Ticker

6/recent/ticker-posts

Ad Code

Responsive Advertisement

ನಾಡಪ್ರಭು ಕೆಂಪೇಗೌಡ ಸ್ಮರಣೆಯಲ್ಲಿ ಹೈಟೆಕ್ ಬಸ್ ನಿಲ್ದಾಣದ ಪ್ರಗತಿ ಪರಿಶೀಲನೆ-ವಸತಿ ಸಚಿವ ವಿ.ಸೋಮಣ್ಣ

ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರ:ಮೂಡಲಪಾಳ್ಯ ವಾರ್ಡ್ ನಲ್ಲಿ ನಾಡಪ್ರಭು ಕೆಂಪೇಗೌಡರ ಸ್ಮರಣೆಯಲ್ಲಿ ಹೈಟೆಕ್ ಬಸ್ ನಿಲ್ದಾಣದ ಪ್ರಗತಿ ಪರಿಶೀಲನೆ ವಸತಿ ಸಚಿವರಾದ ವಿ.ಸೋಮಣ್ಣರವರು ಭೇಟಿ ನೀಡಿ ಕಟ್ಟಡದ ಕಾಮಗಾರಿಗಳ ಪ್ರಗತಿ ಪರಿಶೀಲನೆ ಮಾಡಿದರು.


ಗೋವಿಂದರಾಜನಗರ ಮಂಡಲ ಬಿ.ಜೆ.ಪಿ.ಅಧ್ಯಕ್ಷರಾದ ವಿಶ್ವನಾಥಗೌಡ,ಮಾಜಿ ಪಾಲಿಕೆ ಸದಸ್ಯರಾದ ದಾಸೇಗೌಡ,ಚನ್ನಪ್ಪರವರು, ಬಿ.ಬಿ.ಎಂ.ಪಿ.ಮತ್ತು ಬೆಸ್ಕಾಂ ,ಸಾರಿಗೆ ಇಲಾಖೆ ಅಧಿಕಾರಿಗಳು ಪಾಲ್ಗೊಂಡಿದ್ದರು.

ಇದೇ ಸಂದರ್ಭದಲ್ಲಿ ವಸತಿ ಸಚಿವರಾದ ವಿ.ಸೋಮಣ್ಣರವರು ಮಾತನಾಡಿ ಮೂಡಲಪಾಳ್ಯ ವಾರ್ಡ್ ಬಸ್ ನಿಲ್ದಾಣ ಇರುವ ಜಾಗ ಭೂಕಬಳಿಕೆದಾರರ ವಶದಲ್ಲಿ ಇತ್ತು ಪೂಜ್ಯರಾದ ಶ್ರೀ ಶ್ರೀ ಶ್ರೀ  ಬಾಲಗಂಗಾಧರನಾಥ ಸ್ವಾಮೀಜಿರವರ ಆಶೀರ್ವಾದ,ಸಹಕಾರದಿಂದ ಭೂಕಬಳಿಕೆದಾರರ ವಿರುದ್ದ ಹೋರಾಟ ಮಾಡಿ ನೂರಾರು ಕೋಟಿ ರೂಪಾಯಿ ವೆಚ್ಚದ ಭೂಮಿಯನ್ನ ಸಾರ್ವಜನಿಕರ ಉಪಯೋಗಕ್ಕೆ ಬಸ್ ನಿಲ್ದಾಣ,ಬಿ.ಬಿ.ಎಂ.ಪಿ.ಕಛೇರಿ ಮತ್ತು ಆರೋಗ್ಯ ಕೇಂದ್ರ ,ಬೆಸ್ಕಾಂ ಕಛೇರಿಗಳು ಪ್ರಾರಂಭವಾಗಲಿದ್ದು .ಸ್ಥಳೀಯ ಸುತ್ತಮುತ್ತಲ ಜನರು ಸಾರಿಗೆ ವ್ಯವಸ್ಥೆ ಜೊತೆಯಲ್ಲಿ ವಿವಿಧ ಸೌಲಭ್ಯಗಳು ಲಭಿಸಲಿದೆ .

ಮಾನ್ಯ ಮುಖ್ಯಮಂತ್ರಿಗಳಾದ ಬಸವರಾಜ್ ಬೊಮ್ಮಾಯಿರವರ ಅಮೃತಹಸ್ತದಿಂದ ಅತಿಶೀಘ್ರದಲ್ಲಿ ಲೋಕರ್ಪಣೆಯಾದಲಿದೆ ಎಂದು ಹೇಳಿದರು.

Post a Comment

0 Comments

Ad Code

Responsive Advertisement