Ticker

6/recent/ticker-posts

Ad Code

Responsive Advertisement

ಕುಮಾರಪಾರ್ಕ್ ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದ ನೂತನ ರಾಜಗೋಪುರಕ್ಕೆ ಮಹಾಕುಂಭಾಭಿಷೇಕ

 *ಕುಮಾರಪಾರ್ಕ್ ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದ ನೂತನ ರಾಜಗೋಪುರಕ್ಕೆ ಮಹಾಕುಂಭಾಭಿಷೇಕ* 

ಬೆಂಗಳೂರು : ದ್ರಾವಿಡ ದೇವತೆಗಳಲ್ಲಿ ಕುಮಾರಸ್ವಾಮಿಗೆ ಕಂದ, ಮುರುಗ, ಸುಬ್ರಹ್ಮಣ್ಯ ಮುಂತಾದ ಹೆಸರುಗಳಿದ್ದು, ಅತ್ಯುಚ್ಚಸ್ಥಾನ ಹಾಗೂ ಪೂಜೆ ಸಲ್ಲುತ್ತದೆ. ಭಕ್ತಿಪಂಥಿಗಳಾದ ಆಳ್ವಾರುಗಳೂ ಇತರರೂ ತಮ್ಮ ಅನೇಕ ಹಾಡುಗಳಲ್ಲಿ ಮುರುಗ ಸ್ವಾಮಿಯನ್ನು ವಿಪುಲವಾಗಿ ಕೊಂಡಾಡಿದ್ದಾರೆ. ಸ್ಕಾಂದಪುರಾಣ, ಶಿವಮಹಾಪುರಾಣ, ಕಾಳಿದಾಸನ ಕುಮಾರಸಂಭವಗಳು ಈ ದೇವತೆಯ ಮಹಿಮಾವಿಶೇಷವನ್ನು ಸಾರುತ್ತವೆ. 


   ಪಾರ್ವತೀಪುತ್ರನಾದ ಕುಮಾರಸ್ವಾಮಿ. ಷಣ್ಮುಖನೆಂಬ ಹೆಸರೂ ಇದೆ. ಕೃತ್ತಿಕೆಯರು ಇವನ ಸಾಕುತಾಯಿಯರು. ಇವನ ಜನ್ಮವಿಚಾರದಲ್ಲಿ ಅನೇಕ ಕಥೆಗಳಿವೆ. ಮಹಾಭಾರತದ ವನಪರ್ವದಲ್ಲಿನ ಕಾರ್ತಿಕೇಯಸ್ತವ ಇವನಿಗೆ ಐವತ್ತೊಂದು ಹೆಸರುಗಳನ್ನು ಸೂಚಿಸುತ್ತದೆ. ಈಶ್ವರನ ಅಗ್ನಿತತ್ತ್ವದಿಂದ ಸ್ಕಂದನಾಗಿ ಜನಿಸಿ ಆರು ಜನ ಮಾತೆಯರ ಹಾಲು ಕುಡಿದು ಷಾಣ್ಮುತುರನಾಗಿ ಶರವಣದಲ್ಲಿ ಬೆಳೆದವನಿವನು. ಶಕ್ತಿಧರನಾಗಿ ದೇವಸೈನಕ್ಕೆ ಅಧಿಪತಿಯಾಗಿ ಅವರಿಗಾಗಿ ರಾಕ್ಷಸ ಸಂಹಾರ ಮಾಡಿದ. ಕ್ರೌಂಚಪರ್ವತ ಧಾರಣ ಮಾಡಿದ. ನವಿಲು ಈತನ ವಾಹನ.


   ಕಾರ್ತಿಕೇಯನು ಹಿಂದೂಗಳಲ್ಲಿ ಜನಪ್ರಿಯನಾಗಿರುವ ದೇವರಾಗಿದ್ದು, ವಿಶೇಷವಾಗಿ ದಕ್ಷಿಣ ಭಾರತ , ಸಿಂಗಾಪೂರ್, ಮಲೇಷ್ಯಾ, ಮಾರೀಷಸ್‌  ಹಾಗೂ ಶ್ರೀಲಂಕಾದಲ್ಲಿ   ಹಿಂದೂಗಳು ಮತ್ತು ಬೌದ್ಧ ಧರ್ಮೀಯರು ಇಬ್ಬರೂ ಕಾರ್ತಿಕೇಯನ ಆರಾಧಕರು.

