Ticker

6/recent/ticker-posts

Ad Code

Responsive Advertisement

ಬಸವಣ್ಣ ಐಕ್ಯ ಸ್ಥಳ ಕೂಡಲಸಂಗಮಕ್ಕೆ ರಾಜ್ಯಪಾಲರ ಭೇಟಿ

ಬೆಂಗಳೂರು, ಮೇ 25,  (ಕರ್ನಾಟಕ ವಾರ್ತೆ) : ಧಾರ್ಮಿಕ ಕ್ಷೇತ್ರ ಹಾಗೂ ಅಣ್ಣ ಬಸವಣ್ಣನರ ಐಕ್ಯ ಸ್ಥಳವಾಗಿರುವ ಕೂಡಲಸಂಗಮಕ್ಕೆ ಕರ್ನಾಟಕದ ಗೌರವಾನ್ವಿತ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಅವರು ಭೇಟಿ ‌ನೀಡಿ, ಸಂಗಮನಾಥನ ದರ್ಶನ ಪಡೆದುಕೊಂಡರು.ತ್ರಿವೇಣಿ ಸಂಗಮ ಕೂಡಲಸಂಗಮಕ್ಕೆ ರಾಜ್ಯಪಾಲರಾದ ಥಾವರಚಂದ್ ಗೆಹ್ಲೋಟ್ ಅವರು ಇದೇ ಪ್ರಥಮ ಭಾರಿಗೆ ಭೇಟಿ ನೀಡಿ, ದೇವಾಲಯ ಬಗ್ಗೆ ಮಾಹಿತಿ ಪಡೆದುಕೊಂಡರು.

 ಐಕ್ಯಮಂಟಪದ ದಶ೯ನ ಪಡೆದ ರಾಜ್ಯಪಾಲರು, ಬಸವಣ್ಣ ನವರ ಹಾಗೂ ಧಾರ್ಮಿಕ ಕೇಂದ್ರ ಬಗ್ಗೆ ಮಾಹಿತಿ ಪಡೆದುಕೊಂಡರು. ಬಳಿಕ ಬಸವಣ್ಣನವರ ಐಕ್ಯಮಂಟಪದ ದಶ೯ನ ಪಡೆದುಕೊಂಡು, ಬಸವಣ್ಣನವರ ಐಕ್ಯ ಸ್ಥಳವನ್ನು  ನೀರಿನಲ್ಲಿ ಕಟ್ಟಿರುವ ಬಗ್ಗೆ ಮಾಹಿತಿ ಪಡೆದುಕೊಂಡು,ಆಶ್ಚರ್ಯ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಬಸವ ಧರ್ಮ ಪೀಠದ ಮಾದೇಶ್ವರ ಸ್ವಾಮೀಜಿ ಅವರು ಉಪಸ್ಥಿತರಿದ್ದರು. 


Post a Comment

0 Comments

Ad Code

Responsive Advertisement