹಕ್ಕಿನಲ್ಲಿ  ಕಳೆದ ಡಾಕ್ಯುಮೆಂಟರಿ ಕೂಡಾ ಪ್ರಸ್ತುತ ಅವರು ಹೆಸರುನಲ್ಲಿ ಇದೆ. ಈಹಿಂದಿನ ವರ್ಷಗಳಲ್ಲಿ ಪ್ರಸ್ತುತ ಬಿಜೆಪಿ ಶಾಸಕ ಗಾಲಿ ಸೋಮಶೇಖರ್ ರೆಡ್ಡಿ ಕೆಲ ಅಧಿಕಾರಿಗಳಿಗೆ ಹೇಳಿ ಇದಕ್ಕೆ ಸಂಬಂಧಿಸಿದ ದಾಖಲೆ ಏನಾದರೂ ಪೆಂಡಿಂಗ್ ಇದ್ದರೆ ಮಾಡಿಕೊಡಿ,ಅವರು ದಲಿತ ಸಮಾಜದವರು, ನಮ್ಮ ಪೌರ ಕಾರ್ಮಿಕರು ಎಂದು ಸಹಾಯ ಮಾಡಿದ್ದಾರೆ ಅನ್ನುವುದು ಕೇಳಿ ಬರುತ್ತಾ  ಇದೆ. ಇತ್ತೀಚಿನ ದಿನಗಳಲ್ಲಿ ಪಾರ್ವತಮ್ಮ ಈ ಭೂಮಿಯಲ್ಲಿ ಪ್ಲಾಟ್‍ಗಳು ಹಾಕಲು ಪಾಲಿಕೆ ಸದಸ್ಯರು ಅಗಿರವ ಮುಲ್ಲಂಗಿ ನಂದೀಶ್,ರವೀಂದ್ರ ಬಾಬು ಅವರಿಗೆ ಜಾಯಿಂಟ್ ವೆಂಚರ್‍ನಲ್ಲಿ ಕೊಟ್ಟಿದ್ದಾರೆ. 

ಈಗಾಗಲೇ ಸುಂದರವಾದ ಲೇಔಟ್ ಆಗಿದೆ, ಕೆಲ ಪ್ಲಾಟ್ ಗಳು ಮಾರಾಟ ಆಗಿದ್ದಾವೆ. ಇತ್ತೀಚಿನ ದಿನಗಳಲ್ಲಿ ಪಾಲಿಕೆ ಆ ಸ್ಥಳವನ್ನು  ಸರ್ಕಾರದ  ಆಸ್ಥಿ ಎಂದು ಶನಿವಾರ ಬೆಳಿಗ್ಗೆ ಯಂತ್ರಗಳು ಮೂಲಕ ಲೇಔಟನ್ನು ಸರ್ವನಾಶ ಮಾಡಿದ್ದಾರೆ. 

ಕೋಟಿ ಗಟ್ಟಲೆ ಇನ್ವೆಸ್ಟ್ ಮೆಂಟ್ ಮಾಡಿ ರಸ್ತೆ ಗಳು, ಕರೆಂಟ್, ನೀರು ವ್ಯವಸ್ಥೆ ಮಾಡಿದ್ದಾರೆ. ಈಲೇಔಟ್ ಮೇಲೆ ಯಾರಿಗಿತ್ತು ಸಿಟ್ಟು? ಪ್ರಸ್ತುತ ರಾಜಕೀಯ ವಿದ್ಯಮಾನಗಳಲ್ಲಿ ಮೊನ್ನೆ ನಡೆದ ಪಾಲಿಕೆ ಚುನಾವಣೆಯಲ್ಲಿ  ಶಾಸಕ ಸೋಮಶೇಖರ್ ರೆಡ್ಡಿ ಪುತ್ರ  ಮುಲ್ಲಂಗಿ ನಂದೀಶ್  ಕೈನಲ್ಲಿ ಪರಾಜಯ ಹೊಂದಿದ್ದರು. ಇಡೀ ಆಡಳಿತ ಪಕ್ಷ ಬಿಜೆಪಿ, ಕೆಲಸ ಮಾಡಿದರು,"ರೆಡ್ಡಿ ಗಾರು" ಪುತ್ರನಿಗೆ ಜಯಸಿಗಲಿಲ್ಲ. 

ಒಂದು ರೀತಿಯಲ್ಲಿ ದೇಶ ಮಟ್ಟದಲ್ಲಿ ಗಾಲಿ ಜನಾರ್ದನ ರೆಡ್ಡಿ, ಸೋಮಶೇಖರ್ ರೆಡ್ಡಿ ಕುಟುಂಬದ ಚೊಚ್ಚಲ ರಾಜಕಾರಣಿಯನ್ನು ಗೆಲ್ಲಿಸಿಕೊಳ್ಳಲು ಆಗಿಲ್ಲ ಅನ್ನುವ ಅವಮಾನ ಮಾತುಗಳು ಕೇಳಿ ಬಂದಿದ್ದವು, ಇದರಿಂದ ಪಕ್ಷದಲ್ಲಿ ಕೂಡ "ರೆಡ್ಡಿ ಗಾರು" ಗೆ ಗೌರವ ಕೂಡ ಕಡಿಮೆ ಆಗಿದೆ ಎಂದು ಜನರು ಅಭಿಪ್ರಾಯವನ್ನು ವ್ಯಕ್ತ ಪಡಿಸುತಿದ್ದಾರೆ. ಚೊಚ್ಚಲ ರಾಜಕಾರಣಿ ಸೋಲು, ಶಾಸಕರಿಗೆ ರಾಜಕೀಯ ನಿವೃತ್ತಿ ವರೆಗೆ ಬಂದಿದೆ, ಜನರು ರೆಡ್ಡಿ ಅವರನ್ನು ತಿರಸ್ಕಾರ ಮಾಡಿದ್ದಾರೆ, ಅನ್ನುವ ಸಂದೇಶ ರವಾನೆ ಆಗಿತ್ತು."ರೆಡ್ಡಿ ಗಾರು"ಗೆ ಕೂಡ ರಾಜಕೀಯದಲ್ಲಿ ನಗರದಲ್ಲಿ ತಮ್ಮನ್ನು ಮೀರಿಸುವ ಗಂಡುಮಕ್ಕಳು ಇಲ್ಲವೆಂದು ಹಗಲು ಕನಸು ಕಾಣುತಿದ್ದರು. 

