ಬೆಂಗಳೂರು, ಮೇ 30 (ಕರ್ನಾಟಕ ವಾರ್ತೆ) :ಅಜಾದಿ ಕಾ ಅಮೃತ್ ಮಹೋತ್ಸವವನ್ನು ಆಚರಿಸುತ್ತಿರುವ ಈ ಸಂದರ್ಭದ ಕ್ಷಣಗಣನೆ ಇನ್ನು ಕೇವಲ ಎರಡು ತಿಂಗಳು ಬಾಕಿ ಇರುವಂತೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಮೇ 31 ರಂದು ಶಿಮ್ಲಾದಲ್ಲಿ ಆಯೋಜನೆ ಮಾಡಲಾಗಿರುವ ರಾಷ್ಟ್ರೀಯ ಮಟ್ಟದ “ಗರೀಬ್ ಕಲ್ಯಾಣ್ ಸಮ್ಮೇಳನ” ದಲ್ಲಿ ಪ್ರಮುಖ ಹದಿಮೂರು ಯೋಜನೆಗಳು ಮತ್ತು ಕಾರ್ಯಕ್ರಮಗಳ ಫಲಾನುಭವಿಗಳೊಂದಿಗೆ ರಾಷ್ಟ್ರವ್ಯಾಪ್ತಿಯಲ್ಲಿ ನಡೆಸಲಿದ್ದಾರೆ.
ಬಡ ವರ್ಗದ ಜನರ ಏಳಿಗೆಗಾಗಿಯೇ ರೂಪಿಸಲಾಗಿರುವ ಪ್ರಧಾನಮಂತ್ರಿ ಆವಾಸ್‍ಯೋಜನೆ, ಪ್ರಧಾನ್‍ಮಂತ್ರಿ ಕಿಸಾನ್ ಸಮ್ಮಾನ್ ನಿಧಿ, ಪ್ರಧಾನಮಂತ್ರಿ, ಉಜ್ವಲ್ ಯೋಜನೆ, ಪೋಷಣ್ ಅಭಿಯಾನ, ಪ್ರಧಾನಮಂತ್ರಿ ಮಾತೃ ವಂದನಾ ಯೋಜನೆ ನಗರ ಮತ್ತು ಗ್ರಾಮೀಣ ಸ್ವಚ್ಛ ಭಾರತ್ ಜಲಜೀವನ್ ಮಿಷನ್, ಪ್ರಧಾನ ಮಂತ್ರಿ ಸ್ವ ನಿಧಿ ಯೋಜನೆ, ಒನ್ ನೇಷನ್ ಒನ್ ರೇಷನ್ ಕಾರ್ಡ್, ಪ್ರಧನ ಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆ, ಆಯುಷ್ಮಾನ್ ಭಾರತ್ ಪಿ.ಎಂ. ಜನ ಆರೋಗ್ಯ ಯೋಜನೆ, ಪ್ರಧಾನ ಮಂತ್ರಿ ಮಧುರ ಯೋಜನೆ ಸುಮಾರು ಹದಿನಾರು ಯೋಜನೆಗಳ ಕುರಿತು ನೇರವಾಗಿ ಅವರು ಫಲಾನುಭವಿಗಳೊಂದಿಗೆ ಸಂವಾದ ನಡೆಸಲಿದ್ದಾರೆ. ರಾಷ್ಟ್ರವ್ಯಾಪಿ ಈ ಎಲ್ಲಾ ಯೋಜನೆಗಳು ಹೇಗೆ ನಾಗರೀಕರಿಗೆ ಅನುಕೂಲವಾಗಿವೆ ಎಂದು ತಿಳಿದುಕೊಳ್ಳಲು ಈ ಸಂವಾದ ಸಹಕಾರಿಯಾಗುವ ಜೊತೆಗೆ ಯೋಜನೆಗಳ ಸಾಧಕ, ಭಾದಕಗಳನ್ನು ಅರಿಯಲು ಸಹಕಾರಿಯಾಗಲಿದೆ.
ಈ ಎಲ್ಲಾ ಯೋಜನೆಗಳು ಬಹುಪಾಲು ಬಡಜನರಿಗಾಗಿ ಕಲ್ಪಿಸಿರುವುದಾಗಿರುವುದರಿಂದ ಈ ಸಂವಾದ ಕಾರ್ಯಕ್ರಮಕ್ಕೆ “ಗರೀಬ್ ಕಲ್ಯಾಣ್ ಸಮ್ಮೇಳನ” ಎಂದು ಕರೆಯಲಾಗಿದೆ.
ಸರ್ಕಾರಕ್ಕೆ ಬಡಜನರ ಆಕಾಂಕ್ಷೆಗಳೇನು ಎಂಬುದನ್ನು ತಿಳಿದುಕೊಳ್ಳಲು ಸಾಧ್ಯವಾಗುವುದಲ್ಲದೆ, ಅವರ ಜೀವನವನ್ನು ಇನ್ನೂ ಉತ್ತಮಪಡಿಸಲು ಸರ್ಕಾರವು ಯಾವ ಯೋಜನೆಗಳನ್ನು ಹಮ್ಮಿಕೊಳ್ಳಬಹುದು ಎಂಬುದನ್ನು ಈ ಸಂವಾದವು ಖಚಿತಪಡಿಲಿದೆ. ಹಾಗೂ ಸರ್ಕಾರದ ಯೋಜನೆಗಳು ಮತ್ತು ಕಾರ್ಯಕ್ರಮಗಳನ್ನು ನಾಗರಿಕರೇ ಮೌಲ್ಯಮಾಪನ ಮಾಡಲಿದ್ದಾರೆ. ನಾಗರೀಕರು ಈ ಸಂವಾದ ಕಾರ್ಯಕ್ರಮವನ್ನು ದೂರದರ್ಶನದ ಮೂಲಕ ಮತ್ತು ಪ್ರಾದೇಶಿಕ ಚಾನಲ್‍ಗಳ ಮೂಲಕವಲ್ಲದೇ ಸಾಮಾಜಿಕ ಮಾಧ್ಯಮಗಳಾದ ಯುಟ್ಯೂಬ್, ಫೇಸ್‍ಬುಕ್, ಟ್ವಿಟ್ಟರ್, ಇಸ್ಟಾಗ್ರಾಂ ಮೂಲಕವೂ ವೀಕ್ಷಿಸಲು ಅನುವು ಮಾಡಿಕೊಡಲಾಗುತ್ತದೆ.
0 Comments