Ticker

6/recent/ticker-posts

Ad Code

Responsive Advertisement

*ಮೈಸೂರು ಮಹಾರಾಜರಿಂದ ಶ್ರೀ ಡೊಡ್ಡಮ್ಮದೇವಿಯ ಜಾತ್ರಾ ಮಹೋತ್ಸವ ಉದ್ಘಾಟನೆ*

*ನಾಡಿನ ಪ್ರಜೆಗಳು ಸಂಕಷ್ಟದಲ್ಲಿ ಇದ್ದಾಗ ಪ್ರಜೆಗಳ ಪರವಾಗಿ ರಾಜಮನೆತನ ಹೋರಾಟ ಮಾಡಲಿದೆ- ಶ್ರೀ ಯದವೀರ ಕೃಷ್ಣದತ್ತ ಚಾಮರಾಜ ಒಡೆಯರ್*




ರಾಜಾಜಿನಗರ ವಿಧಾನಸಭಾ ಕ್ಷೇತ್ರದ ,ಶಿವನಗರ ವಾರ್ಡ್ ನಲ್ಲಿರುವ ಅತಿ ಪುರಾತನ ದೇವಸ್ಥಾನವಾದ ಶ್ರೀ ಡೊಡ್ಡಮ್ಮ ದೇವಿಯ ಜಾತ್ರಾ ಮಹೋತ್ಸವ ಕಾರ್ಯಕ್ರಮ.

 ಮೈಸೂರು ಮಹಾ ಸಂಸ್ಥಾನದ ಮನ್ಮಹಾರಾಜದಂತಹ ಶ್ರೀ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ರವರು ಶ್ರೀ ಡೊಡ್ಡಮ್ಮ ದೇವಿಯ ಜಾತ್ರಾ ಮಹೋತ್ಸವಕ್ಕೆ ದೀಪಾ ಬೆಳಗಿಸಿ ಉದ್ಘಾಟನೆ ಮಾಡಿದರು.

ಶ್ರೀ ಡೊಡ್ಡಮ್ಮ ದೇವಿಯ ದೇವಸ್ಥಾನದ ಅಧ್ಯಕ್ಷರಾದ ವಿಶ್ವನಾಥಬಾಬುರವರು ಮತ್ತು ಕೇಂದ್ರ ಜಿಲ್ಲಾ ಬಿ.ಜೆ.ಪಿ.ಅಧ್ಯಕ್ಷರಾದ ಜಿ.ಮಂಜುನಾಥ್, ಮಾಜಿ ಮಹಾನಗರ ಪಾಲಿಕೆ ಸದಸ್ಯರಾದ ಜಿ.ಕೃಷ್ಣಮೂರ್ತಿ ,ಶ್ರೀಮತಿ ಮಂಜುಳ ವಿಜಯಕುಮಾರ್, ಮೋಹನ್ ಕುಮಾರ್,ವಿಜಯಕುಮಾರ್,

ವಿಶ್ವನಾಥಗೌಡರು ದೇವಸ್ಥಾನದ ಆಡಳಿತ ಮಂಡಳಿ ಯವರು ಸಾವಿರಾರು ಡೊಡ್ಡಮ್ಮ ದೇವಿಯ ಭಕ್ತಾಧಿಗಳು ಪಾಲ್ಗೊಂಡಿದ್ದರು.

