ಬಳ್ಳಾರಿ ಮೇ 31. ಬಳ್ಳಾರಿಯ ಗಾಂಧಿನಗರದಲ್ಲಿರುವ ಸಮರ್ಥನಂ ಅಂಗವಿಕಲರ ಸಂಸ್ಥೆ ವಿಕಲಚೇತನರಿಗಾಗಿ ಬೃಹತ್‍ಉದ್ಯೋಗ ಮೇಳವನ್ನು, ನಗರದ ಶ್ರೀ ಮೇಧಾ ಪಿ.ಯು. ಮತ್ತು ಪದವಿ ಕಾಲೇಜು ನಂ:03 ಕೋಟೆಯ ಮುಖ್ಯ ರಸ್ತೆ ಬಳ್ಳಾರಿ. ಮೋತಿ ಸರ್ಕಲ್ ಹತ್ತಿರ.ದಿನಾಂಕ 31.05.2022ರಂದು ಆಯೋಜಿಸಲಾಗಿತ್ತು.ಈಕಾರ್ಯಕ್ರವನ್ನು ಬೆಳಿಗ್ಗೆ 10ಗಂಟೆಗೆ ವೇದಿಕೆಯಮೇಲೆ ಆಸೀನರಾಗಿದ್ದ ಎಲ್ಲಾ ಆಥಿತಿಗಳಿಂದ ಸಸಿಗೆ ನೀರೆರೆಯುವುದರ ಮೂಲಕ ಉದ್ಘಾಟನೆಯನ್ನು ಮಾಡಿದರು. ಹಾಗೇಯೆಕಾರ್ಯಕ್ರಮವನ್ನು ಉದ್ದೇಶಿಸಿ ಏಲ್ಲಾ ಅಥಿತಿಗಳು ತಮ್ಮತಮ್ಮಅಭಿಪ್ರಾಯವನ್ನು ವ್ಯಕ್ತಪಡಿಸಿದರು.
ಶ್ರೀರಾಮುಲು ಅವರು ಮಾತನಾಡುತ್ತಾ ಸಮರ್ಥನಂ ಅಂಗವಿಕರ ಸಂಸ್ಥೆಗೆ ಶಾಶ್ವತವಾದ ಖಾಲಿ ನೀವೇಶನವನ್ನು ನೀಡುತ್ತೆನೆ ಎಂದು ಬರವಸೆಯನ್ನು ನೀಡಿದ್ದಾರೆ. ಮತ್ತು ಸಮರ್ಥನಂ ಅಂಗವಿಕರ ಸಂಸ್ಥೆಗೆ ಸದಾ ಬೆನ್ನೆಲುಬಾಗಿ ನನ್ನ ಸಹಕಾರವನ್ನು ನೀಡುತ್ತೆನೆ ಎಂದು ಆಶ್ವಾಸನೆ ನೀಡಿದ್ದಾರೆ. ಹಾಗೂ ಸಂಸ್ಥೆಯ ವ್ಯವಸ್ಥಾಪಕರು ಮಹಂತೇಶ್ ಜಿ ಕೀವೂಡಸಣ್ಣವರ್ ಈ ಸಂಸ್ಥೆಯನ್ನು ನಮ್ಮ ಕರ್ನಾಟಕದಲ್ಲಿ ಸ್ಥಾಪಿಸಿರುವುದು ನಮ್ಮೇಲ್ಲರ ಬಾಗ್ಯವಾಗಿದೆ. ಸಮರ್ಥನಂ ಅಂಗವಿಕಲರ ಸಂಸ್ಥೆಯು "ರಜತ ಮಹೋತ್ಸವ"ದ ನೆನಪಿಗಾಗಿ ಮತ್ತು "ಅಂತರಾಷ್ಟ್ರೀಯ ವಿಕಲಾಂಗ ವ್ಯಕ್ತಿಗಳ ದಿನ"ದ ಅಂಗವಾಗಿ ವಿಕಲಚೇತನರಿಗಾಗಿ ಬೃಹತ್ ಉದ್ಯೋಗ ಮೇಳವನ್ನು ಆಯೋಜಿಸಲು ನಿರ್ದರಿಸಿದ್ದು. ಸಮರ್ಥನಂ ಅಂಗವಿಕಲರ ಸಂಸ್ಥೆಯವತಿಯಿಂದ ಇಲ್ಲಿಯವರೆಗೆ 38 ಉದ್ಯೋಗ ಮೇಳಗಳನ್ನು ಡಿಲ್ಲಿ, ಮುಂಬ್ಯೆ, ಪೂಣೆ, ಬೆಳಾಗಾವಿ, ಧಾರವಾಡ, ಬಳ್ಳಾರಿ, ದಾವಣಗೆರೆ, ಮೈಸೂರ್, ಬೆಂಗಳೂರು, ಚೆನ್ಯೆ, ಗುಂಟೂರು, ಹ್ಯೆದರಾಬಾದ್, ವಿಜಯವಾಡ ಮತ್ತು ವಿಶಾಖಪಟ್ಟಣಂ ಇನ್ನು ಮುಂತಾದ ಪ್ರದೇಶಗಳಲ್ಲಿ ವಿಕಲಚೇತನರಿಗಾಗಿ ಉದ್ಯೋಗ ಮೇಳಗಳನ್ನು ಆಯೋಜಿಸಲಾಗಿದೆ.ಈ ಉದ್ಯೋಗ ಮೇಳಗಳಲ್ಲಿ ಸುಮಾರು 15 ಸಾವಿರಕ್ಕು ಹೆಚ್ಚು ಉದ್ಯೋಗಾರ್ಥಿಗಳು ಭಾಗವಹಿಸಿದ್ದರು, ಮತ್ತು 5000ಕ್ಕಿಂತ ಹೆಚ್ಚು ವಿಕಲಚೇತನರು ಉದ್ಯೋಗವನ್ನು ಪಡೆದುಕೋಂಡಿದ್ದಾರೆ. ತಮ್ಮ ಉಜ್ವಲ ಭವಿಷ್ಯವನ್ನು ರೊಪಿಸಿಕೊಂಡು ಸ್ವಾವಲಂಬಿ ಜೀವನವನ್ನು ನಡೆಸುತ್ತಿದ್ದಾರೆ.ಈಕಾರ್ಯಕ್ರಮದಲ್ಲಿ ನನ್ನನ್ನು ಸಹ ಬಾಗಿಮಾಡಿರುವುದು ನನಗೆ ತುಂಬಾ ಸಂತಸ ತಂದಿದೆ ಎಂದರು.
