Ticker

6/recent/ticker-posts

Ad Code

Responsive Advertisement

BREAKING NEWS : ವಿವಿಧ ಗ್ರಾಮ ಪಂಚಾಯಿತಿಗಳ ಉಪಚುನಾವಣೆ ಹಾಗೂ ಸಾರ್ವತ್ರಿಕ ಚುನಾವಣೆ ವೇಳಾಪಟ್ಟಿ ಪ್ರಕಟ

ಬೆಂಗಳೂರು ನಗರ ಜಿಲ್ಲೆ: ಮೇ.05  (ಕರ್ನಾಟಕ ವಾರ್ತೆ) : ಬೆಂಗಳೂರು ನಗರ ಜಿಲ್ಲೆಯ,  ಬೆಂಗಳೂರು ಉತ್ತರ ತಾಲ್ಲೂಕಿನ 16-ಕಾಚೋಹಳ್ಳಿ, ಯಲಹಂಕ ತಾಲ್ಲೂಕಿನ 17-ಅರಕೆರ, ಬೆಂಗಳೂರು ದಕ್ಷಿಣ ತಾಲ್ಲೂಕಿನ 4- ಚುಂಚನಕುಪ್ಪೆ, ಆನೇಕಲ್ ತಾಲ್ಲೂಕಿನ 5-ಬ್ಯಾಗಡದೇನಹಳ್ಳಿ ಮತ್ತು 14- ಬನ್ನೇರುಘಟ್ಟ ಗ್ರಾಮ ಪಂಚಾಯಿತಿಗಳಲ್ಲಿ  ವಿವಿಧ ಕಾರಣಗಳಿಂದ  ತೆರವಾಗಿರುವ  ಖಾಲಿ ಸ್ಥಾನಗಳಿಗೆ ಉಪಚುನಾವಣೆಯನ್ನು ನಡೆಸಿ ಸದಸ್ಯರುಗಳ ಸ್ಥಾನಗಳನ್ನು ತುಂಬಲು ಹಾಗೂ ಬೆಂಗಳೂರು ದಕ್ಷಿಣ ತಾಲ್ಲೂಕಿನ ಕಗ್ಗಲೀಪುರ ಗ್ರಾಮ ಪಂಚಾಯಿತಿಗೆ ಸಾರ್ವತ್ರಿಕ ಚುನಾವಣೆ ನಡೆಸಲು  ಚುನಾವಣಾಧಿಕಾರಿ ಹಾಗೂ ಬೆಂಗಳೂರು ನಗರ ಜಿಲ್ಲಾಧಿಕಾರಿ ಜೆ. ಮಂಜುನಾಥ್ ರವರು ಅಧಿಸೂಚನೆಯನ್ನು ಹೊರಡಿಸಿದ್ದಾರೆ. 

ಜಿಲ್ಲಾಧಿಕಾರಿಗಳು ಚುನಾವಣಾ ಅಧಿಸೂಚನೆಯನ್ನು ದಿನಾಂಕ 05-05-2022 ರಂದು ಹೊರಡಿಸಿದ್ದು, ನಾಮಪತ್ರಗಳನ್ನು  ಸಲ್ಲಿಸಲು 10-05-2022 (ಮಂಗಳವಾರ) ಕೊನೆಯ  ದಿನವಾಗಿರುತ್ತದೆ, ದಿನಾಂಕ 11-05-2022 (ಬುಧವಾರ) ನಾಮಪತ್ರಗಳನ್ನು ಪರಿಶೀಲಿಸಲಾಗುವುದು. ಉಮೇದುವಾರಿಕೆಯನ್ನು ಹಿಂತೆಗೆದುಕೊಳ್ಳಲು 13-05-2022 (ಶುಕ್ರವಾರ) ಕೊನೆಯ ದಿನವಾಗಿರುತ್ತದೆ. ಮತದಾನ ಅವಶ್ಯವಿದ್ದರೆ, 20-05-2022 (ಶುಕ್ರವಾರ) ಮತದಾನವನ್ನು ಬೆಳಿಗ್ಗೆ  7:00 ಗಂಟೆಯಿಂದ ಸಂಜೆ 5:00 ಗಂಟೆಯವರಗೆ ನಡೆಸಲಾಗುವುದು. ಮರು ಮತದಾನ ಅವಶ್ಯ ಇದ್ದಲ್ಲಿ ಮತದಾನವನ್ನು 21-05-2022 (ಶನಿವಾರ) ಬೆಳಿಗ್ಗೆ  7:00 ಗಂಟೆಯಿಂದ ಸಂಜೆ 5:00 ಗಂಟೆಯವರಗೆ  ನಡೆಸಲಾಗುವುದು.  ಮತಗಳ ಏಣಿಕೆ ಕಾರ್ಯವು ದಿನಾಂಕ 22-05-2022 (ಭಾನುವಾರ) ನಡೆಸಲಾಗುವುದು ಎಂದು  ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Post a Comment

0 Comments

Ad Code

Responsive Advertisement