ಸುಬ್ರಹ್ಮಣ್ಯ ಸ್ವಾಮಿಯುಯು ದ್ಧ ಮತ್ತು ವಿಜಯದ ದೇವತೆ (ದೇವತೆಗಳ ಸೇನಾಧಿಪತಿ). ನಮ್ಮ ಬೆಂಗಳೂರಿನಲ್ಲಿರುವ   ಪ್ರಖ್ಯಾತ ಶ್ರೀ ಸುಬ್ರಹ್ಮಣ್ಯ ಸ್ವಾಮಿ  ದೇವಸ್ಥಾನಗಳ ಪೈಕಿ ಗಾಂಧಿನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಗೆ ಸೇರುವ ಕುಮಾರಪಾರ್ಕ್ ಪಶ್ಚಿಮ ಬಡಾವಣೆಯಲ್ಲಿ ಆನಂತ ಶ್ರೀ ವಿಭೂಷಿತ ಶ್ರೀ ಶೃಂಗೇರಿ ಜಗದ್ಗುರು ಶ್ರೀ ಶ್ರೀಮದಭಿನವ ವಿದ್ಯಾತೀರ್ಥ ಮಹಾಸ್ವಾಮಿಗಳವರ ಅಮೃತಹಸ್ತದಿಂದ 1962 ರಲ್ಲಿ ಪ್ರತಿಷ್ಠಾಪಿಸಲ್ಪಟ್ಟ ಶ್ರೀವಲ್ಲಿ ದೇವಸೇನಾ ಸಮೇತ ಶ್ರೀ ಸುಬ್ರಹ್ಮಣ್ಯೇಶ್ವರ ಸ್ವಾಮಿ ದೇವಸ್ಥಾನವು ಅಂದಿನಿಂದಲೂ ಈ ಭಾಗದಲ್ಲಿ ಮಾತ್ರವಲ್ಲದೆ ಬೆಂಗಳೂರು ಹಾಗೂ ಸುತ್ತಮುತ್ತಲಿನ ಪ್ರದೇಶವನ್ನೂ ದಾಟಿ, ದೂರದೂರದ ನೆರೆ ಹೊರೆಯ ರಾಜ್ಯಗಳಿಂದಲೂ ಬರುವಂತಹ  ಭಕ್ತಜನರಲ್ಲಿ ತಮ್ಮೆಲ್ಲ ಕಷ್ಟ ಕಾರ್ಪಣ್ಯಗಳನ್ನು ನಿವಾರಿಸಿ, ಬೇಡಿಕೆಗಳನ್ನು ಈಡೇರಿಸುವ ಶ್ರೀ ಕ್ಷೇತ್ರವಾಗಿ ಖ್ಯಾತಿ ಗಳಿಸಿದೆ. 

