Ticker

6/recent/ticker-posts

Ad Code

Responsive Advertisement

ಆದಿವಾಸಿ, ಗ್ರಾಮೀಣದ ಜನತೆ ಆರ್ಥಿಕ ಅಭಿವೃದ್ಧಿಗೆ ಸರ್ಕಾರ ಬದ್ಧ

ಬೆಂಗಳೂರು 07.05.2022: ಆದಿವಾಸಿಗಳು ಮತ್ತು ಗ್ರಾಮೀಣದ ಜನತೆ ಶೈಕ್ಷಣಿಕವಾಗಿ ಜಾಗೃತರಾಗಿ ಆರ್ಥಿಕವಾಗಿ ಸಬಲರಾಗಲು ಸರ್ಕಾರ ಜಾರಿಗೊಳಿಸಿರುವ ಯೋಜನೆಗಳ ಸದುಪಯೋಗಪಡಿಸಿಕೊಳ್ಳಬೇಕು ಎಂದು ಕರ್ನಾಟಕದ ಗೌರವಾನ್ವಿತ ರಾಜ್ಯಪಾಲರಾದ ಶ್ರೀ ಥಾವರ್ ಚಂದ್ ಗೆಹ್ಲೋಟ್ ಅವರು ಹೇಳಿದರು.







ಶನಿವಾರ ನಗರದ ನಿಮ್ಹಾನ್ಸ್ ಕನ್ವೆಷನ್ ಕೇಂದ್ರದಲ್ಲಿ ಫ್ರೆಂಡ್ಸ್ ಆಫ್ ಟ್ರೈಬಲ್ಸ್ ಸೊಸೈಟಿ ವತಿಯಿಂದ ಏಕಲ್ ಶ್ರೀಹರಿ ರಥವನ್ನು ಉದ್ಘಾಟಿಸಿ, ವೇದಿಕೆ ಕಾರ್ಯಕ್ರಮವನ್ನು ಉದ್ದೇಶಿಸಿ ಅವರು ಮತಾನಾಡಿದರು.


ಭಾರತದ ಕೋಟಿಗಟ್ಟಲೆ ಆದಿವಾಸಿಗಳು ಮತ್ತು ಗ್ರಾಮೀಣ ಬಂಧುಗಳನ್ನು ಸಾಮಾಜಿಕವಾಗಿ ಬಲಿಷ್ಠರನ್ನಾಗಿ ಮಾಡುವ ಸಂಕಲ್ಪದೊಂದಿಗೆ ಗ್ರಾಮೀಣ ಪ್ರದೇಶಗಳು "ಏಕಲ್ ವಿದ್ಯಾಲಯ"ವಾಗಿ, ಶೈಕ್ಷಣಿಕವಾಗಿ ಜಾಗೃತರಾಗಿ, ಆರ್ಥಿಕವಾಗಿ ಸಬಲರಾಗುವಂತೆ ಮತ್ತು ಸ್ವಾವಲಂಬಿಗಳಾಗುವುದರ ಜೊತೆಗೆ ಆರೋಗ್ಯ ಪ್ರಜ್ಞೆಯುಳ್ಳವರನ್ನಾಗಿಸುವ ಸಂಕಲ್ಪದೊಂದಿಗೆ ಒಂದು ಕ್ರಾಂತಿಕಾರಿ ಅಭಿಯಾನವನ್ನು ಆರಂಭಿಸಲಾಯಿತು.

ಇಂದು ಒಂದು ಲಕ್ಷ ಹಳ್ಳಿಗಳಲ್ಲಿ, ಆರರಿಂದ ಹದಿನಾಲ್ಕು ವರ್ಷದೊಳಗಿನ ಮೂವತ್ತು ಲಕ್ಷ ಗ್ರಾಮೀಣ ಹುಡುಗ ಹುಡುಗಿಯರು ಒಂದೇ ಶಾಲೆಗಳಲ್ಲಿ ಉತ್ತಮ ಶಿಕ್ಷಣವನ್ನು ಪಡೆಯುತ್ತಿದ್ದಾರೆ ಎಂಬ ಮಾಹಿತಿ ದೊರೆತಿದೆ. ಏಕಲ್ ಗ್ರಾಮೋತ್ಥಾನ ಯೋಜನೆಯಡಿ, 'ಏಕಲ್ ಆನ್‌ವೀಲ್ಸ್' ಎಂದು ಕರೆಯಲ್ಪಡುವ 'ಕಂಪ್ಯೂಟರ್ ಟ್ರೈನಿಂಗ್ ವ್ಯಾನ್‌ಗಳ' ಮೂಲಕ ದೂರದ ಗ್ರಾಮೀಣ ಪ್ರದೇಶದ ಮಕ್ಕಳು ಮತ್ತು ಯುವಕರಿಗೆ ಡಿಜಿಟಲ್ ಶಿಕ್ಷಣವನ್ನು ಪೂರ್ಣಗೊಳಿಸಿರುವ ಪ್ರಮಾಣಪತ್ರಗಳನ್ನು ನೀಡಲಾಗುತ್ತಿದೆ ಎಂದರು.

ಆದಿವಾಸಿ, ಗ್ರಾಮೀಣದ ಜನತೆ ಆರ್ಥಿಕ ಅಭಿವೃದ್ಧಿಗೆ ಸರ್ಕಾರ ಬದ್ಧವಾಗಿದೆ. ಈ ನಿಟ್ಟಿನಲ್ಲಿ ಈಗಾಗಲೇ ಅನೇಕ ಯೋಜನೆಗಳನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಜಾರಿಗೊಳಿಸಿವೆ. ಈ ಯೋಜನೆಗಳನ್ನು ಗ್ರಾಮೀಣದ ಜನತೆ ಸದುಪಯೋಗಪಡಿಸಿಕೊಂಡು ಆರ್ಥಿಕವಾಗಿ ಸದೃಢರಾಗಬೇಕು ಎಂದ ಅವರು, "ವಸುಧೈವ ಕುಟುಂಬಕಂ" ಮತ್ತು ವಿಶ್ವ ಭ್ರಾತೃತ್ವ ಮತ್ತು ವಿಶ್ವ ಶಾಂತಿ ಮತ್ತು ಸಮಾನತೆ ಮತ್ತು ಸೌಹಾರ್ದತೆಯ ತತ್ವವನ್ನು ಪ್ರೇರಪಿಸಬೇಕು ಎಂದು ಕರೆ ನೀಡಿದರು.

ಏಕಲ್ ಅಭಿಯಾನದ ದಕ್ಷಿಣ ವಲಯದ ಅಧ್ಯಕ್ಷರಾದ ಶ್ರೀ ರಮೇಶ್ ಅಗರ್ವಾಲ್, ಏಕ ನಾಯಕ, ಶ್ರೀ ಶ್ಯಾಮ್ ಜಿ ಗುಪ್ತಾ, ಶ್ರೀ ವಿಮಲ್ ಸರೋಗಿ, ಫ್ರೆಂಡ್ಸ್ ಆಫ್ ಟ್ರೈಬಲ್ಸ್ ಸೊಸೈಟಿ ಬೆಂಗಳೂರು ಅಧ್ಯಕ್ಷರು, ಏಕ ಪೆಟ್ರೋನ್ ಶ್ರೀ ಮುರಾರಿ ಲಾಲ್ ಸರೋಗಿ ಮುಂತಾದವರು ಗಣ್ಯರು ಉಪಸ್ಥಿತರಿದ್ದರು.

Post a Comment

0 Comments

Ad Code

Responsive Advertisement