ಶ್ರೀ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ರವರು ಮಾತನಾಡಿ ಮೈಸೂರು ಸಂಸ್ಥಾನಕ್ಕೆ ವಿಶ್ವದಲ್ಲಿ ತನ್ನದೇ ಆದ ಗೌರವ ಸ್ಥಾನಮಾನವಿದೆ .ಮೈಸೂರು ರಾಜಮನೆತನ ಹಿಂದಿನಿಂದಲೂ ಪ್ರಜೆಗಳ ಹಿತಾರಕ್ಷಣೆಗಾಗಿ ಶ್ರಮಿಸುತ್ತಿದೆ.ಸ್ವಾತಂತ್ರ್ಯ ನಂತರ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ  ರಾಜಮನೆತನ ಆಳ್ವಿಕೆ ಇಲ್ಲದಿರಬಹುದು,ಪ್ರಜೆಗಳು ಸಂಕಷ್ಟದಲ್ಲಿ ಇದ್ದಾಗ ರಾಜಮನೆತನ ಪ್ರಜೆಗಳ ಪರವಾಗಿ ಹೋರಾಟ ಮಾಡಲಿದೆ. ಕರ್ನಾಟಕ ನಾಡಿನ ಅಭಿವೃದ್ದಿಗೆ ಮೈಸೂರು ಸಂಸ್ಥಾನ ತನ್ನದೇ ಆದ ಕೊಡುಗೆ ನೀಡಿದೆ . ನಾಡಿನ ಜನರಿಗೆ ಮೈಸೂರು ಸಂಸ್ಥಾನ ಪ್ರಜೆಗಳಿದ ಕೊಟ್ಟ ಕೊಡುಗೆಯನ್ನ ಪಠ್ಯಕ್ರಮದಲ್ಲಿ ಸೇರಿಸಬೇಕು  ಮುಂದಿನ ಪೀಳಿಗೆ ಅರಿಯಬೇಕು ಎಂದು ಹೇಳಿದರು.

ದೇವಸ್ಥಾನದ ಅಧ್ಯಕ್ಷರಾದ ವಿಶ್ವನಾಥಬಾಬುರವರು ಮಾತನಾಡಿ ಶಿವನಗರವು ಈ ಹಿಂದೆ ಶಿವನಹಳ್ಳಿ ಎಂದು ಕರೆಯುತ್ತಿದ್ದರು.

ಡೊಡ್ಡಮ್ಮ ದೇವಿ ದೇವಸ್ಥಾನವು 200ಕ್ಕಿಂತ ಪುರಾತನವಾದ ದೇವಸ್ಥಾನ .ಪ್ರತಿ ವರ್ಷ ಡೊಡ್ಡಮ್ಮ ದೇವಿ ಜಾತ್ರಾ ಮಹೋತ್ಸವ ಬೆಂಗಳೂರು,ಮೈಸೂರು,ರಾಮನಗರ,ಚನ್ನಪಟ್ಟಣ ವಿವಿಧ ಭಾಗಗಳಿಂದ ಭಕ್ತ ಜನರು ಆಗಮಿಸುತ್ತಾರೆ.

ಡೊಡ್ಡಮ್ಮ ದೇವಿಯ ಮಹಿಮೆ,ಅಪಾರ ಶಕ್ತಿಯ ಕೃಪೆಯಿಂದ ಲಕ್ಷಾಂತರ ಜನರು ಒಳಿತಾಗಿದೆ ಎಂದು ಹೇಳಿದರು.

*ಮೈಸೂರು ಮಹಾರಾಜರಾದ ಶ್ರೀ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ರವರನ್ನ ಶಿವನಗರ ಮುಖ್ಯದ್ವಾರದಿಂದ ನೂರಾರು ಮಹಿಳೆಯರಿಂದ ಪೂರ್ಣಕುಂಭ ಸ್ವಾಗತ ಹಾಗೂ ಚಂಡಮದ್ದಲೆ,ವೀರಗಾಸೆ,ಕಂಸಾಳೆ,ಯಕ್ಷಗಾನ ವೇಷಭೂಷಣ  ಹೊತ್ತ ಕಲಾತಂಡಗಳೊಂದಿಗೆ ಅದ್ದೂರಿಯಾಗಿ ಭವ್ಯ ಮೆರವಣಿಗೆಯಲ್ಲಿ ಬರಮಾಡಿಕೊಳ್ಳಲಾಯಿತು*

Post a Comment

0 Comments

Ad Code

Responsive Advertisement