1959 ರಲ್ಲಿ ಶ್ರೀಗಳಿಂದ ಶಂಕುಸ್ಥಾಪನೆಯ ಮೂಲಕ ವೇದ ಬ್ರಹ್ಮ ಶ್ರೀ ವಿದ್ವಾನ್ ಎಸ್. ಸುಬ್ರಾಯ ಶಾಸ್ತ್ರಿಗಳು ಹಾಗೂ ಅವರ ಧರ್ಮಪತ್ನಿ ಸೌಭಾಗ್ಯವತಿ ಸೀತಮ್ಮ ದಂಪತಿಗಳಿಗೆ ಆದ ದೈವ ಪ್ರೇರಣೆ ಹಾಗೂ ಅವರ ದೃಢ ಸಂಕಲ್ಪದಿಂದಾಗಿ ಸ್ಥಾಪಿತವಾಗಿ, ಇಂದಿಗೂ ಅವರ ವಂಶಸ್ಥರಿಂದಲೇ ಧರ್ಮಬದ್ಧವಾದ  ನಿರ್ವಹಣೆಯಲ್ಲಿ ಎಸ್. ಗಣೇಶ ಶಾಸ್ತ್ರಿಗಳ ಆಡಳಿತದಲ್ಲಿ, ಈಗ ಭಕ್ತರಿಗೆ  ಅಭಯಪ್ರದ ವರಗಳನ್ನು ನೀಡುತ್ತಿರುವ ಕ್ಷೇತ್ರವಾಗಿರುವ ಈ ದೇಗುಲಕ್ಕೆ 60 ನೇ ವಾರ್ಷಿಕೋತ್ಸವದ ಪ್ರಯುಕ್ತ ಪುನಃ ಪ್ರತಿಷ್ಠಾಪನ ಮಹೋತ್ಸವದೊಂದಿಗೆ ನೂತನವಾಗಿ ನಿರ್ಮಿಸಲ್ಪಟ್ಟಿರುವ ವಿಮಾನ ಗೋಪುರ ಹಾಗೂ ರಾಜಗೋಪುರಗಳ ಮಹಾಕುಂಭಾಭಿಷೇಕವನ್ನು ನಿನ್ನೆ ಬುಧವಾರದಂದು ಶ್ರೀ ಶೃಂಗೇರಿ ಶಾರದಾಪೀಠಾಧೀಶ್ವರ  ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ಭಾರತೀ ತೀರ್ಥ ಮಹಾ ಸನ್ನಿಧಾನಂಗಳವರ ಪರಮಾನುಗ್ರಹದಿಂದ, ತತ್ಕರಕಮಲ ಸಂಜಾತರಾದ ಶ್ರೀಮಜ್ಜಗದ್ಗುರು ಶ್ರೀ ಶ್ರೀ ವಿಧುಶೇಖರ ಭಾರತೀ ಸನ್ನಿಧಾನಂಗಳವರು ತಮ್ಮ ಅಮೃತ ಹಸ್ತದಿಂದ ನೆರವೇರಿಸಿದರು.

 ದೇವಾಲಯದ ಸಂಸ್ಥಾಪಕರಾದ ದಿವಂಗತ ಎನ್. ಸುಬ್ರಾಯ  ಶಾಸ್ತ್ರಿಗಳ ಪುತ್ರ ದೇವಾಲಯದ ಮುಖ್ಯಸ್ಥರು ಆಗಿರುವ ಸುವರ್ಣ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಎಸ್.ಗಣೇಶ ಶಾಸ್ತ್ರಿಗಳಿಗೆ ಶ್ರೀಗಳಿಂದ ಆದ ಮಾರ್ಗದರ್ಶನದನ್ವಯ ಶಾಸ್ತ್ರೋಕ್ತವಾಗಿ ಎಲ್ಲಾ ಧಾರ್ಮಿಕ ವಿಧಿ ವಿಧಾನಗಳನ್ನು ಪಾಲಿಸಿ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಿರ್ವಹಿಸಲು ಜಿ. ಸುಬ್ರಾಯ ಶಾಸ್ತ್ರಿಗಳು ಹಾಗೂ ಜಿ. ಗೋಪಾಲಕೃಷ್ಣ ಶಾಸ್ತ್ರಿಗಳವರು ಭಕ್ತರ ಸಹಕಾರದೊಂದಿಗೆ ಮಂಗಳಕರವಾಗಿ ಪೂರ್ಣಗೊಳ್ಳಲು ಸೇವೆ ಸಲ್ಲಿಸಿದರು. ಇವರೊಂದಿಗೆ ಹನುಮೇಶ್ ಬಿ.ಆರ್., ಶಂಕರ ಟಿವಿ ಸಂಸ್ಥೆಯ ಪವನ್ ಕುಮಾರ್ ಆರ್. ರವರೊಂದಿಗೆ ಇನ್ನೂ ಅನೇಕರು ಕೈ ಜೋಡಿಸಿ     ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕ್ರಮಕ್ಕೆ ಆಗಮಿಸಿದ್ದ ಭಕ್ತಾದಿಗಳಿಗೆ ಅಗತ್ಯ ಸೌಕರ್ಯಗಳನ್ನು ಕಲ್ಪಿಸುವ ಮೂಲಕ  ಸೇವೆ ಸಲ್ಲಿಸಿರುತ್ತಾರೆ. ಇದೇ ವೇಳೆ ಬಂದ ಭಕ್ತಾಧಿಗಳಿಗೆ ಅನ್ನಸಂತರ್ಪಣೆಯನ್ನು ಸಹ ಏರ್ಪಡಿಸಲಾಗಿತ್ತು.

Post a Comment

0 Comments

Ad Code

Responsive Advertisement