ಪಕ್ಷದಲ್ಲಿ ಕೂಡ "ರೆಡ್ಡಿಗಾರು"ಗೆ ವಿರೋಧಿ ಬಣ ಇದೆ. ಇದನ್ನು ಅರಿತುಕೊಂಡ "ರೆಡ್ಡಿ ಗಾರು"ಮಗನ ಸೋಲುಗೆ ಕಾರಣಭೂತರು ಅಗಿರವ "ಮುಲ್ಲಂಗಿ" ಅವರುಗೆ ಲೇಔಟ್ ನಿರ್ಮಾಣ ಮಾಡಲು,ದಲಿತ ಮಹಿಳೆ ಕೊಟ್ಟಿದ್ದು ಆಕ್ರೋಶ ಹುಟ್ಟಿಸಿದೆ ಎಂದು ಮಗನ ಸೋಲುನಿಂದ ಸೇಡಿನ ರಾಜಕೀಯ ಮಾಡುತ್ತ ಇದ್ದಾರೆ ಎಂದು ಆರೋಪಗಳು ಕೇಳಿ ಬರುತ್ತಿವೆ. ಇದು ಎರಡನೇ ಬಾರಿ ಎಂದು,ಬುಡಾ ಲೇಔಟ್‍ಗೆ ದಾರಿ ಇಲ್ಲವೆಂದು, ಅಡ್ಡ ಹಾಕಿದ್ದರು ಎಂದು ನಂದೀಶ್ ತಿಳಿಸಿದ್ದಾರೆ. ಮುಲ್ಲಂಗಿ ರವಿ ಅವರು ಮಾತನಾಡಿ ನಾವು ರೆಡ್ಡಿ ಅವರ ರೀತಿಯಲ್ಲಿ ಮಾಡಬೇಕು ಅಂದರೆ ನೂರಾರು ಇದ್ದಾವೆ,ಅಂತಹ ಲೆಫ್ಟ್ ಕೆಲಸವನ್ನು ನಾವು ಮಾಡೊದು ಇಲ್ಲ ಎಂದರು. ಅಧಿಕಾರಿಗಳು ಡಾಕ್ಯುಮೆಂಟ್ಸ್ ಎಲ್ಲವು ಸರಿಯಾಗಿ ಇದ್ದಾವೆ ಎಂದು ಹೇಳಿದ್ದರು. ಆದರೆ ತದನಂತರ ಸರಿಯಾಗಿ ಇಲ್ಲವೆಂದು ಹೇಳುತ್ತಾರೆ ಅಧಿಕಾರಿಗಳು. ಕಳಪೆ ದಾಖಲೆ ಕೊಟ್ಟಿದ್ದರೆ ಅಧಿಕಾರಿಗಳಿಗೆ ಏನು ಶಿಕ್ಷೆ ಅನ್ನುವುದು ಸಾರ್ವಜನಿಕರ ಪ್ರಶ್ನೆ ಆಗಿದೆ??. 

ನ್ಯಾಯಾಲಯದಲ್ಲಿ ಹೋರಾಟ ಮಾಡೋಣ ಪಾಲಿಕೆ ಮೇಲೆ 10 ಕೋಟಿಗೆ ನಷ್ಟ ಪರಿಹಾರ ಹಾಕಬಹುದು ನೋಡೋಣ ಎಂದರು. ಲೇಔಟ್‍ವನ್ನು ನಾಶ ಮಾಡುವ ಸಂದರ್ಭದಲ್ಲಿ ಮುಲ್ಲಂಗಿ ಅವರು ಹೊರ ರಾಜ್ಯದಲ್ಲಿ ಇದ್ದರು ಅನ್ನುವುದು ತಿಳಿದು ಬಂದಿತ್ತು,ದೂರವಾಣಿ ಮೂಲಕ ಮಾತನಾಡಿದರು. ಮುಲ್ಲಂಗಿ ಗಿ/S ಗಾಲಿ ಸೋಮಶೇಖರ ರೆಡ್ಡಿ ಕಾಳಗ ಆರಂಭವಾಗಿದೆ. ಮುಂದೆ ಏನು ಆಗುತ್ತದೆÉಂದು ಕಾದು ನೋಡಬೇಕಾಗಿದೆ.



 

Post a Comment

0 Comments

Ad Code

Responsive Advertisement