Ticker

6/recent/ticker-posts

Ad Code

Responsive Advertisement

ಮನುಷ್ಯ ಪರೋಪಕಾರಿ ಮನೋಭಾವ ಬೆಳೆಸಿಕೊಳ್ಳುವ ಮೂಲಕ ತನ್ನ ಜೀವನ ಸಾರ್ಥಕಗೊಳಿಸಿಕೊಳ್ಳಬೇಕು : ಶ್ರೀ ಶ್ರೀ ವಿಧುಶೇಖರ ಭಾರತೀ ಸನ್ನಿಧಾನಂಗಳವರು

ಬೆಂಗಳೂರು :  ಸರಕಾರಿ ಹಾಗೂ ಅನುದಾನಿತ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ಸಹಸ್ರಾರು ಸಂಖ್ಯೆಯ  ಶಾಲಾ ಮಕ್ಕಳಿಗೆ ದಾನಿಗಳ ಸಹಯೋಗದೊಂದಿಗೆ ಕಳೆದ 20 ವರ್ಷಗಳಿಂದ ಇದುವರೆವಿಗೂ ಸುಮಾರು 46 ಕೋಟಿಗೂ ಹೆಚ್ಚಿನ  ಊಟವನ್ನು ಒದಗಿಸಿರುವ, ಸಾರ್ಥಕ   ನಿತ್ಯ ಅನ್ನದಾಸೋಹ ಕಾಯಕದಲ್ಲಿ ನಿರತವಾಗಿರುವ  ನಗರದ 



ಗವಿಪುರಂ ಗುಟ್ಟಳ್ಳಿಯಲ್ಲಿರುವ ಶ್ರೀಮತಿ ಗಿರಿಜಾ ಶಾಸ್ತ್ರಿ ಮೆಮೊರಿಯಲ್ ಟ್ರಸ್ಟ್ ನ ಅದಮ್ಯ ಚೇತನ ಸಂಸ್ಥೆಯ ಶೂನ್ಯ ತ್ಯಾಜ್ಯ ಅಡುಗೆ ಮನೆಗೆ ಇತ್ತೀಚೆಗೆ ಭೇಟಿ ನೀಡಿದ್ದ ಶ್ರೀ ಶೃಂಗೇರಿ ಶಾರದಾಪೀಠಾಧೀಶ್ವರ ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ಭಾರತೀ ತೀರ್ಥ ಮಹಾಸನ್ನಿಧಾನಂಗಳವರ ಪರಮಾನುಗ್ರಹದಿಂದ, ತತ್ಕರಕಮಲಸಂಜಾತರಾದ ಶ್ರೀಮಜ್ಜಗದ್ಗುರು ಶ್ರೀ ಶ್ರೀ  ವಿಧುಶೇಖರ ಭಾರತೀ ಸನ್ನಿಧಾನಂಗಳವರು ಆಶೀರ್ವಚನ ನೀಡುತ್ತಾ 'ಮನುಷ್ಯ ತನ್ನ ಬುದ್ದಿಯನ್ನು ಉಪಯೋಗಿಸಿಕೊಂಡು, ಪರೋಪಕಾರಿ ಮನೋಭಾವದಿಂದ ಉಪಕಾರದ ಕೆಲಸಗಳನ್ನು ಹೆಚ್ಚು ಹೆಚ್ಚು ಮಾಡಬೇಕು... ಈ ಮೂಲಕ ಮನುಷ್ಯ ತನ್ನ ಜೀವನವನ್ನು ಸಾರ್ಥಕಗೊಳಿಸಿಕೊಳ್ಳಬೇಕು' ಎಂದು  ಕರೆ ನೀಡಿದರು. ಭಗವಂತನಿಂದ ಸೃಷ್ಟಿಯಾಗಿರುವ ಪರಿಸರ, ಭೂಮಿ ಮತ್ತು ನೈಸರ್ಗಿಕ ವಾತಾವರಣವನ್ನು ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಹೆಚ್ಚಿನ ಆದ್ಯತೆಯನ್ನು ನೀಡಬೇಕು. ಭಗವಂತ ಕಲ್ಪಿಸಿರುವ ವ್ಯವಸ್ಥೆಯನ್ನು ಸದುಪಯೋಗಪಡಿಸಿಕೊಂಡು ಪರರಿಗೆ ಉಪಕಾರ ಮಾಡುವ ಕಾರ್ಯಗಳನ್ನು ಕೈಗೊಳ್ಳಬೇಕು. ಇದು ಮನುಷ್ಯರನ್ನು ಪ್ರಾಣಿಗಳಿಂದ ಪ್ರತ್ಯೇಕಿಸುವ ವಿಶೇಷ ಗುಣ. ಮನುಷ್ಯ ವ್ಯವಸ್ಥೆಯನ್ನು ಹಾಳು ಮಾಡದೇ ತನ್ನ ಪರಿಧಿಯಲ್ಲಿ ಪರೋಪಕಾರಕ್ಕೆ ಮುಂದಾದರೆ ಬಹಳಷ್ಟು ಸಾಧಿಸುವುದು ಸಾಧ್ಯ ಎಂದು ಹೇಳಿದರು. 

