ಬೆಂಗಳೂರಿನ ಜಯನಗರದ 5 ನೇ ಬಡಾವಣೆಯಲ್ಲಿರುವ ನಂಜನಗೂಡುಶ್ರೀರಾಘವೇಂದ್ರ ಸ್ವಾಮಿಗಳಸನ್ನಿಧಿಯಲ್ಲಿ ಪರಮ ಪೂಜ್ಯ 108 ಶ್ರೀ ಸುಬುಧೇಂದ್ರ ತೀರ್ಥ ಶ್ರೀಪಾದಂಗಳವರ ಆದೇಶ ಅನುಗ್ರಹದೊಂದಿಗೆ ಶ್ರೀಮಠದ ಹಿರಿಯ ವ್ಯವಸ್ಥಾಪ ಕರಾದ ಆರ್ , ಕೆ ವಾದೀಂದ್ರ ಆಚಾರ್ಯರ ನೇತೃತ್ವದಲ್ಲಿ ಡಾ. ಎಂ , ಆರ್, ಶ್ರೀ ಕೃಷ್ಣಮೂರ್ತಿಯವರ ಶಿಷ್ಯರಾದ ಶ್ರೀಮತಿ -ಸುನಿತಾ ಮೋಹನ ರಾಜು ಹಾಗೂ ಕುಮಾರಿ -ಜಾಜಿ ರಾಜು ಇವರಿಂದ ಸತತ ಎರಡು ಗಂಟೆಗಳ ಕಾಲ "ಭರತನಾಟ್ಯ" ಕುಸುಮಾಂಜಲಿಯನ್ನು ವಿಶೇಷ ವಾಗಿ ನಡೆಸಿಕೊಟ್ಟರು.
ಈ ಸಂದರ್ಭದಲ್ಲಿ ಶ್ರೀ ರಾಮ್ ಮೋಹನ ರಾಜು ಸಿ, ಆರ್, ಮಾಜಿ ಉಪ ಮಹಾಪೌರರು, ಶ್ರೀ ಗುರು ರಾಘವೇಂದ್ರ ಸ್ವಾಮಿಗಳ ಮಠದ ಮ್ಯಾನೇಜರ್ ಶ್ರೀ ವಾದೀಂದ್ರ ಆಚಾರ್ಯ, ಕಾರ್ಯಕ್ರಮವನ್ನು ಸಂಯೋಜಿಸಿದ ಶ್ರೀ ನಂದ ಕಿಶೋರ ಆಚಾರ್ಯ, ಹಾಗೂ ಕಾರ್ಯಕ್ರಮ ನಿರೂಪಣೆ ಮಾಡಿದ ಕುಮಾರಿ - ದೀಪ್ತಿ ಮತ್ತು ಗುರು ರಾಯರ ಭಕ್ತರು ಹಾಗು ಗಣ್ಯ ವ್ಯಕ್ತಿಗಳು ಭಾಗವಹಿಸಿ ಶ್ರೀಮಠದ ಕಾರ್ಯಕ್ರಮಗಳ ಬಗ್ಗೆ ಮೆಚ್ಚುಗೆಯ ಮಾತುಗಳೊಂದಿಗೆ ಸಂತೋಷ ವ್ಯಕ್ತಪಡಿಸಿದರು.



0 Comments