ಕರ್ನಾಟಕ ಸಾಹಿತ್ಯ ಅಕಾಡೆಮಿ ರೂಪಿಸಿರುವ ತನ್ನ ಮಹತ್ವಾಕಾಂಕ್ಷಿ ಯೋಜನೆ ದೇಸಿ ದರ್ಶನ ಮಾಲೆಯಲ್ಲಿ ಭಾರತೀಯ ಸಂಸ್ಕೃತಿಯಲ್ಲಿ ಹಾಸುಹೊಕ್ಕಾಗಿರುವ ವಿವಿಧ ಪಂಥಗಳ ಕುರಿತು ಕನ್ನಡ ಸಾಹಿತ್ಯಕ್ಕೆ ಅವುಗಳ ಕೊಡುಗೆ ಏನು ಎಂಬುದನ್ನು ಚರ್ಚಿಸುವ ಒಂದು ವಿಶೇಷ ಪ್ರಯತ್ನ .ವಿಶ್ರಾಂತ ಕುಲಪತಿ ಪ್ರೊ.ಮಲ್ಲೇಪುರಂ ಜಿ ವೆಂಕಟೇಶ ಅವರು ಯೋಜನೆಯ ಸಂಪಾದಕರು .
ಭಕ್ತಿ ಸಾಹಿತ್ಯದ ಹಿನ್ನೆಲೆಯಲ್ಲಿ ಕರ್ನಾಟಕದ ಹರಿದಾಸರ ಕುರಿತು ನಾನು ಬರೆದಿರುವ ದಾಸ ಪಂಥ ಕೃತಿ ಲೋಕಾರ್ಪಣೆಗೊಂಡಿದೆ .
ಹಿರಿಯ ಸಾಹಿತಿ ಡಾ. ಎಚ್ ಎಸ್ ವೆಂಕಟೇಶಮೂರ್ತಿ ಕೃತಿ ಬಿಡುಗಡೆ ಮಾಡಿ ಅಭಿನಂದಿಸಿದರು. ಅಕಾಡೆಮಿಯ ಅಧ್ಯಕ್ಷ ಡಾ .ಬಿ ವಿ ವಸಂತಕುಮಾರ್ ಅವರಿಗೆ ಇಂತಹದೊಂದು ಮಾಲೆ ಪ್ರಕಟಗೊಳಿಸಿದ್ದಕ್ಕೆ ಧನ್ಯವಾದಗಳು .
ಆಸಕ್ತರು ಪುಸ್ತಕ ಬೇಕಾದಲ್ಲಿ ನನ್ನನ್ನು ಅಥವಾ ಕರ್ನಾಟಕ ಸಾಹಿತ್ಯ ಅಕಾಡೆಮಿ ಯನ್ನು ಸಂಪರ್ಕಿಸಬಹುದು

0 Comments