ಈ ಉದ್ಯೋಗಮೇಳಕ್ಕೆ 20ಪ್ರತಿಷ್ಟಿತIಖಿ,ಃPಔ,ಖeಣಚಿiಟ ಮತ್ತು ಮುಂತಾದ ಕಂಪನಿಗಳು ಭಾಗವಹಿಸಿದ್ದವು. ಈ ಉದ್ಯೋಗಮೇಳದಲ್ಲಿ 406ಕ್ಕು ಹೆಚ್ಚು ಜನರುಭಾಗವಹಿಸಿ ಈ ಮೇಳವನ್ನು ಸದ್ವಿನಿಯೋಗ ಮಾಡಿಕೊಂಡರು. ಈ ಉದ್ಯೋಗಮೇಳದಲ್ಲಿ347ನೋಂದಣಿ ಮಾಡಿಸಿಕೋಂಡಿದ್ದಾರೆ,139ವಿಕಲಚೇತನ ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ. ಹಾಗೆಯೇ109ಅಭ್ಯರ್ಥಿಗಳನ್ನು ಶಾರ್ಟ ಲೀಸ್ಟ್‍ನಲ್ಲಿಇಟ್ಟಿದ್ದಾರೆ.
ಅಯ್ಕೆಯಾದ ಮತ್ತು ಭಾಗವಹಿಸಿದ ಎಲ್ಲಾ ಅಭ್ಯರ್ಥಿಗಳು "ಸಮರ್ಥನಂ ಅಂಗವಿಕಲರ ಸಂಸ್ಥೆಯು ನಮಗಾಗಿ ಇಂತಹ ಬೃಹತ್ ಉದ್ಯೋಗಮೇಳವನ್ನು ಆಯೋಜಿಸಿರಿವುದು ಸಂತಸದ ವಿಷಯ. ನಮ್ಮ ಬಾಳಿಗೆ ಉದ್ಯೊಗಾವಕಾಶವನ್ನು ಒದಗಿಸುವುದರ ಮೂಲಕ ದಾರಿದೀಪವಾಗಿದೆ. ಇಂತಹ ಸಂಸ್ಥೆಯು ನಮ್ಮದೇಶದಲ್ಲಿರುವುದು ಹೆಮ್ಮೇಯ ಸಂಗತಿಯಾಗಿದೆ. ಎಂದು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.
ಮಹಂತೇಶ್ ಜಿ ಕಿವುಡಸಣ್ಣನವರ್,ರಾಮ್ ಕಿರಣ್,ಶ್ರೀಮತಿ. ರೂಪಶ್ರೀ ದೀಪಕ್,ಪೊಲಾ ರಾಧ ಕೃಷ್ಣ ,ಅರ್. ಗೊಪಾಲಕೃಷ್ಣ,ಡಾ. ಮಿತೇಶ್‍ಕಠಾರೀಯ, ಡಾ.ರೇಣುಕಾದೇವಿ ಮಿತೇಶ್‍ಕಠಾರೀಯ,ಗುಡುದೊರ್ ವಿಜಯ ಕುಮಾರ್ ಸಮರ್ಥನಂ ಅಂಗವಿಕಲರ ಸಂಸ್ಥೆ ಯ ಸಿಬ್ಬಂದಿಗಳಾದ ಡಿ.ಮೌನೇಶಪ್ಪ( ಶಾಖೆಯ ಮುಖ್ಯಸ್ಥರು),ಕೆ. ಗೌತಮಿ(ಐಟಿ. ಟ್ರೈನರ್), ಎ. ರಾಧಿಕಾರಾಣಿ,ಭೀಮಾರೆಡ್ಡಿ, ರಾಮಾಂಜನೇಯ,ಪವಿತ್ರರಾಜ್, ಕಿರಣ್ ಕುಮಾರ್,ಕಾಶಯ್ಯ ಹೀರೆಮಟ್, ಕಾಡ ಸಿದ್ದ,ಗೌತಮಿ,ಲಕ್ಮೀದೇವಿ ಇನ್ನಿತರರು ಉಪಸ್ಥಿತರಿದ್ದರು.

0 Comments