Ticker

6/recent/ticker-posts

Ad Code

Responsive Advertisement

ಕಾಶ್ಮೀರದಲ್ಲಿ ಶಾರದ ದೇಗುಲ ಪುನರ್ನಿಮಾಣ ಟ್ರಸ್ಟ್

ಆದಿ ಗುರು ಶಂಕರಾಚಾರ್ಯರು ಸನಾತನ ಧರ್ಮ ರಕ್ಷಣೆಗಾಗಿ ಭಾರತದ ನಾಲ್ಕು ದಿಕ್ಕುಗಳಲ್ಲಿಯೂ ನಾಲ್ಕು ಶಾರದಪೀಠಗಳನ್ನು ಸ್ಥಾಪಿಸಿದರು. ದಕ್ಷಿಣದಲ್ಲಿ ಶೃಂಗೇರಿ ಪೀಠ, ಪೂರ್ವದಲ್ಲಿ ಪುರಿ, ಪಶ್ಚಿಮದಲ್ಲಿ ದ್ವಾರಕ ಮತ್ತು ಉತ್ತರದಲ್ಲಿ ಕಾಶ್ಮೀರದಲ್ಲಿ ಶಾರದ ಪೀಠ. ಈ ಪೀಠಗಳು ಸನಾತನ ಧರ್ಮ ರಕ್ಷಣೆ ಮತ್ತು ಮಾರ್ಗದರ್ಶನದ ಕೆಲಸ ಈಗಲೂ ಮಾಡುತ್ತಿವೆ.

ಉತ್ತರದ ಶಾರದ ದೇವಾಲಯ ಶಿಥಿಲಾವಸ್ಥೆಗೆ ಮುಟ್ಟಿದೆ. ಈಗ ಭೌಗೋಳಿಕವಾಗಿ ಪಾಕಿಸ್ಥಾನದ ಆಕ್ರಮಿತ ಕಾಶ್ಮೀರದಲ್ಲಿದೆ. ರವೀಂದ್ರಪಂಡಿತರವರು ಇದರ ಪುನರ್ನಿಮಾಣಕ್ಕಾಗಿ ಒಂದು ಟ್ರಸ್ಟ್ ರಚಿಸಿದ್ದು ಅದರಲ್ಲಿ 3 ಜನ ಹಿಂದೂ ಸದಸ್ಯರು, 2 ಸಿಖ್ಖರು, 1 ಮುಸ್ಲಿಂ ಟ್ರಸ್ಟೀಗಳು ಇದ್ದಾರೆ. ಜನರಿಂದ ತನು-ಮನ-ಧನ ಸಂಗ್ರಹಿಸಿ ದೇವಾಲಯ ನಿರ್ಮಾಣವಾಗಲಿದೆ.

ನಮ್ಮ ಕರ್ನಾಟಕದ ಶೃಂಗೇರಿ ಮಠದಿಂದ ಹಣಕಾಸಿನ ಸಹಾಯ ಮತ್ತು ಇತರೆ ಸಹಕಾರ ನೀಡಲು ಮುಂದೇ ಬಂದಿದೆ. ಶಾರದ ದೇವಾಲಯಕ್ಕೆ ಅಗತ್ಯವಾದ ಶಿಲಾಸ್ಥಂಭಗಳು, ವಿಗ್ರಹಗಳನ್ನು ಕಡಬ್ಬದ ಬಳಿ ಒಂದು ಗ್ರಾಮದಲ್ಲಿ ತಯಾರಾಗುತ್ತಿದ್ದು ಪೂರ್ಣಗೊಂಡ ನಂತರ ಶಾರದ ದೇವಾಲಯದ ಬಳಿಗೆ ಸಾಗಿಸಲಾಗುವುದು. ಕುಪ್ಪುವಾರ ನಗರಕ್ಕೆ ಈ ದೇವಾಲಯ ಸಮೀಪದಲ್ಲಿದೆ. ವಿಶೇಷವಾಗಿ ಆ ಭಾಗದ ಮುಸ್ಲಿಂ ಸಮುದಾಯದ ಜನರು ಸಂಪೂರ್ಣ ಸಹಕಾರ ನೀಡುತ್ತಿದ್ದಾರೆ.

ಭಾರತ ಸರ್ಕಾರ ಮತ್ತು ಭಾರತದ ಸೇನೆಯು ನಮಗೆ ಸಹಕಾರ ನೀಡುತ್ತಿದೆ. ಇದೇ ವರ್ಷ ದೇವಾಲಯ ಪುನರ್ನಿಮಾಣಗೊಂಡು ಲೋಕಾರ್ಪಣೆಗೆ ಸಾಧ್ಯವಾಗಲಿದೆ ಎಂದು ರವೀಂದ್ರ ಪಂಡಿತರವರು ಬೆಂಗಳೂರು ಪ್ರಸ್‍ಕ್ಲಬ್‍ನಲ್ಲಿ ಪ್ರಸ್‍ಮೀಟ್ ಮಾಡಿ ಮಾಹಿತಿ ನೀಡಿದರು.

                                                                                                                             - ಕೆ. ರಾಜಣ್ಣ ಮಾಲೂರು


Post a Comment

0 Comments

Ad Code

Responsive Advertisement