ಬೆ0ಗಳೂರಿನ ಗಾಂಧೀ ಭವನದಲ್ಲಿ ನಡೆಯುತ್ತಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸಂಯುಕ್ತ ಕಿಸಾನ್ ಮಂಚ್ (ಎಸ್‌ಕೆಎಮ್), ರಾಷ್ಟಿçಯ ರೈತ ಹೋರಾಟ ವೇದಿಕೆಯ ಒಂದು ಭಾಗವಾಗಿದ್ದ ರೈತ ಮುಖಂಡರಾದ ರಾಕೇಶ್ ಟಿಕಾಯತ್, ಯುದ್ಧವೀರ್ ಸಿಂಗ್ ಹಾಗೂ ಇನ್ನಿತರ ರೈತ ಮುಖಂಡರ ಮೇಲೆ ‘ಮೋದಿ, ಮೋದಿ’ ಎಂದು ಘೋಷಣೆ ಕೂಗುತ್ತಾ, ಬಿಜೆಪಿಯವರು ಎನ್ನಲಾದಪಡೆಯೊಂದು ದಾಳಿ ನಡೆಸಿ, ಮುಖಕ್ಕೆ ಮಸಿ ಬಳಿದಿರುವ ಹೀನ ಕೃತ್ಯವನ್ನು ಅಖಿಲ ಭಾರತ ರೈತ ಕೃಷಿ ಕಾರ್ಮಿಕರ ಸಂಘಟನೆಯು (ಎಐಕೆಕೆಎಂಎಸ್), ಕರ್ನಾಟಕ ರಾಜ್ಯ ಸಮಿತಿಯು ಉಗ್ರವಾಗಿ ಖಂಡಿಸುತ್ತದೆ.
ಇದು ಕೇವಲ ಕೆಲವು ವ್ಯಕ್ತಿಗಳ ಮೇಲೆ ನಡೆದ ದಾಳಿಯಲ್ಲ, ಬದಲಿಗೆ ಭಾರತದ ಪ್ರಜಾತಂತ್ರದ ಆಶಯಗಳ ಮೇಲೆ ನಡೆದ ಉಗ್ರ ದಾಳಿ; ಇದು ಕೇವಲ ರೈತ ಮುಖಂಡರ ಮೇಲೆ ನಡೆದ ದಾಳಿಯಲ್ಲ, ಬದಲಿಗೆ, ನೊಂದ, ದಮನಿತ ರೈತ ಸಮುದಾಯದ ಹೋರಾಟದ ಧ್ವನಿಯ ಮೇಲೆ ನಡೆದ ಘೋರ ದಾಳಿ; ಜನರು ಪ್ರಭುತ್ವಕ್ಕೆ ದಾಸರಾಗದೆ, ಜನಪರವಾದ, ಪ್ರಭುತ್ವಕ್ಕೆ ವಿರುದ್ಧವಾದ ಚಿಂತನೆ, ಧೋರಣೆ ಹೊಂದಿರುವ ಸ್ವತಂತ್ರ ಚಿಂತನೆಯ ಮೇಲೆ ನಡೆದ ಫ್ಯಾಸಿಸ್ಟ್ ದಾಳಿ. ಪ್ರತಿಭಟನೆಯ ಹಕ್ಕಿನ ಮೇಲೆ ನಡೆದ ದಾಳಿ.
ಒಂದೆಡೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಬಂಡವಾಳಶಾಹಿ ಪರ ನೀತಿಗಳಿಂದಾಗಿ, ದೇಶದ ದುಡಿಯುವ ಜನತೆ, ದಮನಿತ ಜನರು, ಸಣ್ಣ-ಬಡ ರೈತರು ಜೀವನ ನಡೆಸುವುದೇ ದುಸ್ತವಾಗಿದೆ. ಬೆಲೆ ಏರಿಕೆ, ಬಡತನ, ನಿರುದ್ಯೋಗ, ಹಸಿವು ಜನರಿಗೆ ಜೀವನವನ್ನು ನರಕವನ್ನಾಗಿ ಮಾಡಿದೆ. ಇದರ ವಿರುದ್ಧ ನೊಂದ ಜನರು ಭುಗಿಲೇಳುತ್ತಿರುವ ಸಂದರ್ಭದಲ್ಲಿ, ಜನರಲ್ಲಿ ಭಯದ ವಾತಾವರಣವನ್ನು ಸೃಷ್ಟಿಸುವಂತಹ ಫ್ಯಾಸಿಸ್ಟ್ ದಾಳಿಗೆ ಇಳಿದಿರುವುದರ ವಿರುದ್ಧ ಜನತೆ ಜಾತಿ, ಮತ, ಧರ್ಮಗಳ ಬೇಲಿಗಳನ್ನು ಮೀರಿ, ದಮನಿತರೆಲ್ಲಾ ಒಂದಾಗಿ ಪ್ರಬಲ ಜನ ಹೋರಾಟವನ್ನು ಬೆಳೆಸಬೇಕು. ಇಡೀ ಘಟನೆಯ ಬಗ್ಗೆ ಸಮಗ್ರ ನಿಷ್ಪಕ್ಷಪಾತ ತನಿಖೆ ನಡೆಸಿ, ತಪ್ಪಿತಸ್ಥರಿಗೆ ಉಗ್ರ ಶಿಕ್ಷೆ ನೀಡಬೇಕೆಂದು ಅಖಿಲ ಭಾರತ ರೈತ ಕೃಷಿ ಕಾರ್ಮಿಕರ ಸಂಘಟನೆಯು (ಎಐಕೆಕೆಎಂಎಸ್) ಕರೆ ನೀಡುತ್ತದೆ.

0 Comments