ಅದಮ್ಯ ಚೇತನ ಸಂಸ್ಥೆಯ ಡಾ. ತೇಜಸ್ವಿನಿ ಅನಂತಕುಮಾರ್‌ ಅವರ ನೇತೃತ್ವದಲ್ಲಿ ಪರಿಸರ ಸಂರಕ್ಷಣೆ, ಹಸಿದವರಿಗೆ ಅನ್ನ ನೀಡುಂತಹ ಪರೋಪಕಾರಿ ಕಾರ್ಯಗಳಲ್ಲಿ ತೊಡಗಿಕೊಂಡಿದೆ. ಇಂತಹ ಸದಾಶಯದ ಕಾರ್ಯಗಳ ಹಲವಾರು ಬವಣೆಗಳಿಂದ ಬಳಲುತ್ತಿರುವ ಸಾವಿರಾರು ಜನರಿಗೆ ಅನುಕೂಲ ಮಾಡಿಕೊಡುತ್ತವೆ. ಭವಿಷ್ಯದಲ್ಲಿ ಇನ್ನೂ ಹೆಚ್ಚಿನ ಲೋಕೋಪಕಾರಿ ಕಾರ್ಯಗಳಲ್ಲಿ ತೊಡಗಿಕೊಳ್ಳಲಿ ಎಂದು  ಆಶೀರ್ವದಿಸಿದರು. 

ಈ ಸಂಧರ್ಭದಲ್ಲಿ ಅದಮ್ಯ ಚೇತನ ಸಂಸ್ಥೆಯ ಮುಖ್ಯಸ್ಥೆ ಡಾ. ತೇಜಸ್ವಿನಿ ಅನಂತಕುಮಾರ್‌, ಶಿಕ್ಷಣ ಸಚಿವ ಬಿ.ಸಿ. ನಾಗೇಶ್,  ಶಾಸಕ ರವಿ ಸುಬ್ರಹ್ಮಣ್ಯ, ಸಂಸ್ಥೆಯ  ಟ್ರಸ್ಟಿಗಳಾದ ಹೆಚ್‌. ಎನ್‌. ನಂದಕುಮಾರ್‌, ಪ್ರದೀಪ್‌ ಓಕ್‌, ಹೆಚ್‌.ಎನ್‌.ಎ. ಪ್ರಸಾದ್‌, ಡಾ. ಸುಧಾಕರ್‌ ಪಾಟೀಲ್‌, ನಿವೃತ್ತ ನ್ಯಾಯಮೂರ್ತಿ ಎನ್‌. ಕುಮಾರ್‌, ಬೆಂಗಳೂರು ದಕ್ಷಿಣ ವಲಯ ಡಿಡಿಪಿಐ ಪಿ.ಬೈಲಾಂಜಿನಪ್ಪ, ಬೆಂಗಳೂರು ಉತ್ತರ ವಲಯ ಡಿಡಿಪಿಐ ನಾರಾಯಣ್,  ಬಿಇಒ ರವರುಗಳಾದ  ಕೆ. ಪ್ರಕಾಶ್ (ದಕ್ಷಿಣ ವಲಯ 1), ಮುತ್ತಯ್ಯ (ದಕ್ಷಿಣ ವಲಯ 2), ಪಂಕಜ್ (ದಕ್ಷಿಣ ವಲಯ 3), ನರಸಿಂಹರಾಜು (ಆನೇಕಲ್ ದಕ್ಷಿಣ ವಲಯ 5), ರಮೇಶ್   (ಉತ್ತರ  ವಲಯ 1), ಶ್ರೀಮತಿ ಉಮಾದೇವಿ (ಉತ್ತರ  ವಲಯ 2), ಜಯಪ್ರಕಾಶ್ (ಉತ್ತರ  ವಲಯ 3), ಅಶ್ವಥನಾರಾಯಣ (ಉತ್ತರ  ವಲಯ 4)

ಮುಂತಾದ ಗಣ್ಯರೊಂದಿಗೆ ಹೆಚ್ಚಿನ ಸಂಖ್ಯೆಯಲ್ಲಿ  ಸ್ವಯಂ ಸೇವಕರು ಹಾಗೂ ಸಾರ್ವಜನಿಕರು ಈ ವೇಳೆ ಉಪಸ್ಥಿತರಿದ್ದರು.

Post a Comment

0 Comments

Ad Code

Responsive Advertisement