ಬೆಂಗಳೂರು : ಸನಾತನ ಸಂಸ್ಥೆಯ ಸಂಸ್ಥಾಪಕರಾಗಿರುವ ಪರಾತ್ಪರ ಗುರು ಡಾಕ್ಟರ್ ಜಯಂತ ಆಠವಲೆಯವರ ಜನ್ಮೋತ್ಸವದ ನಿಮಿತ್ತ, ದೇಶದಲ್ಲೆಡೆ ‘ಹಿಂದೂ ರಾಷ್ಟ್ರ ಜಾಗೃತಿ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ. ದೇವಸ್ಥಾನಗಳು ಹಿಂದೂಗಳ ಶ್ರದ್ಧಾಸ್ಥಾನವಾಗಿದೆ. ಇದಕ್ಕಾಗಿ ದೇವಸ್ಥಾನಗಳ ಪಾವಿತ್ರ್ಯ ರಕ್ಷಣೆಯ ಉದ್ದೇಶದಿಂದ, ಹಿಂದೂ ರಾಷ್ಟ್ರ ಜಾಗೃತಿ ಅಭಿಯಾನದ ಅಂತರ್ಗತ ಸನಾತನ ಸಂಸ್ಥೆಯ ವತಿಯಿಂದ ಬೆಂಗಳೂರು, ರಾಜಾಜಿನಗರದ ಶ್ರೀ ಸಿದ್ಧಿ ವಿನಾಯಕ ದೇವಸ್ಥಾನ, ಸಂಜೀವಿನಿ ನಗರ, ಸಂಕಷ್ಟಹರ ಗಣಪತಿ ದೇವಸ್ಥಾನ, ಯಲಹಂಕದ ಶಿವ ಮಂದಿರ, ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನ, ವೆಂಕಟೇಶ್ವರ ದೇವಸ್ಥಾನ, ಶ್ರೀ ಸಾಯಿಬಾಬಾ ದೇವಸ್ಥಾನ, ಸೇರಿದಂತೆ ೧೫ ಕ್ಕೂ ಅಧಿಕ ವಿವಿಧ ದೇವಸ್ಥಾನಗಳಲ್ಲಿ ಸ್ವಚ್ಛತಾ ಅಭಿಯಾನ ನಡೆಸಲಾಯಿತು. ಈ ವೇಳೆಯಲ್ಲಿ ಸ್ಥಳೀಯ ಧರ್ಮಪ್ರೇಮಿಗಳು ಮತ್ತು ದೇವಾಲಯದ ಭಕ್ತವೃಂದ ಉಪಸ್ಥಿತಿ ಇತ್ತು. ಇದರ ಜೊತೆಯಲ್ಲಿ ಬೆಂಗಳೂರಿನ ರಾಜಾಜಿನಗರದ ಶ್ರೀ ಗಣಪತಿ ದೇವಸ್ಥಾನ, ಸಂಕಷ್ಟಹರ ಗಣಪತಿ ದೇವಸ್ಥಾನ ಸೇರಿದಂತೆ ವಿವಿಧ ದೇವಸ್ಥಾನಗಳಲ್ಲಿ ಆಧ್ಯಾತ್ಮಿಕ ಸಾಧನೆ ಎಂದರೇನು ? ಪ್ರಸ್ತುತ ಕಾಲದಲ್ಲಿ ಸಾಧನೆಯ ಅವಶ್ಯಕತೆ ಏನು ? ಈ ವಿಷಯದಲ್ಲಿ ಆಧ್ಯಾತ್ಮಿಕ ಪ್ರವಚನವೂ ನೆರವೇರಿತು. ೧೮೦ ಕ್ಕೂ ಹೆಚ್ಚಿನ ಜಿಜ್ಞಾಸುಗಳು ಉಪಸ್ಥಿತರಿದ್ದು ಈ ಸಾಧನಾ ಪ್ರವಚನದ ಲಾಭ ಪಡೆದುಕೊಂಡರು.




0 Comments