ಬಾಗಲಕೋಟೆ: ಮೇ 25 (ಕರ್ನಾಟಕ ವಾರ್ತೆ): ತೋಟಗಾರಿಕೆ ಅಧ್ಯಯನ ಮಾಡಿದ ವಿದ್ಯಾರ್ಥಿಗಳು ಕೃಷಿಗೆ ಹೆಚ್ಚಿನ ಆದ್ಯತೆ ನೀಡುವುದರ ಜೊತೆಗೆ ದೇಶದ ಕೃಷಿಯನ್ನು ಪ್ರಗತಿಯತ್ತ ಸಾಗಿಸಬೇಕೆಂದು ಕರ್ನಾಟಕದ ಗೌರವಾನ್ವಿತ ರಾಜ್ಯಪಾಲರಾದ ಶ್ರೀ ಥಾವರ್ ಚಂದ್ ಗೆಹ್ಲೋಟ್ ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ನಗರದ ತೋಟಗಾರಿಕೆ ವಿಶ್ವವಿದ್ಯಾಲಯದ ಆವರಣದಲ್ಲಿ ಬುಧವಾರ ನಡೆದ ತೋವಿವಿಯ 11ನೇ ಘಟಿಕೋತ್ಸವದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಅವರು ನಮ್ಮ ಭಾರತೀಯ ಹವಾಮಾನವು ಇತರೇ ದೇಶಗಳಿಗೆ ಹೋಲಿಸಿದಾಗ ನಮ್ಮ ಹವಾಮಾನವು ಅತ್ಯುತ್ತಮವಾಗಿದ್ದು, ಮಳೆಗಾಲ, ಚಳಿಗಾಲ ಮತ್ತು ಬೇಸಿಗೆ ಕಾಲದ ಋತುಮಾನಸಾರವಾಗಿ ವಿಭಿನ್ನ ಬೆಳೆಗಳನ್ನು ಬೆಳೆಯಲು ಅನೂಕೂಲವಾಗಿದೆ. ಇಂದಿಗೂ ಕೂಡಾ ನಮ್ಮ ದೇಶವು ಕೃಷಿ ಪ್ರಧಾನವಾಗಿದ್ದು, ಕೃಷಿ ಪದವೀದರರು ವಿವಿಧ ಪ್ರಯೋಗ ಮತ್ತು ತಂತ್ರಜ್ಞಾನವನ್ನು ಬಳಸಿಕೊಂಡು ಕೃಷಿಯಲ್ಲಿ ಹೆಚ್ಚಿನ ಸಾಧನೆ ಮಾಡಬೇಕು. ಈಗ ಕೃಷಿ ಭೂಮಿ ಇಲ್ಲದವರು ಕೂಡಾ ಗೋಡೆ ಮತ್ತು ಟೇರಸ್ ಗಾರ್ಡನ್, ತೋಟಗಾರಿಕೆ ಮಾಡತ್ತಿದ್ದು, ಈ ರೀತಿಯಾದಂತಂಹ ಆಧುನಿಕ ಕೃಷಿ ಪದ್ಧತಿ ಹೊರಹೊಮ್ಮ ಬೇಕಾಗಿದೆ ಎಂದು ಅಭಿಪ್ರಾಯಪಟ್ಟರು.
ಘಟಿಕೋತ್ಸವದಲ್ಲಿ ಹಿರಿಯೂರಿನ ಹೆಚ್.ಏಕಾಂತಯ್ಯನವರಿಗೆ ಗೌರವ ಡಾಕ್ಟರೇಟ್ ಹಾಗೂ ವಿವಿಧ ವಿಭಾಗಗಳ ವಿದ್ಯಾರ್ಥಿಗಳಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ತೋವಿವಿಯಿಂದ 25 ಹಾಗೂ ದಾನಿಗಳು ಕೊಡ ಮಾಡುವ 52 ಒಟ್ಟು 77 ಚಿನ್ನದ ಪದಕಗಳನ್ನು ಈ ಘಟಿಕೋತ್ಸವದಲ್ಲಿ ನೀಡಲಾಯಿತು.
ರಾಜೇಂದ್ರ ಸಿಂಗ್ ಅವರು ಮುಖ್ಯಅತಿಥಿಗಳ ಭಾಷಣ ಮಾಡಿದರು. ಈ ಸಂದರ್ಭದಲ್ಲಿ ತೋಟಗಾರಿಕೆ ಸಚಿವರಾದ ಮುನಿರತ್ನ, ತೋವಿವಿಯ ವ್ಯವಸ್ಥಾಪಮ ಮಂಡಳಿಯ ಸದಸ್ಯರು, ತೋವಿವಿಯ ಕುಲಪತಿ ಡಾ.ಕೆ.ಎಂ.ಇಂದಿರೇಶ, ಜಿಲ್ಲಾಧಿಕಾರಿ ಪಿ.ಸುನೀಲ್ ಕುಮಾರ, ಜಿಲ್ಲಾ ಪೋಲಿಸ ವರಿಷ್ಠಾಧಿಕಾರಿ ಲೋಕೇಶ ಜಗಲಾಸರ ಹಾಗೂ ತೋವಿವಿಯ ಬೋಧಕ, ಬೋದೆಕೇತರ ಸಿಬ್ಭಂದಿ ಇನ್ನಿತರು ಉಪಸ್ಥಿತರಿದ್ದರು.
Hon'ble Governor of Karnataka Shri Thaawarchandh Gehlot attended 11th convocation of the university of Horticultural Sciences, Bagalkot today. Minister Shri N Munirathna, VC Dr. K M Indiresh & other dignitaries were present.

.jpeg)
.jpeg)
.jpeg)
.jpeg)

.jpeg)

.jpeg)
0 Comments